ಉಡುಪಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ವಿಶ್ವದಾದ್ಯಂತ ಧೂಳೆಬ್ಬಿಸಿದೆ. ಐದು ಭಾಷೆಗಳಲ್ಲಿ ರಿಲೀಸ್ ಆಗಿರೋ ಕೆಜಿಎಫ್ ದೊಡ್ಡ ಸೌಂಡ್ ಮಾಡಿದೆ. ಚಿತ್ರದಲ್ಲಿರುವ ಹಾಡುಗಳಂತೂ ಸಿಕ್ಕಾಪಟ್ಟೆ ಹಿಟ್ ಆಗಿ ಬಾಲಿವುಡ್ ಚಿತ್ರದ ಹಾಡಿಗೂ ಟಕ್ಕರ್ ಕೊಟ್ಟಿದೆ. ಸಿನಿಮಾದಲ್ಲಿರುವ ಜೋಕೆ… ನಾನು ಬಳ್ಳಿಯ ಮಿಂಚು ಹಾಡಿಗೆ ಕುಣೀದದ್ದು ತಮನ್ನಾ. ಆದ್ರೆ ಹಾಡಿದ್ದು ಉಡುಪಿಯ ಐರಾ ಆಚಾರ್ಯ.
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಐರಾ ಆಚಾರ್ಯ ಜೋಕೆ ಹಾಡಿನ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಇದೀಗ ಐರಾ ಪಬ್ಲಿಕ್ ಟಿವಿ ಜೊತೆ ಕೆಜಿಎಫ್ ರಿಲೀಸ್ ನ ಖುಷಿಯನ್ನು ಹಂಚಿಕೊಂಡಿದ್ದು, ಮೊದಲ ಹಾಡೇ ಇಷ್ಟೊಂದು ಹವಾ ಸೃಷ್ಟಿಸಿದ್ದು ತುಂಬಾ ಖುಷಿಯಾಗಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು, ಪ್ರಶಾಂತ್ ನೀಲ್ ಹಾಗೂ ಯಶ್ ಅವರು ನನಗೆ ಇಂತಹ ಒಂದು ಅದ್ಭುತ ಅವಕಾಶ ನೀಡಿದ್ದಾರೆ. ಅವರಿಗೆ ನನ್ನ ಕಡೆಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಅಂದ್ರು.
Advertisement
Advertisement
ಆಯ್ಕೆಯಾಗಿದ್ದು ಹೇಗೆ..?
ನಾನೂ ಯೂಟ್ಯೂಬ್ ಚಾನಲ್ ಮೂಲಕ ಹಾಡಲು ಆರಂಭಿಸಿದ್ದೆ. ಹೀಗೆ ಒಂದು ದಿನ ರವಿ ಬಸ್ರೂರು ಸರ್ ನನಗೆ ಕರೆ ಮಾಡಿದ್ದರು. ಅವರಿಗೆ ನನ್ನ ಹಾಡೊಂದು ಇಷ್ಟವಾಗಿತ್ತಂತೆ. ಹೀಗಾಗಿ ಅವರು ಒಂದು ಆಡೀಶನ್ ಕೊಡಲು ಹೇಳಿದ್ದರು. ಹಾಗೆಯೇ ನಾನು ಆಡೀಶನ್ ಗೆ ತೆರಳಿ ಹಾಡಿದ್ದೆ. ಈ ಹಾಡು ಕೇಳಿ ಅವರಿಗೆ ತುಂಬಾ ಖುಷಿಯಾಗದೆ. ನಂತರ ನನ್ನನ್ನು ಕೆಜಿಎಫ್ ಚಿತ್ರಕ್ಕೆ ಹಾಡಲು ಅವಕಾಶ ಮಾಡಿಕೊಟ್ಟರು.
Advertisement
ಸಂಗೀತ ಜರ್ನಿ ಬಗ್ಗೆ:
ನನಗೆ 4 ವರ್ಷ ಇದ್ದಾಗಿನಿಂದ ನಾನು ಹಾಡಲು ಆರಂಭಿಸಿದ್ದೇನೆ. ಮೊದಲು ನಾನು ಹಿಂದೂಸ್ತಾನಿ ಸಂಗೀತದ ಮೂಲಕ ಹಾಡು ಕಲಿಯಲು ಪ್ರಾರಂಭಿಸಿದ್ದೇನೆ. ದೇವರ ಕೀರ್ತನೆಗಳನ್ನು ಅಮ್ಮನೇ ಹೇಳಿಕೊಡುತ್ತಿದ್ದರು. ಪಂಡಿತ್ ವಿಠಲ್ ದಾಸ್ ಭಟ್ ಎಂಬವರ ಬಳಿ ಹಿಂದೂಸ್ತಾನಿ ಸಂಗೀತ ಕಲೀತಾ ಇದ್ದೇನೆ.
Advertisement
ಜೋಕೆ ಹಾಡು ಒಂದೇ ದಿನಕ್ಕೆ 10 ಲಕ್ಷ ವ್ಯೂವ್ ಬಗ್ಗೆ ಪ್ರತಿಕ್ರಿಯಿಸಿದ ಐರಾ, ಹಾಡು ರಿಲೀಸ್ ಆದಾಗ ನನಗೆ ತುಂಬಾ ಖುಷಿಯಾಯ್ತು. ನಾನು ಹಾಡಿದ ಹಾಡು ಇಷ್ಟೊಂದು ಹಿಟ್ ಆಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಇಷ್ಟೊಂದು ವ್ಯೂ ಆಗುತ್ತದೆ ಅಂತ ನಾನು ಅಂದುಕೊಂಡಿರಲಿಲ್ಲ. ಹಾಡು ಮತ್ತು ಕಲಿಕೆ ಜೊತೆ ಜೊತೆಯಾಗಿ ಕಲಿಯುವ ಗುರಿ ಹೊಂದಿದ್ದೇನೆ ಅಂತ ಅವರು ಹೇಳಿದ್ದಾರೆ.
ಯಶ್ ಬಗ್ಗೆ:
ನಾನು ಯಶ್ ಅವರನ್ನು ಭೇಟಿಯಾಗಿಲ್ಲ. ಯಾಕಂದ್ರೆ ಅವರು ಸುದ್ದಿಗೋಷ್ಟಿ ಅಂತೆಲ್ಲ ಬ್ಯುಸಿಯಾಗಿದ್ದರು. ಚಿತ್ರದಲ್ಲಿ ಯಶ್ ತುಂಬಾನೇ ಚಂದ ನಟಿಸಿದ್ದಾರೆ. ಅವರ ಆ್ಯಕ್ಟಿಂಗ್ ನೋಡಿ ತುಂಬಾನೇ ಖುಷಿಯಾಯ್ತು. ಮೊದಲಿಂದಲೂ ನಾನು ಯಶ್ ಅಭಿಮಾನಿಯಾಗಿದ್ದು, ಅವರಿಗೆ ಆಲ್ ದಿ ಬೆಸ್ಟ್ ಹೇಳಲು ಬಯಸುತ್ತೇನೆ ಅಂತ ತಿಳಿಸಿದ್ರು.
ತಾಯಿ ಚೇತನಾ ಆಚಾರ್ಯ ಮಾತು..
ಮಗಳ ಚೊಚ್ಚಲ ಹಾಡು ಹಿಟ್ ಆಗಿದ್ದಕ್ಕೆ ಹೆಮ್ಮೆಯಾಗ್ತಿದೆ. ಯೂಟ್ಯೂಬ್ ಚಾನೆಲ್ ಒಂದರಲ್ಲಿ ಅವಳ ಹಾಡನ್ನು ಪ್ರಮೋಟ್ ಮಾಡಬೇಕೆಂದು ಹಾಕಿದ್ದೆವು. ಆದ್ರೆ ಆಕೆಗೆ ದಿಢೀರ್ ಅಂತ ಒಂದು ಆಫರ್ ಬಂತು. ಅದರಲ್ಲೂ ಕೆಜಿಎಫ್ ಅನ್ನೋ ದೊಡ್ಡ ಸಿನಿಮಾದಲ್ಲಿ ಆಫರ್ ಬರೋವಾಗ ತುಂಬಾನೇ ಖುಷಿಯಾಯ್ತು ಅಂತ ಐರಾ ತಾಯಿ ಚೇತನಾ ಆಚಾರ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳೀಸಿದ್ದಾರೆ.
ಚಿಕ್ಕಂದಿನಿಂದಲೂ ಆಕೆಗೆ ಮ್ಯೂಸಿಕ್ ಅಂದ್ರೆ ತುಂಬಾ ಆಸಕ್ತಿ. ರೇಡಿಯೋದಲ್ಲಿ ಬರುವ ಮ್ಯೂಸಿಕ್ ಗಳನ್ನು ಕೇಳುತ್ತಿದ್ದಳು. ನಾನು ಕರ್ನಾಟಕ ಶಾಸ್ತ್ರಿ ಸಂಗೀತ ಕಲಿತಿದ್ದೇನೆ. ಅವಳಿಗೆ ಭಕ್ತಿಗೀತೆಗಳನ್ನು ನಾನೇ ಹೇಳಿಕೊಡುತ್ತಿದ್ದೆ. 4ನೇ ವಯಸ್ಸಿನಿಂದಲೇ ಆಕೆ ಸಂಗೀತ ಕಲಿಯಲು ಆರಂಭಿಸಿದ್ದಾಳೆ. ಅಲ್ಲದೇ ಆಕೆ ಎಲ್ಲಾ ತರದ ಹಾಡುಗಳನ್ನು ಹಾಡುತ್ತಾಳೆ ಅಂದ್ರು.
ಕರ್ನಾಟಕದ 400 ಸ್ಕ್ರೀನ್‍ಗಳು ಸೇರಿದಂತೆ ವಿಶ್ವದ 2 ಸಾವಿರದಷ್ಟು ಸ್ಕ್ರೀನ್‍ಗಳಲ್ಲಿ ರಾಕಿಂಗ್ ಸ್ಟಾರ್ ಯಶ್‍ಗೆ ಅಭಿಮಾನಿಗಳು ಸಲಾಂ ರಾಕಿಭಾಯ್ ಅಂತಿದ್ದಾರೆ. ಉಗ್ರಂ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿರುವ 70 ಕೋಟಿ ರೂಪಾಯಿ ವೆಚ್ಚದ ಕೆಜಿಎಫ್, ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ವಿಜಯ್ ಕಿರಂಗದೂರು ನಿರ್ಮಾಣದ ಸಿನಿಮಾದಲ್ಲಿ ಮಾಸ್ಟರ್ ಪೀಸ್‍ಗೆ ಶ್ರೀನಿಧಿ ಶೆಟ್ಟಿ ಜೋಡಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv