ನವದೆಹಲಿ: ಒಂದೆಡೆ ದೀಪಾವಳಿ ವೇಳೆ ಪಟಾಕಿ ಸಿಡಿತ, ಮತ್ತೊಂದೆಡೆ ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ (ಕೊಳೆ) ಸುಡುವಿಕೆಯಿಂದ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಮಾಲಿನ್ಯ ಗಂಭೀರ ಸ್ಥಿತಿಗೆ ತಲುಪಿದೆ.
ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೀಪಾವಳಿ ಹಬ್ಬದ ಬಳಿಕ ದೆಹಲಿ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) ಅತಿ ಗಂಭೀರ ಎನ್ನಬಹುದಾದ 462ಕ್ಕೆ ನಿನ್ನೆ ಏರಿದೆ. ಇದರ ಬೆನ್ನಲ್ಲೇ ದಟ್ಟ ಧೂಳಿನ ಕಣಗಳನ್ನು ಚದುರಿಸುವ ಮತ್ತು ನಿಯಂತ್ರಿಸಲು ದೆಹಲಿ ಸರ್ಕಾರ ದೆಹಲಿ ಸರ್ಕಾರ 114 ನೀರಿನ ಟ್ಯಾಂಕರ್‍ಗಳ ಮುಖಾಂತರ ನಗರದ ರಸ್ತೆಗಳ ಮೇಲೆ ಚಿಮುಕಿಸುತ್ತಿದೆ. ಮತ್ತೊಂದೆಡೆ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದ 92 ಕಟ್ಟಡಗಳ ನಿರ್ಮಾಣಕ್ಕೂ ತಡೆ ಒಡ್ಡಲಾಗಿದೆ. ಈ ನಡುವೆ ನಿನ್ನೆ ಗಾಳಿ ಬೀಸಿದ್ದು, ಇದರ ಪರಿಣಾಮ 449ಕ್ಕೆ ಎಕ್ಯುಐ ಸುಧಾರಿಸಿದೆ.
Advertisement
Advertisement
ನವೆಂಬರ್ 7ರ ಬಳಿಕವಷ್ಟೇ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ವಾಯುಮಾಲಿನ್ಯದಿಂದ ಮುಕ್ತಿ ಹೊಂದಿ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆಯಿದೆ ಎಂದು ಹವಾಮಾನಮುನ್ಸೂಚನೆ ಮತ್ತು ಸಂಶೋಧನಾ ಸಂಸ್ಥೆ(ಎಸ್‍ಎಎಫ್‍ಎಆರ್) ಹೇಳಿದೆ.
Advertisement
Delhi’s overall air quality continues to remain ‘severe’ with Air Quality Index (AQI) standing at 436: System of Air Quality & Weather Forecasting & Research (SAFAR) https://t.co/qfXjSiNc3c
— ANI (@ANI) November 7, 2021
Advertisement
ಪಕ್ಕದ ವಸ್ತೂಗಳು ಕಾಣದ ಪರಿಸ್ಥಿತಿ: ಪಂಜಾಬ್, ಹರಿಯಾಣ ಸೇರಿ ಇತರ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುವಿಕೆ ಕಡಿಮೆ ಆಗುತ್ತಿದೆ ಎಂದು ಮೂರು ದಿನ ಹಿಂದಷ್ಟೇ ವರದಿಯೊಂದು ಹೇಳಿತ್ತು. ಆದರೆ ಇದರ ಬೆನ್ನಲ್ಲೆ ಸರ್ಕಾರದ ಸೂಚನೆ, ಕೋರ್ಟ್ ಆದೇಶಗಳನ್ನೂ ಮೀರಿ ದಿಲ್ಲಿ ಜನರು ದೀಪಾವಳಿ ಪಟಾಕಿಗಳನ್ನು ಹಾರಿಸಿದ್ದಾರೆ. ಇದರ ಪರಿಣಾಮ ಶುಕ್ರವಾರ, ಶನಿವಾರ ದಿಲ್ಲಿಯಾದ್ಯಂತ ಭಾರೀ ಹೊಗೆಯ ವಾತಾವರಣ ಕಂಡುಬಂತು. ಜನರು ಮನೆಗಳಲ್ಲಿ ವಾಯುಶುದ್ಧಿ ಯಂತ್ರ ಗಳನ್ನು ಬಂಸುತ್ತಿರು ದೇಶ್ಯ ಸಾಮನ್ಯವಾಗಿತ್ತು. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು
This doesn’t cause pollution. Only firecrackers does (On Diwali, specifically, not otherwise!) https://t.co/YkWibxEGKF
— Pranitha Subhash (@pranitasubhash) November 6, 2021
ರಸ್ತೆಗಳಲ್ಲಿ ಪಕ್ಕದಲ್ಲಿರುವ ವಾಹನಗಳು ಕಾಣದಷ್ಟು ವಾತಾವರಣ ಮಸುಕಾಗಿತ್ತು ಎಂದು ವಾಹನಸವಾರರು ಹೇಳಿದ್ದಾರೆ. ಈ ಮಂದ ಬೆಂಕಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮತ್ತೆ ಸಮ-ಬೆಸ ವ್ಯವಸ್ಥೆ ಜಾರಿಗೆ ತರಬೇಕು ಎಂದು ಹಲವರು ಹೇಳಿದ್ದಾರೆ. 2020ರಲ್ಲಿ ದೀಪಾವಳಿ ಮಾರನೇ ದಿನ ಎಕ್ಯೂಐ ಪ್ರಮಾಣ 435, 2029ರಲ್ಲಿ 368, 2018ರಲ್ಲಿ 390, 2017ರಲ್ಲಿ 403, 2016ರಲ್ಲಿ ಎಕ್ಯೂಐ 445ರಷ್ಟು ಇತ್ತು. ಈ ದಾಖಲೆಯನ್ನು ಶುಕ್ರವಾರದ ಎಕ್ಯುಐ 469ಕ್ಕೆ ಏರಿ ಅಳಿಸಿ ಹಾಕಿದೆ.
ಆರೋಗ್ಯಕ್ಕೆ ಅಪಾಯಕಾರಿ: ಈ ಬಗ್ಗೆ ಪ್ರತಿಕ್ರಿಯಿಸಿದ ಹೃದಯ ತಜ್ಞರಾದ ಅರುಣ್ ಮೊಹಾಂತಿ ಅವರು, ಇಂಥವಾಯು ಗುಣಮಟ್ಟವು ಜನರ ಆರೋಗ್ಯದ ಮೇಲೆ ಭಾರೀ ದುಷ್ಟರಿಣಾಮ ಬೀರಲಿದೆ. ಈಗಾಗಲೇ ಎದೆನೋವು ಮತ್ತು ಹೃದಯಕ್ಕೆ ಸಂಬಧಿಸಿದ ಅನಾರೋಗ್ಯಕ್ಕೆ ಇದು ದೊಡ್ಡಗಂಡಾಂತರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ
ಆಗಿರುವುದುದೇನು?
* ಪಟಾಕಿ ಸಿಡಿತ, ಕೃಷಿ ತ್ಯಾಜ್ಯ ಸುಡುವಿಕೆಯಿಂದ ಮಾಲಿನ್ಯ ಹೆಚ್ಚಳ
* ದೆಹಲಿ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟ ಹೊಗೆಯ ವಾತಾವರಣ
* ಪಕ್ಕದಲ್ಲಿ ಹೋಗುವ ವಾಹನವೂ ಸ್ಪಷ್ಟವಾಗಿ ಕಾಣಿಸದಂಥ ಪರಿಸ್ಥಿತಿ
* 114 ಟ್ಯಾಂಕರ್ ಮೂಲಕ ನೀರು ಸಿಂಪಡಿಸಿ ಮಾಲಿನ್ಯ ತಡೆಗೆ ಯತ್ನ
* ಮಾಲಿನ್ಯ ತಗ್ಗಸಿಲು 92 ಕಟ್ಟಡ ನಿರ್ಮಾಣಕ್ಕೂ ದಿಲ್ಲಿ ಸರ್ಕಾರ ತಡೆ