ದಿಸ್ಪುರ್: ಏರ್ ಇಂಡಿಯಾ ವಿಮಾನ ಇಂದು ಟೇಕ್ ಆಫ್ ಆದ ಕೂಡಲೇ ತುರ್ತು ಭೂಸ್ಪರ್ಶ ಮಾಡಿದ ಘಟನೆ ಅಸ್ಸಾಂನ ಸಿಲ್ಚಾರ್‌ನಲ್ಲಿ ನಡೆದಿದೆ.
ಹಿಂಬದಿಯ ಚಕ್ರ ತಾಂತ್ರಿಕ ದೋಷದಿಂದಾಗಿ ವಿಮಾನ ಟೇಕ್ ಆಫ್ ಆದ ಕೂಡಲೇ ಸಿಲ್ಚಾರ್ ಕುಂಭಿಗ್ರಾಮ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದೆ. ಈ ವಿಮಾನದಲ್ಲಿ ಪ್ರಯಾಣಿಕರು ತುಂಬಿದ್ದು, ಯಾರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ. ಇದನ್ನೂ ಓದಿ: ಮೃಗಾಲಯದ 4 ಸಿಂಹಗಳಿಗೆ ಕೊರೊನಾ ಪಾಸಿಟಿವ್
ಈ ವಿಮಾನವು ಸಿಲ್ಚಾರ್‌ನಿಂದ ಕೋಲ್ಕತ್ತಾಗೆ ಹೋಗುತ್ತಿದ್ದು, ವಿಮಾನದಲ್ಲಿ ದೋಷ ಕಂಡು ಬಂದ ಕೂಡಲೇ ಇಂದು ಬೆಳಗ್ಗೆ ಸಿಲ್ಚಾರ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಈ ರೀತಿಯ ಘಟನೆ ಇದೇ ಮೊದಲೇನೂ ಅಲ್ಲ. ಹಿಂದೆ ಇದೇ ವರ್ಷ ಜುಲೈನಲ್ಲಿ ಸೌದಿ ಅರೇಬಿಯಾಗೆ ಪ್ರಯಾಣ ಬೆಳೆಸುತ್ತಿದ್ದ ವಿಮಾನದ ವಿಂಡ್‍ಶೀಲ್ಡ್ ನಲ್ಲಿ ಬಿರುಕು ಕಾಣಿಸಿಕೊಂಡ ಕಾರಣ, ತಿರುವನಂತಪುರಂನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಕ್ತಾರರ ಪ್ರಕಾರ, ದಮ್ಮಾಮ್‍ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಐಎಕ್ಸ್-1581ನಲ್ಲಿ ಪೈಲಟ್ ವಿಂಡ್‌ಶೀಲ್ಡ್ ನಲ್ಲಿ ಬಿರುಕು ಕಂಡು ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ಈ ವಿಮಾನವನ್ನು ಸುಮಾರು ಒಂದು ಗಂಟೆಗಳ ಕಾಲ ಹಾರಾಟ ಮಾಡಿ, ನಂತರ ಮುನ್ನೆಚ್ಚರಿಕೆಯಾಗಿ ಲ್ಯಾಂಡ್ ಮಾಡಲಾಯಿತು ಎಂದು ತಿಳಿಸಿದರು. ಇದನ್ನೂ ಓದಿ: ಚಳ್ಳಕೆರೆಮ್ಮ ದೇಗುಲಕ್ಕೆ ಕನ್ನ- ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಅದು ಅಲ್ಲದೇ ಈ ವಿಮಾನದಲ್ಲಿ ಯಾವ ಪ್ರಯಾಣಿಕರು ಇರಲಿಲ್ಲ. ಬದಲಾಗಿ ಸರಕು ಮತ್ತು ಸಿಬ್ಬಂದಿ ಮಾತ್ರ ಇದ್ದರು. ಈ ಹಿನ್ನೆಲೆ ಯಾರಿಗೂ ಯಾವುದೇ ರೀತಿ ಅಪಾಯವಾಗದೆ, ವಿಮಾನದಲ್ಲಿ ದೋಷ ಕಂಡ ತಕ್ಷಣ ದಮ್ಮಾಮ್‍ನಿಂದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿ, ಕಾರ್ಯಾಚರಣೆಗೆ ನಿಗದಿಪಡಿಸಲಾಯಿತು.