ಬೆಂಗಳೂರು: ಸೂರ್ಯಕಿರಣ್ ಆಗಸದಿಂದ ಧರೆಗುರುಳಿದ ಕಹಿ ನೆನಪಿನ ಮಧ್ಯೆಯೇ ಇಂದು ಬೆಂಗಳೂರಿನಲ್ಲಿ ಏರ್ ಶೋ 2019 ನಡೆಯಲಿದೆ. ಯಲಹಂಕ ವಾಯುನೆಲೆಯಲ್ಲಿ ದೇಶ-ವಿದೇಶದ ಯುದ್ಧ ವಿಮಾನಗಳ ಖದರ್ ಮಧ್ಯೆಯೇ ನಭೋಮಂಡಲದಲ್ಲಿ ತ್ರಿವರ್ಣ ಧ್ವಜದ ಚಿತ್ತಾರ ಮೂಡಿಸಿ ದೇಶಭಕ್ತಿಯ ಕಿಚ್ಚು ಹಚ್ಚುತ್ತಿದ್ದ ಸೂರ್ಯಕಿರಣ್ ಇಲ್ಲದೆ ಈ ಬಾರಿ ಏರ್ ಶೊ ಕೊಂಚ ಸಪ್ಪೆಯಾಗಲಿದೆ.
ನೀಲನಭದಲ್ಲಿ ಸಾರಂಗದ ವೈಯಾರ ಸೂರ್ಯಕಿರಣನ ನರ್ತನ, ಆಗಸದಲ್ಲಿ ಯುದ್ಧ ವಿಮಾನಗಳ ಘರ್ಜನೆ. ಇದರ ಮಧ್ಯೆಯೇ ಆಗಸವನ್ನೇ ಸೀಳಿಕೊಂಡು ಥೇಟು ಹೀರೋನಂತೆ ಎಂಟ್ರಿ ಕೊಡಲಿರುವ ಸುಖೋಯ್ ಹಾಗೂ ಎಲ್ಲರ ಗಮನ ಸೆಳೆದ ರಫೇಲ್ ಆಗಮನವಾಗಲಿದೆ.
Advertisement
ಇಂದು ಬೆಳಗ್ಗೆ 10 ಗಂಟೆಗೆ ಏರ್ ಶೋ ಉದ್ಘಾಟನೆಯಾಗಲಿದ್ದು, ಫೆ. 24ರವರೆಗೆ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲರವ ಶುರುವಾಗಲಿದೆ. ಆದರೆ ಮಂಗಳವಾರ ಸೂರ್ಯಕಿರಣ್ ಲಘು ಯುದ್ಧ ವಿಮಾನ ತಾಲೀಮು ನಡೆಸುವ ವೇಳೆಯೇ ಧರೆಗುರುಳಿರೋದ್ರಿಂದ ಇಂದು ಸೂರ್ಯಕಿರಣ್ ನಭದಲ್ಲಿ ಕೌತುಕ ಮೂಡಿಸಲ್ಲ. ಏರ್ ಶೋನಲ್ಲಿ ಸೂರ್ಯನಿಲ್ಲದೆ ಈ ಬಾರಿ ಕೊಂಚ ಶೋ ಡಲ್ ಆಗಲಿದೆ.
Advertisement
Advertisement
ರೆಕ್ಕೆ ಬಡಿಯದ ಹಕ್ಕಿಗಳ ಕಸರತ್ತು ಹೀಗಿರಲಿದೆ..
* ರಫೇಲ್ ಯುದ್ಧ ವಿಮಾನದ ಪ್ರದರ್ಶನ
* ಅಮೇರಿಕಾದಿಂದ ಹಾರಿಬಂದಿದೆ ಗ್ಲೋಬ್ ಮಾಸ್ಟರ್ ದೈತ್ಯವಿಮಾನ
* ಎಚ್‍ಎಲ್‍ನಿಂದ ಪ್ರದರ್ಶನವಾಗಲಿದೆ ಅತ್ಯಂತ ಪುಟ್ಟ ವಿಮಾನ
* ದೇಶ ವಿದೇಶದ ಸುಮಾರು 54 ದೇಶದ ಯುದ್ಧವಿಮಾನಗಳ ಪ್ರದರ್ಶನ
* ಬ್ಯಾಟಿಕ್ಸ್ ಲಲನೆಯರಿಂದ ಯುದ್ಧವಿಮಾನದಲ್ಲಿಯೇ ನರ್ತನ
* ಸಾರಂಗ್ ಅಬ್ಬರ ಧ್ರುವ ಹಾರಾಟ ತೇಜಸ್ ಸುಖೋಯ್ ಅದ್ಭುತ ಪ್ರದರ್ಶನ
* ಸ್ವೀಡನ್ ಗ್ರೈಪೆನ್ ಯುದ್ಧ ವಿಮಾನ ಹಾರಾಟ
Advertisement
ಟ್ರಾಫಿಕ್ ಬಿಸಿ:
* ಏರ್ ಶೋ ಸಮಯದಲ್ಲಿ ಜನಸಾಗರ ನೆರೆಯೋದರಿಂದ ಟ್ರಾಫಿಕ್ ಬಿಸಿ ತಟ್ಟಲಿದೆ. ಮೇಖ್ರಿ, ಹೆಬ್ಬಾಳ ಭಾಗದಲ್ಲಿ ಟ್ರಾಫಿಕ್ ಬಿಸಿ ತಟ್ಟೋದ್ರಿಂದ ಕೆಐಎಎಲ್‍ಗೆ ಹೋಗುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮ ಭಾಗದಿಂದ ಕೆಂಪೇಗೌಡ ಏರ್‍ಪೋರ್ಟ್‍ಗೆ ಹೋಗುವವರು ಗೊರುಗುಂಟೆ ಪಾಳ್ಯ, ಬಿಇಎಲ್ ಮಾರ್ಗ, ಗಂಗಮ್ಮ ಸರ್ಕಲ್, ದೊಡ್ಡಬಳ್ಳಾಪುರ ರಸ್ತೆಯಿಂದ ಹೋಗಬಹುದು. ಪೂರ್ವ ಭಾಗ, ಕೆಆರ್ ಪುರಂ, ಹೆಣ್ಣೂರು ಮಾರ್ಗವಾಗಿ ಸಾಗಬಹುದು. ದಕ್ಷಿಣ ಭಾಗ ಮೈಸೂರು ರಸ್ತೆ ನಾಯಂಡಹಳ್ಳಿ ಮಾರ್ಗವಾಗಿ ಬಿಇಎಲ್ ಮಾರ್ಗವಾಗಿ ಕೆಐಎಎಲ್‍ಗೆ ತಲುಪಬಹುದು.
ಆನ್‍ಲೈನ್‍ನಲ್ಲಿ ಏರ್ ಶೋ ಟಿಕೆಟ್ ಬುಕ್ ಮಾಡಿಕೊಂಡು ಏರ್ ಶೋವನ್ನು ಕಣ್ತುಂಬಿಸಿಕೊಳ್ಳಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv