ಅಹಮದಾಬಾದ್: ಏರ್ ಇಂಡಿಯಾ ವಿಮಾನ (Air India Flight) ದುರಂತದಲ್ಲಿ ಸಾವಿನ ಸಂಖ್ಯೆ 274ಕ್ಕೇರಿದ್ದು, ಪತನವಾದ ಸ್ಥಳದಲ್ಲಿ ಅವಶೇಷಗಳ ತೆರವು ಕಾರ್ಯ ಆರಂಭಗೊಂಡಿದೆ.
ವಿಮಾನದ ಒಳಭಾಗವನ್ನು ಪರಿಶೀಲಿಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಳಗಡೆ ಮೃತ ದೇಹಗಳಿವೆಯೇ ಎಂದು ಪರಿಶೀಲಿಸಿ ತೆರವು ಕಾರ್ಯ ನಡೆಸಲಾಗುತ್ತಿದ್ದು, ಇಂದು ಇಡೀ ದಿನ ವಿಮಾನ ಟೇಲ್ ಭಾಗ (ವಿಮಾನದ ಹಿಂಭಾಗ) ತೆರವು ಕಾರ್ಯ ನಡೆಯಲಿದೆ.ವಿಮಾನ ತೆರವಿಗೆ ಮತ್ತೊಂದು ಕ್ರೇನ್ ಕೂಡ ಆಗಮಿಸಿದ್ದು, ಕಾರ್ಯಾಚರಣೆ ಚುರುಕುಗೊಂಡಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ
ಎರಡು ಕ್ರೇನ್ ಮೂಲಕ ವಿಮಾನ ಮೇಲೆತ್ತುವ ಪ್ರಯತ್ನ ನಡೆಸಲಾಗುತ್ತಿದ್ದು, ಬಳಿಕ ಅದನ್ನು ನೆಲಕ್ಕಿಳಿಸಿ ಹಾಸ್ಟೆಲ್ ಪ್ರದೇಶದಿಂದ ಸ್ಥಳಾಂತರ ಮಾಡಲಾಗುತ್ತದೆ. ಇಂದು ಸಂಜೆ ತನಕ ಕಾರ್ಯಚರಣೆ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್ ಸುಮಿತ್ ಕೊನೆ ಕ್ಷಣದ ಆಡಿಯೋ ಲಭ್ಯ
ವಿಮಾನ ಪತನಗೊಂಡ ಪರಿಣಾಮ ವಿಮಾನದ ಹಿಂಭಾಗ ಟೇಲ್ ಹೊರತುಪಡಿಸಿ ಇನ್ನೇನು ಉಳಿದಿಲ್ಲ. ಇಡೀ ವಿಮಾನ ಸಂಪೂರ್ಣ ನಾಶವಾಗಿದೆ. ವಿಮಾನದ 90% ಭಾಗ ಸುಟ್ಟು ಕರಕಲಾಗಿದ್ದು, ಹಿಂಬದಿಯ ಟೇಲ್ ಅವಶೇಷಗಳು ಮಾತ್ರ ಹಾಗೇ ಉಳಿದಿದೆ. ಬಾಕಿ ಉಳಿದ ವಿಮಾನ ಸಂಪೂರ್ಣ ನಾಶವಾಗಿದೆ. ವಿಮಾನದಲ್ಲಿದ್ದ ಇಂಧನ ಒಮ್ಮೆಲೇ ದಹಿಸಿದ ಹಿನ್ನೆಲೆ ಸುತ್ತಮುತ್ತಲಿನ ಪ್ರದೇಶ ಎಲ್ಲವೂ ಸುಟ್ಟು ಕರಕಲಾಗಿದೆ. ಇದನ್ನೂ ಓದಿ: 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?