ನವದೆಹಲಿ: ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹಾರಾಟ ನಡೆಸಲು ಏರ್ ಇಂಡಿಯಾ (Air India) ವಿಮಾನವು 20 ಗಂಟೆ ತಡ ಮಾಡಿತು. ಪ್ರಯಾಣಕ್ಕಾಗಿ ಕಾದು ಕುಳಿತಿದ್ದ ಪ್ರಯಾಣಿಕರಲ್ಲಿ ಕೆಲವು ಎಸಿ ಇಲ್ಲದೇ ಮೂರ್ಛೆ ಹೋದರು.
ವಿಮಾನ ಪ್ರಯಾಣ ವಿಳಂಬದಿಂದ ನಮ್ಮ ಅವಸ್ಥೆ ಹೇಗಾಗಿದೆ ಎಂದು ಕೆಲವರು ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕಾರ್ಯಾಚರಣೆಯ ಸಮಸ್ಯೆಗಳಿಂದ ವಿಮಾನವು ವಿಳಂಬವಾಯಿತು. ಫ್ಲೈಟ್ ಡ್ಯೂಟಿ ಸಮಯದ ಮಿತಿಯಿಂದಾಗಿ ಸಿಬ್ಬಂದಿ ಬದಲಾವಣೆಗಾಗಿ ಕಾಯಬೇಕಾಯಿತು ಎಂದು ಏರ್‌ಲೈನ್ಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ- ಜನರಲ್ಲಿ ಕೇಜ್ರಿವಾಲ್ ಭಾವನಾತ್ಮಕ ಮನವಿ
ವಿಳಂಬದ ಕಾರಣಕ್ಕೆ ಏರ್ ಇಂಡಿಯಾ ಎಲ್ಲಾ ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ ಮತ್ತು ಹೋಟೆಲ್ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದೆ ಎನ್ನಲಾಗಿದೆ. ಆದರೆ ವಿಮಾನಯಾನ ಸಂಸ್ಥೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಇದಕ್ಕೂ ಮೊದಲು, ವಿಮಾನವು ಗುರುವಾರದಂದು ಸುಮಾರು 15300 ಗಂಟೆಗೆ ಟೇಕ್ ಆಫ್ ಆಗಬೇಕಿತ್ತು, ನಂತರ ಶುಕ್ರವಾರಕ್ಕೆ ಮರು ನಿಗದಿಪಡಿಸುವ ಮೊದಲು ಆರು ಗಂಟೆಗಳ ಕಾಲ ವಿಳಂಬವಾಯಿತು. ಇದನ್ನೂ ಓದಿ: ಪತ್ನಿ ಜೊತೆಗೆ ತಿರುಪತಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಅಮಿತ್ ಶಾ
ಅಡಚಣೆಗಾಗಿ ನಾವು ನಿಜವಾಗಿಯೂ ವಿಷಾದಿಸುತ್ತೇವೆ. ವಿಳಂಬವನ್ನು ಪರಿಹರಿಸಲು ನಮ್ಮ ತಂಡವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ನಿಮ್ಮ ನಿರಂತರ ಬೆಂಬಲ ನಮಗೆ ಅಗತ್ಯವಿದೆ. ಪ್ರಯಾಣಿಕರಿಗೆ ಅಗತ್ಯ ಸಹಾಯವನ್ನು ಒದಗಿಸಲು ನಾವು ನಮ್ಮ ತಂಡವನ್ನು ಎಚ್ಚರಿಸುತ್ತಿದ್ದೇವೆ ವಿಮಾನಯಾನ ಸಂಸ್ಥೆಗಳು ಪ್ರತಿಕ್ರಿಯಿಸಿವೆ.