ಚೆನ್ನೈ: ತಮಿಳುನಾಡಿನ ಪೂನಾ ಮಲಾಯ್ ಬೈಪಾಸ್ ಬಳಿ ಕೆಎಸ್‍ಆರ್‍ಟಿಸಿ ಐರಾವತ ಬಸ್ ಧಗಧಗನೇ ಹೊತ್ತಿ ಉರಿದಿದೆ. ಬೆಳಗ್ಗೆ 8.15ಕ್ಕೆ ಈ ಘಟನೆ ಸಂಭವಿಸಿದೆ.
ಚೆನ್ನೈ ನಿಂದ 5 ಕಿ.ಮಿ ದೂರದಲ್ಲಿ ಬಸ್‍ನ ಎಂಜಿನ್‍ನಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಸ್ವಲ್ಪ ಹೊತ್ತಿನ ನಂತರ ಧಗಧಗನೆ ಹೊತ್ತಿ ಉರಿಯಿತು. ಘಟನೆಯಿಂದ ಬಸ್ಸಿನ ಸೀಟ್ ಹಾಗೂ ಛಾವಣಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಎಸ್‍ಆರ್‍ಟಿಸಿ ಟೆಕ್ನಿಕಲ್ ಟೀಂ ಚೆನ್ನೈಗೆ ಹೊರಟಿದೆ. ಬೆಂಗಳೂರು-ಚೆನ್ನೈ ಮಾರ್ಗದ ಬಸ್ ಇದಾಗಿದೆ.
https://www.youtube.com/watch?v=O8Zd1xm1_D0&feature=youtu.be