-ಪ್ರಯಾಣಿಕರ ಆಕ್ರೋಶ
ವಾರಾಣಸಿ: ಇಲಿಯೊಂದು ವಿಮಾನ ಹಾರಾಟವನ್ನು 24 ಗಂಟೆ ತಡೆದಿದೆ. ಇಲಿಯಿಂದಾಗಿ ವಾರಾಣಸಿಯ ಲಾಲ್‍ಬಹದ್ದೂರ್ ಶಾಸ್ತ್ರಿ (ಎಲ್‍ಬಿಎಸ್) ಏರ್ ಪೋರ್ಟಿನಿಂದ ಶನಿವಾರ ರಾತ್ರಿ ಟೇಕಾಫ್ ಆಗಬೇಕಿದ್ದ ಸೋಮವಾರ ಬೆಳಗ್ಗೆ ಪ್ರಯಾಣ ಬೆಳೆಸಿದೆ.
ಶನಿವಾರ ರಾತ್ರಿ ವಿಮಾನದಲ್ಲಿ ಇಲಿಯೊಂದು ಕಾಣಿಸಿಕೊಂಡಿತ್ತು. ಇಲಿ ಕಾಣಿಸಿಕೊಂಡಿದ್ದರಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತಗೊಂಡಿದ್ದರು. ಸಿಬ್ಬಂದಿ ಎಷ್ಟೇ ಹುಡುಕಿದರೂ ಇಲಿ ಸಿಗದ ಕಾರಣ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ, ಹೋಟೆಲ್ ವೊಂದಕ್ಕೆ ಸ್ಥಳಾಂತರಿಸಲಾಯ್ತು.
Advertisement
Advertisement
ಏವಿಯೇಷನ್ ನಿಯಮಗಳ ಪ್ರಕಾರ, ವಿಮಾನದಲ್ಲಿ ಇಲಿ ಕಂಡು ಬಂದ್ರೆ ಟೇಕಾಫ್ ಮಾಡುವಂತಿಲ್ಲ. ಪ್ರಯಾಣ ಮಧ್ಯೆ ಇಲಿ ಯಾವುದಾದರೂ ವೈರ್ ಗಳನ್ನು ಕತ್ತರಿಸುವ ಸಾಧ್ಯತೆಗಳಿರುತ್ತವೆ. ಇದು ಪ್ರಯಾಣಿಕರು ಮತ್ತು ಸಿಬ್ಬಂದಿಯ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಏರ್ ಲೈನ್ ಅಧಿಕಾರಿಗಳು ವಿಮಾನದ ಹಾರಾಟವನ್ನು ತಡೆದು ಶನಿವಾರ ರಾತ್ರಿ ಭಾನುವಾರ ಇಲಿ ಶೋಧನೆ ಕಾರ್ಯಕ್ಕೆ ತಂಡವನ್ನು ರಚಿಸಿತ್ತು. ವಿಮಾನ ಮತ್ತೆ ಟೇಕಾಫ್ ಆಗಲು ಅಧಿಕಾರಿಗಳಿಂದ ಇಲಿ ಮುಕ್ತ (ರೋಡೆಂಟ್ ಫ್ರೀ) ಪ್ರಮಾಣ ಪತ್ರ ಪಡೆಯೋದು ಕಡ್ಡಾಯವಾಗಿತ್ತು. ಇದನ್ನೂ ಓದಿ: ಬೆಂಗ್ಳೂರು ಏರ್‌ಪೋರ್ಟ್ ರನ್ ವೇಗೆ ನುಗ್ಗಿ ವಿಮಾನಗಳ ಹಾರಾಟಕ್ಕೆ ಅಡ್ಡಿ ಪಡಿಸಿದ ಪ್ರಯಾಣಿಕರು
Advertisement
ಇಲಿ ಬಂದಿದ್ದು ಹೇಗೆ? ವಿಮಾನದೊಳಗೆ ಇಲಿ ಹೇಗೆ ಬಂತು ಪ್ರಶ್ನೆಗೆ ಸಿಬ್ಬಂದಿ ಬಳಿ ಉತ್ತರವಿಲ್ಲ. ವಾರಾಣಸಿಯಿಂದ ಟೇಕಾಫ್ ಆಗುವ ವೇಳೆ ವಿಮಾನದಲ್ಲಿ ಇಲಿ ಕಾಣಿಸಿಕೊಂಡಿತ್ತು. ಇದಕ್ಕೂ ಮೊದಲು ವಿಮಾನ ಕೋಲ್ಕತ್ತಾ ನಿಲ್ದಾಣದಿಂದ ಟೇಕಾಫ್ ಆಗಿ 80 ನಿಮಿಷ ಪ್ರಯಾಣ ಬೆಳೆಸಿ ವಾರಾಣಸಿ ತಲುಪಿತ್ತು. ಇಲಿ ಸಿಕ್ತಾ ಇಲ್ಲ ಎಂಬುದರ ಬಗ್ಗೆಯೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಟೇಕಾಫ್ ಆದ ಕೆಲವೇ ಕ್ಷಣದಲ್ಲಿ 100 ಪ್ರಯಾಣಿಕರಿದ್ದ ವಿಮಾನ ಪತನ
Advertisement
ಈ ಕುರಿತು ಪ್ರತಿಕ್ರಿಯಿಸಿರುವ ವಾರಾಣಸಿ ಏರ್ ಪೋರ್ಟ್ ನಿರ್ದೇಶಕ ಆಕಾಶದೀಪ್ ಮಾಥುರ್, ರೋ ಡೆಂಟ್ ಫ್ರೀ ಸರ್ಟಿಫಿಕೇಟ್ ಪಡೆಯುವದಕ್ಕಾಗಿ ವಿಮಾನವನ್ನು ಪೂರ್ಣ ಪರಿಶೀಲನೆಗೆ ಒಳಪಡಿಸಲಾಯ್ತು. ಶೋಧ ಕಾರ್ಯದ ಬಳಿಕ ಸೋಮವಾರ ಬೆಳಗ್ಗೆ ವಿಮಾನ ಡೆಹರಾಡೂನ್ ಗೆ ತನ್ನ ಪ್ರಯಾಣ ಬೆಳೆಸಿತು. ಶನಿವಾರ ಮಧ್ಯಾಹ್ನ 3 ಗಂಟೆ 55 ನಿಮಿಷಕ್ಕೆ ಕೋಲ್ಕತ್ತಾದಿಂದ ಟೇಕಾಫ್ ಆಗಿದ್ದ ವಿಮಾನ 80 ನಿಮಿಷದ ಬಳಿಕ ವಾರಾಣಸಿ ತಲುಪಿತ್ತು. ಶನಿವಾರ ಸಂಜೆ 6 ಗಂಟೆ 40 ನಿಮಿಷಕ್ಕೆ ವಾರಾಣಸಿಯಿಂದ ಡೆಹರಾಡೂನ್ ಗೆ ವಿಮಾನ ಟೇಕಾಫ್ ಆಗಬೇಕಿತ್ತು. ಟೇಕಾಫ್ ಕೆಲ ನಿಮಿಷಗಳ ಮುನ್ನ ಕೆಲ ಪ್ರಯಾಣಿಕರಿಗೆ ಇಲಿ ಕಾಣಿಸಿಕೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರನ್ನು ಕೆಳಗಿಳಿಸಿ ಹೋಟೆಲ್ ನಲ್ಲಿರಿಸಿ ತಪಾಸಣೆ ನಡೆಸಲಾಯ್ತು. ರೋಡೆಂಟ್ ಸರ್ಟಿಫಿಕೇಟ್ ಪಡೆದ ಬಳಿಕ ಸೋಮವಾರ ಬೆಳಗ್ಗೆ ವಿಮಾನ ಟೇಕಾಫ್ ಆಯ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಡೋನೇಷ್ಯಾ ವಿಮಾನ ದುರಂತ: ಒಟ್ಟು 190 ಪ್ರಯಾಣಿಕರಲ್ಲಿ ಒಬ್ಬ ಬದುಕುಳಿದ!
ಪ್ರಯಾಣಿಕರ ಆಕ್ರೋಶ: ಪ್ರಯಾಣ 24 ಗಂಟೆ ವಿಳಂಬವಾಗಿದ್ದಕ್ಕೆ ಪ್ರಯಾಣಿಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿ, ಜನವರಿ 25ರಂದು ಫ್ಲೈಟ್ ನಂಬರ್ ಎಐ691 ಕೋಲ್ಕತ್ತಾದಿಂದ 1 ಗಂಟೆ 15 ನಿಮಿಷ ತಡವಾಗಿ ಟೇಕಾಫ್ ಆಯ್ತು. ಅದೇ ವಿಮಾನದಲ್ಲಿ ಇಲಿ ಕಾಣಿಸಿಕೊಂಡಿದ್ದರಿಂದ ವಾರಾಣಸಿ ಪ್ರಯಾಣಿಕರನ್ನು ಕೆಳಗಿಳಿಸಲಾಯ್ತು. 24 ಗಂಟೆ ಕಳೆದರೂ ನಮಗೆ ಯಾವ ವಿಷಯವೂ ತಿಳಿಯುತ್ತಿಲ್ಲ ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ಇಂಡೋನೇಷ್ಯಾ ವಿಮಾನ ಪತನ: 189 ಮಂದಿ ದಾರುಣ ಸಾವು- ವಿಡಿಯೋ ನೋಡಿ