– ಅಹಮದಾಬಾದ್ ದುರಂತದ ಬಳಿಕ ಮತ್ತೆ ಫ್ಯೂಯಲ್ ಸ್ವಿಚ್‌ನಲ್ಲಿ ಸಮಸ್ಯೆ
ನವದೆಹಲಿ: ಫ್ಯೂಯಲ್ ಕಂಟ್ರೋಲ್ ಸ್ವಿಚ್ ನಲ್ಲಿ (ಇಂಧನ ನಿಯಂತ್ರಣ ಸ್ವಿಚ್) ದೋಷ ಕಾಣಿಸಿಕೊಂಡ ಹಿನ್ನೆಲೆ ಲಂಡನ್ ನಿಂದ ಬೆಂಗಳೂರಿಗೆ (London–Bengaluru flight) ಹಾರಾಟ ನಡೆಸಲು ನಿಗದಿಯಾಗಿದ್ದ ಏರ್ ಇಂಡಿಯಾ (Air India) ಬೋಯಿಂಗ್ 787-8 ವಿಮಾನ ಹಾರಾಟವನ್ನ ಸ್ಥಗಿತಗೊಳಿಸಲಾಗಿದೆ.
ದೋಷ ಕಾಣಿಸಿಕೊಂಡ ಬಗ್ಗೆ ಪೈಲಟ್ ವರದಿ ಮಾಡಿದ ಬಳಿಕ ವಿಮಾನ ಹಾರಾಟವನ್ನ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಲಡಾಖ್ ಗಡಿ ಸಂಘರ್ಷ; ನರವಾಣೆ ಅಪ್ರಕಟಿತ ಪುಸ್ತಕ ಪ್ರಸ್ತಾಪಿಸಿದ ರಾಗಾ – ಲೋಕಸಭೆಯಲ್ಲಿ ಗದ್ದಲ

ಹೌದು. ನಿಗದಿಯಂತೆ AI132 ಸಂಖ್ಯೆಯ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಲಂಡನ್‌ನಿಂದ ಬೆಂಗಳೂರಿಗೆ ತೆರಳಬೇಕಿತ್ತು. ಆದ್ರೆ ವಿಮಾನ ಹಾರಾಟಕ್ಕೆ ಮುಂಚಿತವಾಗಿ ಪೈಲಟ್ ಕಾರ್ಯ ವಿಧಾನಗಳನ್ನ ಪರಿಶೀಲಿಸುವಾಗ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ನಲ್ಲಿ (Fuel Control Switch) ದೋಷ ಕಾಣಿಸಿಕೊಂಡಿರುವುದನ್ನ ಗುರುತಿಸಿದ್ರು. ಈ ಬಗ್ಗೆ ವಿಮಾನಯಾನ ಸಂಸ್ಥೆಗೆ ವರದಿ ಮಾಡಿದರು. ಕೂಡಲೇ ಎಚ್ಚೆತ್ತ ಸಂಸ್ಥೆ ಆ ವಿಮಾನ ಸೇವೆಯನ್ನ ರದ್ದುಗೊಳಿಸಿತು. ಇದನ್ನೂ ಓದಿ: UPI ಮೂಲಕ ಪಿಎಫ್ ಹಣ ಬ್ಯಾಂಕ್ ಖಾತೆಗೆ – ಯಾವಾಗಿಂದ? ವರ್ಗಾವಣೆ ಮಾಡೋದು ಹೇಗೆ?
ಈ ಕುರಿತು ವಿಮಾನಯಾನ ಸಂಸ್ಥೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ನಮ್ಮ ಪೈಲಟ್‌ಗಳಲ್ಲಿ ಒಬ್ಬರು ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ ಇರುವ ಬಗ್ಗೆ ವರದಿ ಮಾಡಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಬಂದಿದೆ. ಆರಂಭಿಕ ಮಾಹಿತಿ ಸ್ವೀಕರಿಸಿದ ಬಳಿಕ ವಿಮಾನ ಹಾರಾಟವನ್ನ ಸ್ಥಗಿತಗೊಳಿಸಿದ್ದೇವೆ. ಜೊತೆಗೆ ಪೈಲಟ್‌ನ ಕಾಳಜಿಗಳನ್ನು ಆದ್ಯತೆಯ ಆಧಾರದ ಮೇಲೆ ಪರಿಶೀಲಿಸಲು OEM ಒಳಗೊಳ್ಳುತ್ತಿದ್ದೇವೆ ಎಂದು ಹೇಳಿದೆ. OEM ವಿಮಾನದ ಬಿಡಿ ಭಾಗಗಳ ತಯಾರಿಕ ಸಂಸ್ಥೆಯಾಗಿದೆ.

ಅಲ್ಲದೇ ಈ ವಿಷಯವನ್ನ ಏರ್ ಇಂಡಿಯಾ ಸಂಸ್ಥೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಗೆ ಗಮನಕ್ಕೆ ತಂದಿದೆ. ವಿಮಾನ ತಯಾರಕರೊಂದಿಗೆ ಸಮನ್ವಯದ ಜೊತೆಗೆ ಹೆಚ್ಚಿನ ತಾಂತ್ರಿಕ ಪರಿಶೀಲನೆ ನಡೆಯುತ್ತಿವೆ ಎಂದು ಏರ್ ಇಂಡಿಯಾ ದೃಢಪಡಿಸಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಚಿನ್ನದ ನಿಕ್ಷೇಪಕ್ಕಾಗಿ ಶೋಧ – ಹೆಲಿಕಾಪ್ಟರ್ ಮೂಲಕ ಏರಿಯಲ್ ಸರ್ವೆ
2025 ರಲ್ಲಿ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಡಿಜಿಸಿಎ ನಿರ್ದೇಶನದಂತೆ ಏರ್ ಇಂಡಿಯಾ ತನ್ನ ಎಲ್ಲಾ ಬೋಯಿಂಗ್ 787 ವಿಮಾನಗಳಲ್ಲಿ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ಗಳ ತಪಾಸಣೆ ನಡೆಸಿತ್ತು. ಆ ನಂತರ ಯಾವುದೇ ಸಮಸ್ಯೆಗಳು ಕಂಡುಬಂದಿರಲಿಲ್ಲ. ಏರ್ ಇಂಡಿಯಾದಲ್ಲಿ, ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

