ನವದೆಹಲಿ: ಏರ್‍ಸೆಲ್ ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಹಾಗೂ ಇವರ ಸೋದರ ಕಲಾನಿಧಿ ಮಾರನ್ ಎಲ್ಲ ಆರೋಪದಿಂದ ಮುಕ್ತರಾಗಿದ್ದಾರೆ.
ಸಾಕ್ಷ್ಯಧಾರದ ಕೊರತೆಯಿಂದಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಖುಲಾಸೆಗೊಳಿಸಿ ಆದೇಶ ಪ್ರಕಟಿಸಿದ್ದಾರೆ.
Advertisement
ಇದು ಅಪಾಯಕಾರಿ ವಿದ್ಯಮಾನ, ಈ ರೀತಿಯ ಆರೋಪ ಮಾಡಿದರೆ ಸರ್ಕಾರದಲ್ಲಿರುವ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕಾದಿತು ಎಂದು ಜಡ್ಜ್ ಒ.ಪಿ. ಶೈನಿ ಆದೇಶದಲ್ಲಿ ಹೇಳಿದ್ದಾರೆ.
Advertisement
ಏನಿದು ಪ್ರಕರಣ?
ಏರ್‍ಸೆಲ್ ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರನ್ ಹಾಗೂ ಇವರ ಸೋದರ ಕಲಾನಿಧಿ ಮಾರನ್ ವಿರುದ್ಧದ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆ ನಡೆಸಿತ್ತು.
Advertisement
2006ರಲ್ಲಿ ದೂರಸಂಪರ್ಕ ಸಚಿವರಾಗಿದ್ದ ದಯಾನಿಧಿ ಮಾರನ್ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಮಲೇಷ್ಯಾದ ಮ್ಯಾಕ್ಸಿಸ್ ಕಂಪೆನಿಗೆ ಅನುಕೂಲ ಮಾಡಿಕೊಡಲು ಡೀಲ್ ನಡೆಸಿದ್ದರು. ಈ ಡೀಲ್ ನಡೆಸಿದ್ದಕ್ಕೆ ಮಾರನ್ ಅವರಿಗೆ ಮ್ಯಾಕ್ಸಿಸ್ ಕಡೆಯಿಂದ 700 ಕೋಟಿ ರೂ. ಹಣ ಸಂದಾಯವಾಗಿದೆ. ಈ ಪೈಕಿ ಸ್ವಲ್ಪ ಹಣವನ್ನು ತಮ್ಮ ಸೋದರ ಕಲಾನಿಧಿ ಒಡೆತನದಲ್ಲಿರುವ ಸನ್ ಸಮೂಹ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು ಎಂದು ಎನ್ನುವ ಆರೋಪ ಮಾರನ್ ಸಹೋದರರ ಮೇಲೆ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ದಯಾನಿಧಿ ಮಾರನ್ ಹಾಗೂ ಕಲಾನಿಧಿ ಮಾರನ್ ಸೇರಿ 8 ಮಂದಿ ಆರೋಪಿಗಳೆಂದು ಹೆಸರಿಸಲಾಗಿತ್ತು.
Advertisement
ಆರೋಪ ಕೇಳಿ ಬಂದ ಬಳಿಕ ದಯಾನಿಧಿ ಮಾರನ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.