ಕಾರವಾರ: ದೇಶದ ವಿಮಾನ ವಾಹಕ ನೌಕೆಯಾಗಿರುವ INS ವಿಕ್ರಮಾದಿತ್ಯ (INS Vikramaditya) ಯುದ್ಧ ಹಡಗು ಈ ತಿಂಗಳ ಕೊನೆಯಲ್ಲಿ ಕಾರವಾರದ (Karwar) ಕದಂಬ ನೌಕಾ ನೆಲೆಯಿಂದ ಯುದ್ಧ ಸಾಮರ್ಥ್ಯ ಪರೀಕ್ಷೆಗಾಗಿ ಯಾನ ಪ್ರಾರಂಭಿಸಲಿದೆ. ಮಳೆಗಾಲಕ್ಕೂ ಮೊದಲು ಐಎನ್‌ಎಸ್ ವಿಕ್ರಮಾದಿತ್ಯ ಹಡಗು ಹಾಗೂ ಐಎನ್‍ಎಸ್ ವಿಕ್ರಾಂತ್ ಹಡಗಿನ ಯುದ್ಧ ಸಾಮರ್ಥ್ಯವನ್ನು ಭಾರತೀಯ ನೌಕಾಪಡೆ ಪರೀಕ್ಷಿಸಲಿದೆ.
Advertisement
ಈ ಹಿಂದೆ ವಿಕ್ರಮಾದಿತ್ಯ ಹಡಗನ್ನು ದುರಸ್ತಿ ಕಾರ್ಯಕ್ಕಾಗಿ ಕಾರವಾರದ ಕದಂಬ ನೌಕಾನೆಲೆಗೆ ತರಲಾಗಿತ್ತು. ಕಳೆದ ವರ್ಷ ದುರಸ್ತಿ ಕಾರ್ಯ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಹೀಗಾಗಿ ಇದರ ದಕ್ಷತೆ, ಕ್ಷಮತೆಯನ್ನು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿ ಇದರ ಪರೀಕ್ಷಾರ್ಥ ವರದಿಯನ್ನು ರಕ್ಷಣಾ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಈ ವರದಿ ಆಧರಿಸಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ಹಡಗಿನಲ್ಲಿ ರಷ್ಯಾದ ಮಿಗ್ 29ಕೆ (MiG-29K) ವಿಮಾನಗಳನ್ನು ಸಹ ಹೊಂದಿದ್ದು ಈ ವರ್ಷದ ಅಂತ್ಯದ ವೇಳೆಗೆ ಈ ವಿಮಾನ ವಾಹಕ ನೌಕೆಗಳನ್ನು ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದ ಆಚೆ ಭದ್ರತೆಗೆ ನಿಯೋಜನೆಗೊಳ್ಳಲಿದೆ. ಇದನ್ನೂ ಓದಿ: ಕೇರಳದಲ್ಲಿ ಹಕ್ಕಿ ಜ್ವರ – ಗಡಿಯಲ್ಲಿ ಕಟ್ಟೆಚ್ಚರ
Advertisement
Advertisement
ಯುದ್ಧ ನೌಕೆ ನಿಲುಗಡೆಗೆ ಜಟ್ಟಿ ಸಮಸ್ಯೆ:
ಐಎನ್‍ಎಸ್ ವಿಕ್ರಮಾದಿತ್ಯ ಹಾಗೂ ಐಎನ್‍ಎಸ್ ವಿಕ್ರಾಂತ್ ವಿಮಾನ ವಾಹಕ ನೌಕೆಯನ್ನು ಪೂರ್ವ ಸಮುದ್ರ ಭಾಗದಲ್ಲಿ ನಿಲ್ಲಿಸಲು ಜಟ್ಟಿ (ಹಡಗು ನಿಲ್ಲಿಸುವ ಸ್ಥಳ) ಸಮಸ್ಯೆಗಳಿದ್ದು ಈ ಕಾರಣದಿಂದ ಈ ಎರಡು ನೌಕೆಗಳನ್ನು ನಿಲ್ಲಿಸಲು ಪಶ್ಚಿಮ ಕರಾವಳಿಯ ನೌಕಾನೆಲೆಯನ್ನು ಅವಲಂಭಿಸಿದೆ. ಈ ಕಾರಣದಿಂದ ಪೂರ್ವ ಸಮುದ್ರ ಭಾಗದ ನೌಕಾ ನೆಲೆಯಾದ ವಿಶಾಖಪಟ್ಟಣಂನಲ್ಲಿ ಬೃಹತ್ ಯುದ್ಧ ಯಂತ್ರಗಳನ್ನು ನಿಲ್ಲಿಸಲು ಭರದ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ಭಾರತೀಯ ನೌಕಾಪಡೆಯು ಅಂಡಮಾನ್, ನಿಕೋಬಾರ್ ದ್ವೀಪಗಳ ಪ್ರದೇಶವಾದ ಕ್ಯಾಂಪ್ ಬೆಲ್ ಕೊಲ್ಲಿ ಹಾಗೂ ಉತ್ತರ ಭಾಗದ ಚೆನ್ನೈನ ಕಟ್ಟುಪಲ್ಲಿಯಲ್ಲಿನ ಬಂದರಿನಲ್ಲಿ ವಿಮಾನ ವಾಹಕ ಹಡಗನ್ನು ನಿಲ್ಲಿಸಲು ಅನುವಾಗುವಂತೆ ಜಟ್ಟಿಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ನೌಕಾದಳ ನಿರ್ಧರಿಸಿದೆ. ಇದನ್ನೂ ಓದಿ: 35 ಪ್ರಯಾಣಿಕರನ್ನು ಬಿಟ್ಟು ನಿಗದಿತ ಸಮಯಕ್ಕೂ ಮೊದಲೇ ಹಾರಿತು ವಿಮಾನ
Advertisement
ಜನವರಿ ಅಂತ್ಯದ ವೇಳೆಗೆ ಈ ವಿಮಾನ ವಾಹಕ ಯುದ್ಧ ಹಡಗುಗಳು ಕದಂಬ ನೌಕಾನೆಲೆಯಿಂದ ಸಮುದ್ರ ಭಾಗದಲ್ಲಿ ಭದ್ರತೆಗೆ ತೆರಳುವ ಸಾಧ್ಯತೆ ಇದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k