ಗಾಂಧೀನಗರ: ಗುಜರಾತ್‌ನ ಅಹಮದಾಬಾದ್‌ನಲ್ಲಿ (Ahmedabad) ಸಂಭವಿಸಿದ್ದ ವಿಮಾನ ದುರಂತದ (Plane Crash) ಬಳಿಕ ಏರ್ ಇಂಡಿಯಾ (Air India) ವಿಮಾನ ಸಂಸ್ಥೆಗೆ ಬರೋಬ್ಬರಿ 15,000 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.
ಸುದ್ದಿಮಾಧ್ಯಮವೊಂದು ಈ ಕುರಿತು ವರಿದಿ ಮಾಡಿದ್ದು, 2025ರ ಜೂ.12ರಂದು ಗುಜರಾತ್‌ನ ಅಹಮದಾಬಾದ್ ಏರ್‌ಪೋರ್ಟ್ ಬಳಿ ವಿಮಾನ ದುರಂತ ಸಂಭವಿಸಿತ್ತು. ಈ ಘಟನೆ ಬಳಿಕ ವಿಮಾನ ಸಂಸ್ಥೆಗೆ ಆರ್ಥಿಕ ಹಿನ್ನಡೆ ಕಂಡಿದ್ದು, ಬರೋಬ್ಬರಿ 15,000 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಹಿಳೆ ಬಿಟ್ಟು ಹೋಗಿದ್ದ ಪರ್ಸ್, ಐಫೋನ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಇದಕ್ಕೂ ಮುನ್ನ ಭಾರತ-ಪಾಕ್ ನಡುವಿನ ಯುದ್ಧದ ಬಳಿಕ ಪಾಕ್ ವಾಯುವಲಯ ಬಂದ್ ಮಾಡಿದ್ದಕ್ಕಾಗಿ ಏರ್ ಇಂಡಿಯಾಗೆ ನಷ್ಟವಾಗಿತ್ತು. ಆ ನಂತರ ಅಹಮದಾಬಾದ್ ವಿಮಾನ ದುರಂತದ ಬಳಿಕ ಮತ್ತಷ್ಟು ಆರ್ಥಿಕವಾಗಿ ಕುಸಿತ ಕಂಡಿದೆ. ಇನ್ನೂ ಕಳೆದ 3 ವರ್ಷಗಳಲ್ಲಿ 32,210 ಕೋಟಿ ರೂ. ನಷ್ಟ ಅನುಭವಿಸಿದೆ. ಹೀಗಾಗಿ ಕಳೆದ ವರ್ಷ ಏರ್ ಇಂಡಿಯಾವು ಸರ್ಕಾರಕ್ಕೆ 10,000 ಕೋಟಿ ರೂ. ಹೆಚ್ಚುವರಿ ಸಹಾಯ ಕೋರಿತ್ತು ಎನ್ನಲಾಗಿದೆ.

