ಏರ್‌ ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್‌ಲೈನ್: ಸಚಿವ ರಾಮಮೋಹನ್ ನಾಯ್ಡು

Public TV
3 Min Read
Ram Mohan Naidu

– ಏರ್‌ಇಂಡಿಯಾ ವಿಮಾನ ಪತನದ 48 ಗಂಟೆ ಬಳಿಕ ಮೊದಲ ಸುದ್ದಿಗೋಷ್ಠಿ
– ಬ್ಲ್ಯಾಕ್‌ಬಾಕ್ಸ್‌ ಡಿಕೋಡ್‌ ಮಾಡಲಾಗುತ್ತಿದೆ, ನಿಖರ ಕಾರಣ ತಿಳಿಯಲಿದೆ ಎಂದ ಸಚಿವ

ನವದೆಹಲಿ: ಜೂನ್‌ 12ರಂದು ಅಹಮದಾಬಾದ್‌ನ ಮೇಘನಿನಗರದಲ್ಲಿ ಸಂಭವಿಸಿದ ವಿಮಾನ ದುರಂತ (Air India Plane Crash) ಪ್ರಕರಣದ ತನಿಖೆಗೆ ಉನ್ನತ ಮಟ್ಟದ ಸಮಿತಿ ನಿಯೋಜಿಸಲಾಗಿದೆ. ಕೇಂದ್ರ ಗೃಹಸಚಿವಾಲಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, 3 ತಿಂಗಳ ಗಡುವು ನಿಗದಿಪಡಿಸಲಾಗಿದೆ ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (Ram Mohan Naidu) ಹೇಳಿದರು.

ಏರ್‌ ಇಂಡಿಯಾ ವಿಮಾನ ದುರಂತ ನಡೆದ 48 ಗಂಟೆ ಬಳಿಕ ಮೊದಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಗಡುವು ನಿಗದಿಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು ವಿಮಾನದಿಂದ ಜಂಪ್ ಮಾಡ್ಲಿಲ್ಲ – ದೊಡ್ಡ ಆಪತ್ತಿನಿಂದ ರಮೇಶ್ ವಿಶ್ವಾಸ್ ಕುಮಾರ್ ಪಾರಾಗಿದ್ದು ಹೇಗೆ?

ವಿಮಾನ ದುರಂತ ನಡೆದಿದ್ದು ನಿಜಕ್ಕೂ ದುರದೃಷ್ಟಕರ. ನಾನೂ ನನ್ನ ಅಪ್ಪನನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದೇನೆ. ಹಾಗಾಗಿ ಕುಟುಂಬಸ್ಥರ ಕಷ್ಟ ನನಗೆ ಅರ್ಥವಾಗುತ್ತದೆ. ಮೃತರ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಸೂಚನೆ ನೀಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ – ಅವಶೇಷಗಳ ತೆರವು ಕಾರ್ಯ ಆರಂಭ

pm modi visits plane crash site in ahmedabad 6

ಬ್ಲ್ಯಾಕ್‌ಬಾಕ್ಸ್‌ ಡಿಕೋಡ್‌ ಮಾಡಲಾಗ್ತಿದೆ:
ಮುಂದುವರಿದು… ಶುಕ್ರವಾರ ಸಂಜೆ 5 ಗಂಟೆ ವೇಳೆಗೆ ಬ್ಲ್ಯಾಕ್‌ಬಾಕ್ಸ್‌ (Black Box) ಪತ್ತೆ ಮಾಡಲಾಗಿದ್ದು, ದತ್ತಾಂಶವನ್ನು (Black Box Data) ಡಿಕೋಡ್‌ ಮಾಡಲಾಗುತ್ತಿದೆ. ಇದರ ದತ್ತಾಂಶದಿಂದ ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತಿಳಿಯಲಿದೆ. ಅಲ್ಲದೇ ಅನೇಕ ತನಿಖಾ ಸಂಸ್ಥೆಗಳು ಹಾಗೂ ಕೇಂದ್ರದ ಉನ್ನತ ಮಟ್ಟದ ಸಮಿತಿ ಸಹ ವಿಮಾನ ದುರಂತದ ಬಗ್ಗೆ ತನಿಖೆ ನಡೆಸುತ್ತಿವೆ ಎಂದು ವಿವರಿಸಿದರು.

ವಿಮಾನ ದುರಂತವನ್ನು ವಿಮಾನಯಾನ ಸಚಿವಾಲಯವು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ. ಅದಕ್ಕಾಗಿ ಅಪಘಾತ ನಡೆದ ತಕ್ಷಣ ವಿಮಾನ ಅಪಘಾತ ತನಿಖಾ ಬ್ಯೂರೋ (AAIB)ಗೆ ತನಿಖೆ ನಡೆಸುವಂತೆ ಸೂಚಿಸಲಾಯಿತು. ಕೂಡಲೇ ಎಎಐಬಿ ತಂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿತ್ತು ಎಂದು ತಿಳಿಸಿದರು. ಇದನ್ನೂ ಓದಿ: 40 ರೂ. ಬದಲಿಗೆ 34,000 ರೂ. ಪೇ ಮಾಡಿದ ಪ್ರಯಾಣಿಕ – ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

Ahmedabad Plane Crash 1 1

ಕಪ್ಪು ಪೆಟ್ಟಿಗೆಯಿಂದ ಡಿಕೋಡ್‌ ಮುಕ್ತಾಯದ ಬಳಿಕ ಅಪಘಾತ ಸಮಯದಲ್ಲಿ ಅಥವಾ ಅಪಘಾತಕ್ಕೆ ಕೆಲವು ಕ್ಷಣಗಳ ಮೊದಲು ನಿಜವಾಗಿ ಏನಾಯ್ತು ಅನ್ನೋದು ಗೊತ್ತಾಗಲಿದೆ. ಎಎಐಬಿ ತನ್ನ ತನಿಖೆಯನ್ನು ಪೂರ್ಣಗೊಳಿಸಿದ ಬಳಿಕ ವರದಿ ನೀಡಲಿದ್ದು, ಏನಾಗಿದೆ ಎಂಬುದು ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Plane Crash – ನಗುಮೊಗದ ಗಗನಸಖಿ ಮನೀಷಾ ಥಾಪಾ ದುರಂತ ಅಂತ್ಯ

ಇದೇ ವೇಳೆ ಶಿಷ್ಟಾಚಾರ ಮತ್ತು ಅಪಘಾತದ ನಂತರದ ಕ್ರಮಗಳ ಬಗ್ಗೆ ಮಾತನಾಡಿದ ಸಚಿವರು, ಭಾರತವು ಕಟ್ಟುನಿಟ್ಟಿನ ಸುರಕ್ಷತಾ ಮಾನದಂಡಗಳು ಹಾಗೂ ವಾಯುಯಾನ ಸುರಕ್ಷತಾ ಚೌಕಟ್ಟನ್ನು ಹೊಂದಿದೆ. ಈ ಘಟನೆ ಬಳಿಕ ಬೋಯಿಂಗ್‌ 787 ಸರಣಿಯ ನಿಗಾ ಇಡಲಾಗಿದೆ. ಸದ್ಯ ಭಾರತದಲ್ಲಿ ಬೋಯಿಂಗ್‌ 787 ಸರಣಿಯ 34 ವಿಮಾನಗಳಿದ್ದು, ಅವುಗಳ ತಪಾಸಣೆಗೆ ಡಿಜಿಸಿಎ ಕೂಡ ಆದೇಶ ನೀಡಿದೆ. 8 ವಿಮಾನಗಳನ್ನ ಈಗಾಗಲೇ ಪರಿಶೀಲಿಸಲಾಗಿದ್ದು, ಉಳಿದ ಎಲ್ಲ ವಿಮಾನಗಳನ್ನು ತುರ್ತಾಗಿ ಪರಿಶೀಲಿಸಲಾಗುವುದು ಎಂದು ವಿವರಿಸಿದರು.

Ahmedabad Air India Plane Crash 1

ಇನ್ನೂ ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ, ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನವು ದುರಂತಕ್ಕೂ ಮುನ್ನ ಯಾವುದೇ ಅಡೆತಡೆಯಿಲ್ಲದೇ ಪ್ಯಾರಿಸ್-ದೆಹಲಿ-ಅಹಮದಾಬಾದ್ ಪ್ರಯಾಣವನ್ನ ಪೂರ್ಣಗೊಳಿಸಿತ್ತು ಎಂದು ಮಾಹಿತಿ ನೀಡಿದರು.

Share This Article