ಮುಂಬೈ: ಟೀಂ ಇಂಡಿಯಾದ (Team India) ಮಾಜಿ ನಾಯಕ ಎಂ.ಎಸ್ ಧೋನಿ (MS Dhoni) ಕೋಟ್ಯಂತರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಅಭಿಮಾನಿಗಳು ಒಮ್ಮೆಯಾದ್ರೂ ಮಹಿಯನ್ನ ಹತ್ತಿರದಿಂದ ನೋಡ್ಬೇಕು ಅಂತಾ ಆಸೆ ಪಡ್ತಾರೆ. ಅಂತಹ ಒಂದು ಕ್ಷಣ ಸಿಕ್ಕರೂ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲಾರದೇ ಇರೋದಿಲ್ಲ. 2023 IPL ಟೂರ್ನಿಯಲ್ಲಿ ಮಹಿ ನೋಡಲೆಂದೇ ಸಾವಿರಾರು ಕಿಲೋ ಮೀಟರ್‌ಗಳಿಂದ ಅಭಿಮಾನಿಗಳು ಬಂದಿದ್ರು. ಇದೀಗ ಗಗನಸಖಿಯೊಬ್ಬಳು ಅಂತಹದ್ದೇ ಕ್ಷಣವನ್ನ ಫೋಟೋದಲ್ಲಿ ಸೆರೆಹಿಡಿಯಲು ಹೋಗಿ ಸುದ್ದಿಯಾಗಿದ್ದಾಳೆ.
Cutest video of the day ❤️????#MSDhoni pic.twitter.com/7uSSJepSgM
— Chakri Dhoni (@ChakriDhoni17) July 29, 2023
ಇತ್ತೀಚೆಗೆ ವಿಮಾನ ಪ್ರಯಾಣ ಸಮಯದಲ್ಲಿ MSD ಪಕ್ಕದಲ್ಲಿ ನಿಂತು ಗಗನ ಸಖಿಯೊಬ್ಬಳು (Air Hostess) ಫೋಟೋ ತೆಗೆದುಕೊಂಡಿದ್ದಾಳೆ. ಆದ್ರೆ ಈ ಫೋಟೋ ತೆಗೆದುಕೊಳ್ಳುವಾಗ ಧೋನಿ ಸಣ್ಣ ನಿದ್ರೆಗೆ ಜಾರಿದ್ದರು. ಹಾಗಾಗಿ ಇದು ಅವರಿಗೆ ಗೊತ್ತೇ ಇರಲಿಲ್ಲ. ಈ ಫೋಟೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಗಗನಸಖಿ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 48 ರನ್ ಚಚ್ಚಿದ ಆಫ್ಘನ್ ಬ್ಯಾಟರ್ – ಮೈದಾನದಲ್ಲೇ ಕಣ್ಣೀರಿಟ್ಟ ಬೌಲರ್
ಒಬ್ಬ ಅಭಿಮಾನಿಯಾಗಿ ನಾನು ಸಹ ಅವರನ್ನ ನೋಡಲು ಬಯಸುತ್ತೇನೆ. ಆದ್ರೆ ಅವರ ಅನುಮತಿಯಿಲ್ಲದೇ ಅವರ ಪರ್ಸನಲ್ ಸ್ಪೇಸ್‌ಗೆ ಅಡ್ಡಿಪಡಿಸಲು ಬಯಸುವುದಿಲ್ಲ. ಇನ್ಮುಂದೆ ಹೀಗೆ ಮಾಡ್ಬೇಡಿ ಅಂತಾ ಅಭಿಮಾನಿಯೊಬ್ಬರು ಕೇಳಿಕೊಂಡಿದ್ದಾರೆ. ಮತ್ತೊಬ್ಬರು, ಯಾರಾದರೂ ಗಗನಸಖಿಯರಿಗೆ ಹೆಚ್ಚು ವೃತ್ತಿಪರರಾಗಿರಲು ಮತ್ತು ಅವರ ಗೌಪ್ಯತೆಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಸೂಚಿಸಬಹುದೇ ಅಂತಾ ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಧೋನಿ ಜಾಗದಲ್ಲಿ ಯುವತಿ, ಗಗನಸಖಿ ಜಾಗದಲ್ಲಿ ಧೋನಿ ಇದ್ದರೆ ಇಷ್ಟು ಹೊತ್ತಿಗೆ ಮಹಿಳಾ ಹೋರಾಟಗಾರರು ಕಟು ಪದಗಳಲ್ಲಿ ಟೀಕೆ ಮಾಡುತ್ತಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 5 ಬಾರಿ ಚಾಂಪಿಯನ್ ಟ್ರೋಫಿ ಎತ್ತಿ ಹಿಡಿದಿರುವ ಮಹಿ ಮುಂದಿನ ಋತುವಿನಲ್ಲೂ ಕಾಣಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇದರಿಂದ ಅಭಿಮಾನಿಗಳು ಸಂತಗೊಂಡಿದ್ದಾರೆ. ಇತ್ತೀಚೆಗೆ ತಮ್ಮದೇ ನಿರ್ಮಾಣ ಧೋನಿ ಎಂಟರ್ಟೈನ್ಮೆಂಟ್ ಪ್ರೈವೇಟ್ ಸಂಸ್ಥೆ ಪ್ರಾರಂಭಿಸುವ ಮೂಲಕ ಮನರಂಜನಾ ಜಗತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಂಡೀಸ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು – ನಾಯಕತ್ವದ ಹೊಣೆ ಹೊತ್ತ ಪಾಂಡ್ಯ ರಿಯಾಕ್ಷನ್ ಏನು?
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]