ವಾಷಿಂಗ್ಟನ್: ವಿಮಾನಗಳಲ್ಲಿ ಗರ್ಭಿಣಿಯರು ಮಕ್ಕಳಿಗೆ ಜನ್ಮನೀಡುವಂತಹ ಹಲವು ಘಟನೆಗಳನ್ನು ಈ ಹಿಂದೆ ಕೇಳಿದ್ದೇವೆ. ಇಲ್ಲೊಬ್ಬರಿಗೆ ಏರ್‌ಲೈನ್ ಸಿಬ್ಬಂದಿಯ ಸಹಾಯದಿಂದ ವಿಮಾನ ಹಾರಾಟದ ಸಂದರ್ಭದಲ್ಲೇ ಹೆರಿಗೆ ನಡೆಸಲಾಗಿದೆ.
ಅಮೆರಿಕದ ಫ್ರಾಂಟಿಯರ್ ಏರ್‌ಲೈನ್ಸ್ ಫ್ಲೈಟ್ ಅಟೆಂಡೆಂಟ್ ಡಯಾನಾ ಗಿರಾಲ್ಡೋ ಕೊಲೊರಾಡೋದಿಂದ ಫ್ಲೋರಿಡಾಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಗರ್ಭಿಣಿಯ ಹೆರಿಗೆ ನಡೆಸಲು ಸಹಾಯ ಮಾಡಿ ಭಾರೀ ಪ್ರಶಂಸೆಗೆ ಒಳಗಾಗಿದ್ದಾರೆ. ಇದನ್ನೂ ಓದಿ: ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ
Advertisement
Advertisement
ಸಾಮಾಜಿಕ ಮಾಧ್ಯಮದಲ್ಲಿ ಘಟನೆ ಬಗ್ಗೆ ತಿಳಿಸಿದ ಫ್ರಾಂಟಿಯರ್ ಏರ್‌ಲೈನ್ಸ್, ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒರ್ಲ್ಯಾಂಡೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೆಡೆಗೆ ಪ್ರಯಾಣಿಸುತ್ತಿರುವಾಗ, ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಕೆಯನ್ನು ಪ್ರಯಾಣದ ಮಧ್ಯದಲ್ಲಿ ಯಾವುದೇ ಚಿಕಿತ್ಸಾಲಯಕ್ಕೆ ಒಯ್ಯಲಾಗದೇ, ವಿಮಾನದಲ್ಲಿಯೇ ಹೆರಿಗೆ ನಡೆಸಲಾಯಿತು ಎಂದು ತಿಳಿಸಿದೆ. ಇದನ್ನೂ ಓದಿ: ಶಿವಲಿಂಗದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ AIMIM ನಾಯಕ ಅರೆಸ್ಟ್
Advertisement
Advertisement
ಗರ್ಭಿಣಿಗೆ ಅನಿರೀಕ್ಷಿತ ಹೆರಿಗೆ ನೋವು ಕಾಣಿಸಿಕೊಂಡಾಗ ನಮ್ಮ ಸಿಬ್ಬಂದಿ ಡಯಾನಾ ಆಕೆಯನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿ, ಹೆರಿಗೆ ನಡೆಸಲು ಸಹಾಯ ಮಾಡಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಫ್ರಾಂಟಿಯರ್ ಏರ್‌ಲೈನ್ಸ್ ತಿಳಿಸಿದೆ.
ಘಟನೆ ಬಗ್ಗೆ ನೆಟ್ಟಿಗರು ಹೆರಿಗೆಗೆ ಸಹಾಯ ಮಾಡಿದ ಡಯಾನಾ ಅವರನ್ನು ಶ್ಲಾಘಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಒಬ್ಬ ಫ್ಲೈಟ್ ಅಟೆಂಡೆಂಟ್ ತೆಗೆದುಕೊಂಡ ನಿರ್ಧಾರ, ಜ್ಞಾನ ಹಾಗೂ ಅವರ ಸಹಾಯಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.