ಬೆಂಗಳೂರು: ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ರಸ್ತೆಯಲ್ಲಿ ಸ್ವಂತ ವಾಹನದಲ್ಲಿ ಓಡಾಡೋರು ಜೇಬಿನಲ್ಲಿ ಸ್ವಲ್ಪ ಜಾಸ್ತಿನೆ ಹಣ ಇಟ್ಟುಕೊಳ್ಳಬೇಕಿದೆ. ಯಾಕೆಂದರೆ ಏಪ್ರಿಲ್ 1 ರಿಂದ ಟೋಲ್ ದರ ಏರಿಕೆಯಾಗಿದ್ದು, ಜೇಬಿಗೆ ಕತ್ತರಿ ಹಾಕಲು ಸಜ್ಜಾಗಿದೆ.
ಹೌದು. ಟೋಲ್ ದರ ಶೇ.5ರಷ್ಟು ಏರಿಕೆ ಕಂಡಿದೆ. ಮೊದಲೇ ಟೋಲ್‍ನಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಇದೆ. ಹೀಗಿರುವಾಗ ನವಯುವ ಟೋಲ್‍ನವರು ಏಕಾಏಕಿ ಸುಂಕವನ್ನ ಹೆಚ್ಚಳ ಮಾಡಿದ್ದು, ಮಧ್ಯರಾತ್ರಿಯಿಂದಲೇ ಸವಾರರಿಗೆ ದರ ಏರಿಕೆಯ ಶಾಕ್ ನೀಡಿದೆ.
Advertisement
Advertisement
ಅಷ್ಟೇ ಅಲ್ಲದೆ ಇದೂವರೆಗೆ ನೀವು ಏರ್‌ಪೋರ್ಟ್‌ಗೆ ಎಂಟ್ರಿಯಾಗುವಾಗ ದರ ಪಾವತಿ ಮಾಡಬೇಕಾಗಿರಲಿಲ್ಲ. ವಾಪಸ್ ಬರುವಾಗ ದರ ಪಾವತಿಸಬೇಕಾಗಿತ್ತು. ಇದರಲ್ಲೂ ಈಗ ಬದಲಾವಣೆ ಮಾಡಲಾಗಿದ್ದು. ಎಂಟ್ರಿಯಾಗುತ್ತಲೇ ಟೋಲ್ ಪಾವತಿಸಬೇಕಾಗಿದೆ.
Advertisement
ಟೋಲ್ ದರ: ಕಾರುಗಳಿಗೆ 5 ರೂಪಾಯಿ ಹೆಚ್ಚಳವಾಗಿದ್ದು, 126 ರೂ. ಇದ್ದ ದರ 130 ಕ್ಕೆ ಏರಿಕೆಯಾಗಿದೆ. ಮಿನಿ ಬಸ್ 190 ಇದ್ದಿದ್ದು, 200 ರೂ.ಗೆ ಏರಿಕೆಯಾಗಿದೆ. ಬಸ್ ಲಾರಿ 380 ರೂ. ಇದ್ದಿದ್ದು, 405 ರೂ.ಗೆ ಏರಿಕೆಯಾದರೆ, ಭಾರೀ ವಾಹನದ ದರ 580 ರೂ. ಇದ್ದಿದ್ದು, 610 ರೂ. ಗೆ ಏರಿಕೆಯಾಗಿದೆ ಎಂದು ವಾಹನ ಸವಾರ ಕೇಶವ್ ಹೇಳಿದ್ದಾರೆ.