ನವದೆಹಲಿ: ಏರ್‍ಟೆಲ್ ಬ್ರಾಡ್‍ಬ್ಯಾಂಡ್ ಗ್ರಾಹಕರಿಗೆ ಗುಡ್‍ನ್ಯೂಸ್. ಇನ್ನು ಮುಂದೆ ಬಳಕೆ ಮಾಡದೇ ಇರುವ ಬ್ರಾಡ್ ಬ್ಯಾಂಡ್ ಡೇಟಾವನ್ನು ಮುಂದಿನ ತಿಂಗಳಿಗೆ ಕ್ಯಾರಿ ಮಾಡಬಹುದಾದ ಸೌಲಭ್ಯವನ್ನು ಏರ್ ಟೆಲ್ ಘೋಷಿಸಿದೆ.
ರೋಲ್‍ಓವರ್ ಸೌಲಭ್ಯ ಎಂಬ ಹೊಸ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳುವ ಮೂಲಕ ತಾವು ಬಳಕೆ ಮಾಡದೇ ಇರುವ ಡೇಟಾವನ್ನು ಮುಂದಿನ ತಿಂಗಳಿಗೆ ಕ್ಯಾರಿ ಮಾಡುವ ಅವಕಾಶವನ್ನು ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಭಾರತಿ ಏರ್‍ಟೆಲ್ ಕಂಪೆನಿಯ ಸಿಇಒ ಜಾರ್ಜ್ ಮ್ಯಾಥನ್, ಹೊಸ ಸೌಲಭ್ಯವು ಮನೆಯಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಉತ್ತಮವಾದ ಕೊಡುಗೆಯಾಗಲಿದೆ ಎಂದು ತಿಳಿಸಿದ್ದಾರೆ.
Advertisement
ಈ ಸೌಲಭ್ಯದ ಮೂಲಕ ಗ್ರಾಹಕರು ಸುಮಾರು 1,000 ಜಿಬಿ ವರೆಗಿನ ಡೇಟಾವನ್ನು ಕ್ಯಾರಿ ಮಾಡಬಹುದಾಗಿದೆ. ಗ್ರಾಹಕರು ತಮ್ಮ ಖಾತೆಯಲ್ಲಿನ ಡಾಟಾ ಬ್ಯಾಲೆನ್ಸ್ ಕುರಿತ ಮಾಹಿತಿಯನ್ನು ಮೈ ಏರ್‍ಟೆಲ್ ಆಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಬ್ರಾಡ್ ಬ್ಯಾಂಡ್ ಬಳಕೆ ದಾರರಿಗೆ ಈ ಯೋಜನೆ ಮಂಗಳವಾರದಿಂದಲೇ ಅನ್ವಯವಾಗುತ್ತದೆ, ಅದರಲ್ಲೂ ಏರ್‍ಟೆಲ್ ನ ಉನ್ನತ ಮಟ್ಟದ ವಿ-ಫೈಬರ್ ನೆಟ್‍ವರ್ಕ್ ಅಳವಡಿಸಿಕೊಂಡಿರುವ ಗ್ರಾಹಕರಿಗೆ ಈ ಸೌಲಭ್ಯ ಹೆಚ್ಚು ಉಪಯುಕ್ತವಾಗಲಿದೆ. ಇನ್ನೂ ಏರ್ ಟೆಲ್ ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಕಳೆದ ಜುಲೈ ತಿಂಗಳಿನಲ್ಲಿ ರೋಲ್‍ಓವರ್ ಸೌಲಭ್ಯವನ್ನು ನೀಡಿತ್ತು.
Advertisement
ದೇಶಾದ್ಯಂತ 2.1 ಮಿಲಿಯನ್ ಗ್ರಾಹಕರು ಏರ್‍ಟೆಲ್ ಬ್ರಾಡ್ ಬ್ಯಾಂಡ್ ನ್ನು ಬಳಕೆ ಮಾಡುತ್ತಿದ್ದಾರೆ. ದೇಶದಲ್ಲಿ ಅತ್ಯಂತ ಹೆಚ್ಚು ಬ್ರಾಡ್ ಬ್ಯಾಂಡ್ ಗ್ರಾಹಕರನ್ನು ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಏರ್‍ಟೆಲ್ ಪಡೆದುಕೊಂಡಿದೆ. ಏರ್‍ಟೆಲ್ ವಿ ಫೈಬರ್ ವಿಶ್ವದ 87 ನಗರಗಳಲ್ಲಿ 100 ಎಂಬಿಬಿಎಸ್ ವೇಗದ ಡೇಟಾ ಸೇವೆಯನ್ನು ನೀಡುತ್ತಿದೆ.
Advertisement
Advertisement