ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೋ ಪ್ರಯಾಣಿಕರೇ ಎಚ್ಚರವಾಗಿರಿ. ಯಾಕೆಂದರೆ ಏರ್‌ಪೋರ್ಟ್ ನಲ್ಲಿ ಓಲಾ ಕ್ಯಾಬ್‍ನಿಂದ ಮಹಾದೋಖಾ ನಡೆಯುತ್ತಿದೆ.
ಕತ್ರಿಗುಪ್ಪೆ ನಿವಾಸಿ ನಿವೃತ್ತ ವಿಜ್ಞಾನಿ ನಾಗೇಂದ್ರ, ಪತ್ರಕರ್ತೆಯಾಗಿರುವ ಚೂಡಾಮಣಿ ಅನ್ನೋರು, ಕಳೆದ 17 ರಂದು ರಾತ್ರಿ 9 ಗಂಟೆ ಸುಮಾರಿಗೆ ಸ್ನೇಹಿತರೊಬ್ಬರನ್ನು ಕಳಸಿಕೋಡುವುದಕ್ಕೆ ಏರ್‌ಪೋರ್ಟ್ ಗೆ ಹೋಗಿದ್ದರು. ಕಳುಹಿಸಿಕೊಟ್ಟ ನಂತರ ಸುಮಾರು 10 ಗಂಟೆಗೆ ಓಲಾ ಕ್ಯಾಬ್ ಬುಕ್ ಮಾಡಿದ ದಂಪತಿ, ಕಾರು ಹತ್ತಿ ಹೋಗುತ್ತಿದ್ದರು.
Advertisement
Advertisement
ನಾವು ಕ್ಯಾಬ್ ಹತ್ತಿ ಐದು ನಿಮಿಷ ಆಗಿತ್ತಷ್ಟೇ. ಅಷ್ಟರಲ್ಲಿ ಮಂಕಿ ಕ್ಯಾಪ್ ಹಾಕಿದ್ದ ಚಾಲಕ, ಮುಖ್ಯ ರಸ್ತೆ ಬಿಟ್ಟು ಬೇಗೂರು ರಸ್ತೆಯ ನಿರ್ಜನ ಪ್ರದೇಶದ ಡೆಂಜರ್ ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸಿದ್ದ. ತಕ್ಷಣ ಗಾಬರಿಗೊಂಡ ನಾವು ಮೈನ್ ರೋಡ್‍ನಲ್ಲಿ ಹೋಗಿ, ಇಲ್ಲ ಅಂದರೆ ನಮ್ಮನ್ನ ವಾಪಸ್ ಏರ್‌ಪೋರ್ಟ್ ಗೆ ಬಿಟ್ಟುಬಿಡಿ ಅಂತ ಮನವಿ ಮಾಡಿಕೊಂಡಿದ್ದೇವು. ಆದರೆ ಕ್ಯಾಬ್ ಚಾಲಕ ಮಾತ್ರ ಡೋಂಟ್ ಕೇರ್ ಅನ್ನೋ ರೀತಿ ವರ್ತಿಸಿ, ಮೈನ್ ರೋಡ್‍ನಲ್ಲಿ ಹೋದರೆ ಟೋಲ್ ಕಟ್ಟಬೇಕು. ಸುಮ್ಮನೆ ಕುಳಿತುಕೊಳ್ಳಿ ಅಂತ ದಂಪತಿ ಜೊತೆ ಜೋರು ಗಲಾಟೆ ಮಾಡಿದ್ದಾನೆ ಎಂದು ಚೂಡಾಮಣಿ ಹೇಳಿದ್ದಾರೆ.
Advertisement
Advertisement
ಓಲಾ ಕ್ಯಾಬ್ ಚಾಲಕನ ವರ್ತನೆಯಿಂದ ಭಯಗೊಂಡ ನಾವು ಅಲ್ಲೆ ಇದ್ದ ಏಮರ್ಜನ್ಸಿ ಬಟನ್ ಒತ್ತಿ ಸಹಾಯಕ್ಕೆ ಅಂಗಲಾಚಿದೆವು. ಆದರೆ ಆ ಕಡೆಯಿಂದ ಮಾತಾಡಿದ ಅಧಿಕಾರಿ, ಚಾಲಕ ವರ್ತನೆಯನ್ನು ಸಮರ್ಥಿಸಿಕೊಂಡು ಫೋನ್ ಕಟ್ ಮಾಡಿದ್ದ. ಇದರಿಂದ ಇನ್ನಷ್ಟು ಗಾಬರಿಗೊಂಡಿದ್ದು, ಆ ಕಗ್ಗತ್ತಲಲ್ಲೇ ಕಾರು ಇಳಿದು ರಸ್ತೆಯಲ್ಲಿ ಬರುತ್ತಿದ್ದ ಬಸ್ ಹತ್ತಿ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದೇವೆ. ಹಾಗೇ ಬಸ್ಸಿನಲ್ಲಿ ತಮ್ಮ ಮನೆಗೆ ಬರುವ ಹೊತ್ತಿಗೆ, ಓಲಾ ಕ್ಯಾಬ್‍ನಿಂದ ನಿಮ್ಮನ್ನು 11 ಗಂಟೆ 8 ನಿಮಿಷಕ್ಕೆ ಮನೆಗೆ ಡ್ರಾಪ್ ಮಾಡಲಾಗಿದೆ ಅಂತ ಮಸೇಜ್ ಮಾಡಿ 861 ರೂಪಾಯಿ ಹಣ ನೀಡುವಂತೆ ಬಿಲ್ ಕಳುಹಿಸಿದ್ದರು. ಓಲಾದವರು ಟೋಲ್ ಹಣ ಉಳಿಸಿಕೊಳ್ಳೋಕೆ ಸಣ್ಣ ಪುಟ್ಟ ನಿರ್ಜನ ಪ್ರದೇಶದ ಡೆಂಜರ್ ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ನಾಗೇಂದ್ರ ಆರೋಪಿಸಿದ್ದಾರೆ.
ಈ ಬಗ್ಗೆ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜವಾಗಿಲ್ಲ. ಬೆಂಗಳೂರು ಗೊತ್ತಿರುವ ಪ್ರಯಾಣಿರಿಗೆ ಈ ರೀತಿ ವಂಚನೆ ಮಾಡುತ್ತಾರೆ ಅಂದರೆ ಸಿಟಿಗೆ ಹೊಸದಾಗಿ ಬರೋ ಪ್ರಯಾಣಿಕರ ಪರಿಸ್ಥಿತಿ ಏನು.? ನಿರ್ಜನ ಪ್ರದೇಶದ ಡೇಂಜರ್ ರಸ್ತೆಯಲ್ಲಿ ಟ್ರಾವೆಲ್ ಮಾಡಿ ಏನಾದ್ರು ಹೆಚ್ಚು ಕಡಿಮೆ ಆದ್ರೆ ಯಾರು ಜವಾಜ್ದಾರರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv