– 9 ಸಾವಿರ ಕೋಟಿ ಸಾಲದ ಸುಳಿಯಲ್ಲಿ ಏರ್ ಇಂಡಿಯಾ
ನವದೆಹಲಿ: ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‍ವೇಸ್ ತನ್ನ ಸೇವೆಯನ್ನು ನಿಲ್ಲಿಸಿದೆ. ಇದೀಗ ಸರ್ಕಾರದ ಏರ್ ಇಂಡಿಯಾ ಸಹ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ.
ಈ ಆರ್ಥಿಕ ವರ್ಷದಲ್ಲಿ ಏರ್ ಇಂಡಿಯಾ ಬರೋಬ್ಬರಿ 9 ಸಾವಿರ ಕೋಟಿ ರೂ. ಸಾಲವನ್ನು ಮರುಪಾವತಿಸಬೇಕಿದೆ. ಪ್ರತಿನಿತ್ಯ 6 ಕೋಟಿ ರೂ. ನಷ್ಟ ಅನುಭವಿಸುತ್ತಿರುವ ಏರ್ ಇಂಡಿಯಾ ಸಾಲ ಹೇಗೆ ಮರುಪಾವತಿಸುತ್ತದೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಸರ್ಕಾರದ ಒಂದು ವೇಳೆ ಹಣಕಾಸಿನ ವ್ಯವಸ್ಥೆಯನ್ನು ಕಲ್ಪಿಸಿದರೆ ಮಾತ್ರ ಏರ್ ಇಂಡಿಯಾ ಜೊತೆಗೆ ಜೆಟ್ ಏರ್‍ವೇಸ್ ಕಂಪನಿಗಳು ಉಳಿದುಕೊಳ್ಳುತ್ತೇವೆ ಎಂದು ಹೇಳಲಾಗುತ್ತಿದೆ.
Advertisement
Advertisement
ಏರ್ ಇಂಡಿಯಾದ ಈ ಮೊದಲಿನ ಸಾಲವನ್ನ ಪಾವತಿಸಿದ್ದ ಸರ್ಕಾರ, ಮುಂದಿನ ದಿನಗಳಲ್ಲಿ ಯಾವುದೇ ಈಕ್ವಿಟಿ ಶೇರ್‍ಗಳನ್ನು ಪಡೆಯಲ್ಲ ಹಾಗೂ ಹಣಕಾಸಿನ ಸಹಾಯಕ್ಕೆ ಮುಂದಾಗಲ್ಲ ಎಂದು ಎಚ್ಚರಿಕೆ ನೀಡಿತ್ತು. ಆರ್ಥಿಕ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಏರ್ ಇಂಡಿಯಾ ಭವಿಷ್ಯ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ನಿಂತಿದೆ. ಮತ್ತೊಮ್ಮೆ ಎನ್‍ಡಿಎ ಮೈತ್ರಿಕೂಟ ಸರ್ಕಾರ ರಚಿಸಿದ್ದಲ್ಲಿ, ಬಂಡವಾಳ ಹೂಡುವಂತೆ ಪ್ರಧಾನಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು. ಸರ್ಕಾರಿ ಕಂಪನಿ ಆಗಿದ್ದರಿಂದ ಮರು ಹೂಡಿಕೆಗೆ ಸರ್ಕಾರ ಮುಂದಾಗಬಹುದು ಎಂದು ಹೇಳುತ್ತಾರೆ.
Advertisement
Advertisement
54 ಸಾವಿರ ಕೋಟಿ ಸಾಲ:
ಮೂಲಗಳ ಪ್ರಕಾರ ಏರ್ ಇಂಡಿಯಾ 54 ಸಾವಿರ ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿದೆ. ಕಂಪನಿಯನ್ನು ಉಳಿಸಲು ಕಳೆದ ಆರ್ಥಿಕ ವರ್ಷದಲ್ಲಿ ಸರ್ಕಾರ ಕಂಪನಿಯ ಶೇ.76ರಷ್ಟು ಶೇರುಗಳನ್ನು ಮಾರಾಟ ಮಾಡುವಲ್ಲಿ ವಿಫಲವಾಗಿತ್ತು. ಕೊನೆಗೆ ವಿಶೇಷ ಪ್ಯಾಕೇಜ್ ಹೆಸರಿನಲ್ಲಿ ವೆಹಿಕಲ್ ಏರ್ ಇಂಡಿಯಾ ಅಸೆಟ್ ಹೋಲ್ಟಿಂಗ್ಸ್ ಲಿಮಿಟೆಡ್ ಖಾತೆಗೆ 29 ಸಾವಿರ ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿತ್ತು. ಈ ಹಣಕ್ಕೆ ಏರ್ ಇಂಡಿಯಾ ಕಂಪನಿ ಸರ್ಕಾರಕ್ಕೆ ವಾರ್ಷಿಕ 4,400 ಕೋಟಿ ಬಡ್ಡಿ ಜೊತೆಗೆ 2,700 ಕೋಟಿ ಕಂತು ಪಾವತಿಸಬೇಕಿತ್ತು. ಈ ನಿರ್ಧಾರದಿಂದ ಮುಂದಿನ ಆರ್ಥಿಕ ವರ್ಷಗಳಲ್ಲಿ ಏರ್ ಇಂಡಿಯಾದ ಹಣಕಾಸಿನ ಪರಿಸ್ಥಿತಿ ಸುಧಾರಿಸಬಹುದು ಎಂದು ಅಂದಾಜಿಸಿತ್ತು. ಆದ್ರೆ ಕಂಪನಿ ಆರ್ಥಿಕ ಪರಿಸ್ಥಿತಿ ಸುಧಾರಣೆಯ ಬದಲು ಮತ್ತಷ್ಟು ಹದೆಗೆಡುತ್ತಾ ಬಂದಿದೆ.
ಪ್ರತಿನಿತ್ಯ 6 ಕೋಟಿ ನಷ್ಟ: ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಏರ್ ಇಂಡಿಯಾ ಪ್ರತಿನಿತ್ಯ ಅಂತರರಾಷ್ಟ್ರೀಯ ಸೇವೆಯಲ್ಲಿ 6 ಕೋಟಿ ರೂ. ನಷ್ಟವನ್ನು ಅನುಭವಿಸುತ್ತಿದೆ. ದೇಶದ ಗಡಿ ಪ್ರದೇಶದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣ ಆಗಿದ್ದರಿಂದ ಪಾಕಿಸ್ತಾನ ತನ್ನ ವಾಯು ಮಾರ್ಗವನ್ನು ಬಂದ್ ಮಾಡಿದೆ. ಈ ಹಿನ್ನೆಲೆಯಲ್ಲಿ ಯುರೋಪ್ ಮತ್ತು ಅಮೆರಿಕಾ ಸೇವೆಯಲ್ಲಿ ನಷ್ಟ ಅನುಭಸುವಂತಾಗಿದೆ. ನಷ್ಟ ಸರಿದೂಗಿಸುಕೊಳ್ಳಲು ಕೆಲವು ವಿಮಾನಗಳ ಹಾರಾಟವನ್ನು ನಿಲ್ಲಿಸಿದೆ.