ನವದೆಹಲಿ: ಭಾರತದಲ್ಲಿ ಆಟೋರಿಕ್ಷಾಗಳಿಗಿಂತ ವಿಮಾನಯಾನ ದರವೇ ಅಗ್ಗ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.
ಉತ್ತರ ಪ್ರದೇಶ ಗೋರಖ್‍ಪುರದಲ್ಲಿ ಮಾತನಾಡಿದ ಅವರು, ತಮ್ಮ ಹೇಳಿಕೆಗೆ ಸಮರ್ಥನೆಯನ್ನು ನೀಡಿದ್ದಾರೆ ಆಟೋ ಪ್ರಯಾಣದಲ್ಲಿ ಪ್ರತಿ ಕಿಮೀ ಗೆ ಕನಿಷ್ಟ 5 ರೂ. ತೆಗೆದುಕೊಳ್ಳಲಾಗುತ್ತದೆ. ಆದರೆ ವಿಮಾನಯಾನದಲ್ಲಿ ಪ್ರತಿ ಪ್ರಯಾಣಿಕನಿಗೆ 1 ಕಿಮೀಗೆ 4 ರೂ. ಮಾತ್ರ ತೆಗೆದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.
Advertisement
Today airfare is less than that of an auto-rickshaw. You'll ask how is that possible? When two people take an auto-rickshaw they pay fare of Rs 10 which means they're charged Rs 5/km but when you go by air you are charged Rs 4/km: Jayant Sinha, MoS Civil Aviation (03.09.2018) pic.twitter.com/orbwOvdDLJ
— ANI UP/Uttarakhand (@ANINewsUP) September 4, 2018
Advertisement
ತಮ್ಮ ಹೇಳಿಕೆ ಕುರಿತು ದೇಶಾದ್ಯಂತ ಚರ್ಚೆ ಆರಂಭವಾಗುತ್ತಿದಂತೆ ಸ್ಪಷ್ಟನೆ ನೀಡಿರುವ ಸಿನ್ಹಾ, ಭಾರತದ ವಿಮಾನಯಾನ ಸೇವೆಗಳು ಎಷ್ಟು ಅಗ್ಗ ಎಂಬುವುದನ್ನು ವಿವರಿಸಲು ಈ ಹೋಲಿಕೆ ಮಾಡಲಾಗಿದೆ. ವಿಶ್ವ ವಿಮಾನಯಾನ ಸೇವೆಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕಡಿಮೆ ದರ ನಿಗದಿಯಾಗಿದೆ. ಆದರೆ ನಾನು ನಿಮಗೇ ಕಡಿಮೆ ದೂರದ ಪ್ರಯಾಣಕ್ಕೆ ಈ ಸೇವೆ ಬಳಸಿ ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.
Advertisement
ಭಾರತ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿದ್ದರೂ, ವಿಮಾನಯಾನ ಸೇವೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಭಾರತದ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ಜೆಟ್ ಏರ್‍ವೇಸ್ ಸಂಸ್ಥೆಗಳು ನಷ್ಟ ಅನುಭವಿಸಿದ ಸಂದರ್ಭದಲ್ಲೇ ಹೇಳಿಕೆ ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
#WATCH MoS Civil Aviation Jayant Sinha clarifies,"So on a per km basis our air fare is among lowest in the world. I am not implying you use planes for short distances, that's not the point of the comparison, it's just to be able to demonstrate how affordable our air fares are." pic.twitter.com/ofH7AfBwep
— ANI (@ANI) September 4, 2018