ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿ (NewDelhi) ಪರಿಸ್ಥಿತಿ ಈಗ ರಾಜ್ಯ ರಾಜಧಾನಿಗೂ ಬರಲಿದೆಯಾ ಅನ್ನೋ ಆತಂಕ ಶುರುವಾಗಿದೆ. ಕಂಡು ಕೇಳರಿಯದಂತಹ ವಾಯುಮಾಲಿನ್ಯ (Air Pollution) ಬೆಂಗಳೂರಿನಲ್ಲಿ (Bengaluru) ಸೃಷ್ಟಿಯಾಗಿದೆ.
Advertisement
ಬೆಂಗಳೂರಿನಲ್ಲಿ (Bengaluru) ಕಳೆದ ಒಂದೇ ವರ್ಷದಲ್ಲಿ ಶೇ.40ರಷ್ಟು ಮಾಲಿನ್ಯ ಹೆಚ್ಚಳವಾಗಿದೆ. 2022ರ ನವೆಂಬರ್ ತಿಂಗಳ 30 ದಿನಗಳ ಅಧ್ಯಯನದ ಪ್ರಕಾರ ವಾಯು ಗುಣಮಟ್ಟ ಸೂಚ್ಯಂಕ (AQI) 93 ಆಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಎಕ್ಯೂಐ 66 ಇತ್ತು. ಅಂದರೆ ಒಂದೇ ವರ್ಷಕ್ಕೆ ಶೇ.40ರಷ್ಟು ವಾಯುಮಾಲಿನ್ಯ (Air Pollution) ಏರಿಕೆ ಕಂಡಿದೆ. ಈ ಅಂಕಿ ಅಂಶ ನೋಡ್ತಿದ್ರೆ, ಮಾಲಿನ್ಯ ಎಫೆಕ್ಟ್ ನಿಂದ ದೆಹಲಿಯಲ್ಲಿ ಉಂಟಾದ ನಿರ್ಬಂಧಗಳು ರಾಜ್ಯ ರಾಜಧಾನಿಯಲ್ಲೂ ಶುರುವಾಗುವ ಭೀತಿ ಶುರುವಾಗಿದೆ. ಇದನ್ನೂ ಓದಿ: ಕೊರೊನಾ ವೈರಸ್ ವುಹಾನ್ ಲ್ಯಾಬ್‌ನಿಂದಲೇ ಸೋರಿಕೆ – ವಿಜ್ಞಾನಿಯಿಂದ ಸ್ಫೋಟಕ ಹೇಳಿಕೆ
Advertisement
Advertisement
ದೀಪಾವಳಿ ನಂತರ ಮಾಲಿನ್ಯ ಹೆಚ್ಚಳ: ದೀಪಾವಳಿ (Diwali) ಬಳಿಕ ವಾಯು ಮಾಲಿನ್ಯ ಹೆಚ್ಚಳವಾಗಿದೆ. ಬೆಂಗಳೂರು ಸಿಟಿ ಜಂಕ್ಷನ್, ಹೆಬ್ಬಾಳ, ಮೈಸೂರು ರಸ್ತೆ, ಸಾಣೆಗುರುವನಹಳ್ಳಿ, ನಿಮ್ಹಾನ್ಸ್, ಜಯನಗರ ಹಾಗೂ ಸಿಲ್ಕ್ ಬೋರ್ಡ್‌ನಲ್ಲಿರುವ 7 ನಿರ್ವಹಣಾ ನಿಲ್ದಾಣಗಳ ಸಹಾಯದಿಂದ ಎಕ್ಯೂಐ ಪ್ರಮಾಣ ಅಳೆಯಲಾಗಿದೆ. ಈ ವೇಳೆ ಕಳಪೆ ಗಾಳಿಯ ಗುಣಮಟ್ಟ ಕಂಡು ಬಂದಿದೆ. ಇದನ್ನೂ ಓದಿ: ವಿವಾಹಪೂರ್ವ ಸೆಕ್ಸ್ ಮಾಡಿದ್ರೆ ಅಪರಾಧ – ಇಂಡೋನೇಷ್ಯಾ ಕಾನೂನಿಗೆ ಭಾರೀ ವಿರೋಧ
Advertisement
ಅಕ್ಟೋಬರ್ ನಂತರ ಚಳಿಗಾಲ ಆರಂಭವಾಗುತ್ತಿದ್ದಂತೆ ನಗರದ ವಾಯು ಗುಣಮಟ್ಟ ಸೂಚ್ಯಂಕ ಮೇಲ್ವಿಚಾರಣೆ ಮಾಡಲಾಗಿದೆ. ಈ ಅಧ್ಯಯನದಲ್ಲಿ ಹೊರ ಬಿದ್ದ ಸ್ಫೋಟಕ ಸತ್ಯದಿಂದ, ನಗರದ ಜನ ಆರೋಗ್ಯ ಕಾಳಜಿ ವಹಿಸಬೇಕು ಎಂದು ಎಚ್ಚರಿಸಿದೆ. ನಗರದಲ್ಲಿ ಗಾಳಿ ಗುಣಮಟ್ಟ ಮಧ್ಯಮ ಮತ್ತು ಅತ್ಯಂತ ಕಳಪೆ ಮಧ್ಯದಲ್ಲಿ ಇದೆ. ಚಳಿಗಾಲಕ್ಕೆ ಸಂಬಂಧಿಸಿದ ನೈಸರ್ಗಿಕ ಪರಿಸ್ಥಿತಿಗಳ ಹೊರತಾಗಿ ಹೆಚ್ಚಾದ ವಾಹನಗಳ ಹೊಗೆಯಿಂದ ಉಸಿರಾಡಲು ಶುದ್ಧ ಗಾಳಿ ಕಡಿಮೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಪ್ರಾಯ ಪಟ್ಟಿದೆ.