ಕೊಚ್ಚಿ: 102 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನೊಳಗೊಂಡ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ ಇಂದು ಬೆಳಗ್ಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಅವಘಡ ಸಂಭವಿಸಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ವಿಮಾನ ಲ್ಯಾಂಡ್ ಆಗುವ ವೇಳೆ ಪಾರ್ಕಿಂಗ್ ವೇ ಕಡೆಗೆ ಸಮೀಪಿಸುತ್ತಿದ್ದಂತೆ ಪಥವನ್ನು ಬದಲಿಸಿದೆ. ಈ ಅವಘಡದಿಂದಾಗಿ ಬೋಯಿಂಗ್ 737-800 ವಿಮಾನದ ನೋಸ್ ವೀಲ್ ಜಖಂ ಆಗಿದೆ.
Advertisement
ಘಟನೆಯಿಂದ ಪ್ರಯಾಣಿಕರರಿಗೆ ಯಾವುದೇ ಹಾನಿಯಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಎಲ್ಲಾ ಪ್ರಯಾಣಿಕರನ್ನ ಏಣಿ ಮೂಲಕ ಕೆಳಗಿಳಿಸಲಾಯ್ತು ಎಂದು ಕೊಚಿನ್ ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ಲಿಮಿಟೆಡ್‍ನ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
Advertisement
ಸದ್ಯ ಈ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಘಟನೆಯ ಬಗ್ಗೆ ಆಂತರಿಕ ತನಿಖೆ ಹಾಗೂ ನಾಗರೀಕ ವಿಮಾನಯಾನ ನಿರ್ದೇಶನಾಲಯದಿಂದ್ಲೂ ತನಿಖೆ ಆರಂಭವಾಗಿದೆ ಎಂದು ವರದಿಯಾಗಿದೆ.
Advertisement
#Visuals from Kochi: An Air India express veered off from taxiway at Kochi airport while approaching parking bay, today. All safe. pic.twitter.com/FMlUbDQQTz
— ANI (@ANI) September 5, 2017
Advertisement
An Air India express veered off from taxiway at Kochi airport while approaching parking bay, today. All passengers evacuated safely. pic.twitter.com/T8zElXQPHe
— ANI (@ANI) September 5, 2017