ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ – ಏರ್ ಇಂಡಿಯಾ, ನೇಪಾಳ ಏರ್‌ಲೈನ್ಸ್ ಡಿಕ್ಕಿ ಜಸ್ಟ್ ಮಿಸ್

Public TV
2 Min Read
Flight

– 3 ನಿಯಂತ್ರಕರು ಅಮಾನತು

ಕಠ್ಮಂಡು: ಏರ್ ಇಂಡಿಯಾ (Air India) ಹಾಗೂ ನೇಪಾಳ ಏರ್‌ಲೈನ್ಸ್ (Nepal Airlines) ವಿಮಾನಗಳ (Flight) ನಡುವೆ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ತಡವಾಗಿ ವರದಿಯಾಗಿದೆ. ಎರಡೂ ವಿಮಾನಗಳ ನಡುವೆ ಡಿಕ್ಕಿ ಸಂಭವಿಸುವ ಸಾಧ್ಯತೆಯಿದ್ದು, ವಿಮಾನದ ಎಚ್ಚರಿಕೆ ವ್ಯವಸ್ಥೆ ಪೈಲಟ್‌ಗಳಿಗೆ ಅಪಾಯದ ಸೂಚನೆಯನ್ನು ನೀಡಿದ್ದರಿಂದ ದೊಡ್ಡ ಅನಾಹುತವನ್ನು ತಪ್ಪಿಸಲಾಗಿದೆ.

ವರದಿಗಳ ಪ್ರಕಾರ ಮಲೇಷ್ಯಾದ ಕೌಲಾಲಂಪುರದಿಂದ ಕಠ್ಮಂಡುಗೆ (Kathmandu) ತೆರಳುತ್ತಿದ್ದ ನೇಪಾಳ ಏರ್‌ಲೈನ್ಸ್ ವಿಮಾನ ಹಾಗೂ ದೆಹಲಿಯಿಂದ ಕಠ್ಮಂಡುಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಶುಕ್ರವಾರ ಪರಸ್ಪರ ಡಿಕ್ಕಿ ಹೊಡೆಯಲು ಅತ್ಯಂತ ಹತ್ತಿರದಲ್ಲಿತ್ತು ಎನ್ನಲಾಗಿದೆ.

ಏರ್ ಇಂಡಿಯಾ ವಿಮಾನ ಭೂಮಿಯಿಂದ 19,000 ಅಡಿ ಎತ್ತರದಿಂದ ಕೆಳಗಿಳಿಯುತ್ತಿದ್ದರೆ, ನೇಪಾಳ ಏರ್‌ಲೈನ್ಸ್ ವಿಮಾನ ಅದೇ ಸ್ಥಳದಲ್ಲಿ 15,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಎರಡು ವಿಮಾನಗಳು ಅತ್ಯಂತ ಸಮೀಪದಲ್ಲಿದೆ ಎಂದು ರಾಡಾರ್‌ನಲ್ಲಿ ತೋರಿಸಿದ್ದರಿಂದ ನೇಪಾಳ ಏರ್‌ಲೈನ್ಸ್ ವಿಮಾನ 7,000 ಅಡಿಗಳಿಗೆ ಇಳಿದಿದೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್) ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: Women’s World Boxing Championship: ಭಾರತದ ನಿಖತ್‌, ಲವ್ಲಿನಾ ಚಿನ್ನದ ಪಂಚ್‌

FLIGHT 3

ಸದ್ಯ ಎರಡು ವಿಮಾನಗಳ ನಡುವೆ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ನಾಗರಿಕ ವಿಮಾನಯಾನ ಪ್ರಾಧಿಕಾರ ಅಜಾಗರೂಕತೆ ವಹಿಸಿದ ಹಿನ್ನೆಲೆ ಏರ್ ಟ್ರಾಫಿಕ್ ಕಂಟ್ರೋಲ್ ವಿಭಾಗದ ಮೂವರು ಉದ್ಯೋಗಿಗಳನ್ನು ಅಮಾನತುಗೊಳಿಸಿದೆ. ಘಟನೆಯ ತನಿಖೆಗಾಗಿ 3 ಸದಸ್ಯರ ಸಮಿತಿಯನ್ನು ರಚಿಸಿದೆ. ಇದನ್ನೂ ಓದಿ: 2 ವರ್ಷ ಕೋವಿಡ್ ಸ್ಟ್ರಿಕ್ಟ್ ರೂಲ್ಸ್ ಬಳಿಕ ಮೊದಲ ಬಾರಿ ಚೀನಾದ ಹಾಂಕಾಂಗ್‌ನಲ್ಲಿ ಪ್ರತಿಭಟನೆ

Share This Article
Leave a Comment

Leave a Reply

Your email address will not be published. Required fields are marked *