ಮುಂಬೈ: ಕೇಂದ್ರ ಸರ್ಕಾರದ ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಬಿಡ್ ಗೆದ್ದ ಟಾಟಾ ಸನ್ಸ್ ಗೆ ಕೇಂದ್ರ ಸರ್ಕಾರ ಒಂದು ಷರತ್ತು ವಿಧಿಸಿದೆ. ಟಾಟಾ ಕಂಪನಿ ಕನಿಷ್ಠ ಒಂದು ವರ್ಷದವರೆಗೆ ಈಗಿರುವ ಏರ್ ಇಂಡಿಯಾದ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕೆಂದು ಸ್ಪಷ್ಟಪಡಿಸಿದೆ.
Advertisement
ಈ ಬಗ್ಗೆ ಮಾಹಿತಿ ನೀಡಿರುವ ವಿಮಾನಯಾನ ಸಚಿವಾಲಯ ಕಾರ್ಯದರ್ಶಿ ರಾಜೀವ್ ಬನ್ಸಲ್, ಏರ್ ಇಂಡಿಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಲ್ಲಾ ನೌಕರರ ಹಿತಾಸಕ್ತಿಗಳನ್ನು ಪರಿಗಣಿಸಿ, ಬಿಡ್ಡಿಂಗ್ ನಲ್ಲಿ ಗೆದ್ದಿರುವ ಟಾಟಾ ಗ್ರೂಪ್ ನೌಕರರನ್ನು ಒಂದು ವರ್ಷ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ತೆಗೆದು ಹಾಕುವಂತಿಲ್ಲ. ಜೊತೆಗೆ ಒಂದು ವರ್ಷ ನಂತರ ಸಂಸ್ಥೆ ಸೇವೆಯಿಂದ ತೆಗೆದುಹಾಕುವ ನೌಕರರಿಗೆ ವಿಆರ್‍ಎಸ್ ಸೌಲಭ್ಯವನ್ನು ನೀಡಬೇಕೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ಮಾತೃ ಸಂಸ್ಥೆಗೆ ಮಾರಾಟ
Advertisement
Advertisement
ಈ ಹಿಂದೆ ಏರ್ ಇಂಡಿಯಾದಲ್ಲಿ ಒಟ್ಟು 8 ಸಾವಿರಕ್ಕೂ ಅಧಿಕ ಖಾಯಂ ಮತ್ತು 4 ಸಾವಿರಕ್ಕೂ ಹೆಚ್ಚು ಗುತ್ತಿಗೆ ಸಿಬ್ಬಂದಿಯನ್ನು ಒಳಗೊಂಡು ಒಟ್ಟು 12 ಸಾವಿರಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 5 ಸಾವಿರ ಉದ್ಯೋಗಿಗಳು ಸಂಸ್ಥೆಯಿಂದ ನಿವೃತ್ತರಾಗಲಿದ್ದಾರೆ. ನೌಕರರ ನಿವೃತ್ತಿಯ ನಿಯಮಗಳ ಪ್ರಕಾರ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಸುಮಾರು 55 ಸಾವಿರ ನಿವೃತ್ತ ಸಿಬ್ಬಂದಿ ಏರ್ ಇಂಡಿಯಾದಿಂದ ಕೆಲ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
Advertisement
ಕೆಲದಿನಗಳ ಹಿಂದೆ ಟಾಟಾ ಕಂಪನಿ ಏರ್ ಇಂಡಿಯಾ ಬಿಡ್ ಗೆದ್ದ ಬಳಿಕ ಏರ್ ಇಂಡಿಯಾ ನೌಕರರ ಒಕ್ಕೂಟ, ನೌಕರರ ನಿವೃತ್ತಿ ಮತ್ತು ಸರ್ಕಾರದಿಂದ ಸಿಗುವ ಇತರ ಸೌಲಭ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು ಇದೀಗ ಸರ್ಕಾರ ಈ ಬಗ್ಗೆ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದೆ. ಇದನ್ನೂ ಓದಿ: ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್ ಇಂಡಿಯಾ ಎಂದ ರತನ್ ಟಾಟಾ
#FlyAI: Tokyo was one of the destinations Maharajah started frequenting in his early days. Adding an indomitable style and grace to every journey! #MaharajahReigns #GlobalMascot #IconicJourneys pic.twitter.com/rDuEJPhF8l
— Air India (@airindiain) October 9, 2021
ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತಾ, ಟಾಟಾ ಸಮೂಹ ಒಟ್ಟು 18 ಸಾವಿರ ಕೋಟಿ ರೂ. ಬಿಡ್ ಮಾಡಿತ್ತು. ಡಿ.10ರ ವೇಳೆ ಸಂಪೂರ್ಣವಾಗಿ ಏರ್ ಇಂಡಿಯಾವನ್ನು ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.