ನವದೆಹಲಿ: 67 ವರ್ಷಗಳ ಬಳಿಕ ಮತ್ತೆ ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ಪಡೆದುಕೊಂಡ ಬಳಿಕ ಇಂದು ವಿಮಾನ ಹೊರಡುವ ಮುನ್ನ ವಿಶೇಷ ಪ್ರಕಟನೆಯನ್ನು ಪೈಲಟ್ ಹೊರಡಿಸುವ ಮೂಲಕ ಪ್ರಯಾಣಿಕರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
Advertisement
ಭಾರತ ಸರ್ಕಾರದ ಕೈಯಲ್ಲಿದ್ದ ಏರ್ ಇಂಡಿಯಾದ ನಿಯಂತ್ರಣವನ್ನು ನಿನ್ನೆ ಅಧಿಕೃತವಾಗಿ ಟಾಟಾ ಗ್ರೂಪ್ ಪಡೆದುಕೊಂಡಿತ್ತು. ಇಂದು ವಿಮಾನ ಹೊರಡುವ ಮುನ್ನ ಪ್ರಯಾಣಿಕರಲ್ಲಿ, ಆತ್ಮೀಯ ಅತಿಥಿಗಳೇ, ನಾನು ನಿಮ್ಮ ಕ್ಯಾಪ್ಟನ್… ಎಲ್ಲರಿಗೂ ಇತಿಹಾಸ ಪ್ರಸಿದ್ಧ ವಿಮಾನಕ್ಕೆ ಆಧಾರದ ಸ್ವಾಗತ ಇದು ತುಂಬಾ ವಿಶೇಷವಾದ ಪ್ರಯಾಣ. ಇದೀಗ ಏರ್ ಇಂಡಿಯಾ ಟಾಟಾ ಗ್ರೊಪ್‍ಗೆ 7 ದಶಕಗಳ ಬಳಿಕ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ನೀವೆಲ್ಲರೂ ಈ ಪ್ರಯಾಣವನ್ನು ಎಂಜಾಯ್ ಮಾಡುತ್ತೀರಿ ಅಂದುಕೊಂಡಿದ್ದೇವೆ ಥ್ಯಾಂಕ್ಯೂ ಎಂದು ಎಲ್ಲಾ ಏರ್ ಇಂಡಿಯಾ ವಿಮಾನ ಹೊರಡುವ ಮುನ್ನ ಪೈಲಟ್‍ಗಳು ಪ್ರಕಟನೆ ಹೊರಡಿಸಿದ್ದಾರೆ. ಇದನ್ನೂ ಓದಿ: ಟಾಟಾ ಸಂಸ್ಥೆಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರ
Advertisement
1970s :: Shri J.R.D Tata as Chairman of Air India pic.twitter.com/THOlzEG6xo
— indianhistorypics (@IndiaHistorypic) January 27, 2022
Advertisement
1932 ರಲ್ಲಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್ ಸಂಸ್ಥೆಯನ್ನು ಆರಂಭಿಸಿದರು. ನಂತರ ಅದಕ್ಕೆ 1946ರಲ್ಲಿ ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. ಸರ್ಕಾರವು 1,953 ರಲ್ಲಿ ಏರ್‌ಲೈನ್ಸ್‌ನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಆದರೆ ಜೆಆರ್‌ಡಿ ಟಾಟಾ 1977ರವರೆಗೆ ಅದರ ಅಧ್ಯಕ್ಷರಾಗಿ ಮುಂದುವರಿದರು. ಸುಮಾರು 67 ವರ್ಷಗಳ ನಂತರ ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ಮತ್ತೆ ಪಡೆದುಕೊಂಡಿದೆ. ಸಾಲದ ಸುಳಿಯಲ್ಲಿದ್ದ ಏರ್ ಇಂಡಿಯಾವನ್ನು ಕೇಂದ್ರ ಸರ್ಕಾರವು ಟಾಟಾ ಸನ್ಸ್‌ಗೆ ಮಾರಾಟ ಮಾಡಿದೆ. ಇದನ್ನೂ ಓದಿ: ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್ ಇಂಡಿಯಾ ಎಂದ ರತನ್ ಟಾಟಾ
Advertisement
#FlyAI: A brand new chapter unfolds for Air India as part of the Tata Group.
Two iconic names come together to embark on a voyage of excellence.
Looking forward to soaring high propelled by our rich legacy & a shared mission to serve our Nation.
Welcome Aboard. @TataCompanies pic.twitter.com/iCVh5ewI7q
— Air India (@airindiain) January 27, 2022
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸರ್ಕಾರವು 18,000 ಕೋಟಿಗೆ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ಸ್‌ಗೆ ಮಾರಾಟ ಮಾಡಿತ್ತು. ಅದಾದ ನಂತರ ವಿಮಾನಯಾನ ಸಂಸ್ಥೆಯಲ್ಲಿನ ತನ್ನ ಶೇ.100 ಪಾಲನ್ನು ಮಾರಾಟ ಮಾಡಲು ಸರ್ಕಾರದ ಇಚ್ಛೆಯನ್ನು ದೃಢೀಕರಿಸಲು ಟಾಟಾ ಗ್ರೂಪ್ಸ್‌ಗೆ ಲೆಟರ್ ಆಫ್ ಇಂಟೆಂಟ್ (ಎನ್‍ಒಐ) ನೀಡಲಾಯಿತು. ನಂತರ ಕೇಂದ್ರವು ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ನಿನ್ನೆ ಅಧಿಕೃತವಾಗಿ ಟಾಟಾ ಗ್ರೂಪ್‍ಗೆ ಸರ್ಕಾರ ಏರ್ ಇಂಡಿಯಾವನ್ನು ಒಪ್ಪಿಸಿದೆ. ಇದನ್ನೂ ಓದಿ: ಸೇನಾ ವಿಮಾನ ಪತನ – ಅಪಾಯದಿಂದ ಪಾರಾದ ಪೈಲಟ್‌ಗಳು