Connect with us

Bengaluru City

ವನ್ಯಜೀವಿ ಮಂಡಳಿಯಲ್ಲಿ ಪರಿಪಾಲಕ ಹುದ್ದೆ ಸಿಕ್ಕಿದ್ದು ಹೇಗೆ: ಮಾಜಿ ಗಗನಸಖಿ ಪ್ರೇರಣಾ ವಿವರಿಸಿದ್ರು

Published

on

Share this

ಬೆಂಗಳೂರು: ಚಾಮರಾಜನಗರ ವನ್ಯಜೀವಿ ಮಂಡಳಿಯ ಪರಿಪಾಲಕ ಹುದ್ದೆ ಸಿಗುವಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಪಾತ್ರವಿಲ್ಲ ಎಂದು ಮಾಜಿ ಗಗನಸಖಿ ಪ್ರೇರಣಾ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಪ್ರಭಾವ ಬಳಸಿ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಪಡೆದಿಕೊಂಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಾನು ಸಣ್ಣ ವಯಸ್ಸಿನಿಂದಲೇ ಅರಣ್ಯದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದೇನೆ. 2013ರಲ್ಲಿ ಅರಣ್ಯ ಇಲಾಖೆಯವರು ಭಾಗವಹಿಸಿದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಮಾಣ ಪತ್ರವನ್ನು ಪಡೆದುಕೊಂದಿದ್ದೇನೆ. ಪರಿಸರಕ್ಕೆ ಸಂಬಂಧಿಸಿದ್ದಂತೆ ನಾನು ಒಂದು ಟ್ರಸ್ಟ್ ಸ್ಥಾಪಿಸಿದ್ದೇನೆ. ನನ್ನ ಅರ್ಹತೆಯ ಆಧಾರದಲ್ಲಿ ನನಗೆ ಈ ಹುದ್ದೆ ಸಿಕ್ಕಿದೆ ಹೊರತು ಇದಕ್ಕೆ ಯಾರ ಪ್ರಭಾವ ಬಳಸಿಲ್ಲ ಎಂದು ತಿಳಿಸಿದರು.

ನಿಯಮಗಳ ಪ್ರಕಾರ ಈ ಹುದ್ದೆಗೆ ಸ್ಥಳೀಯರಿಗೆ ಸಿಗಬೇಕು. ಆದರೆ ನಿಯಮವನ್ನು ಗಾಳಿಗೆ ತೂರಿ ನಿಮಗೆ ಹುದ್ದೆ ಸಿಕ್ಕಿದೆ ಎಂದು ದೂರುದಾರರು ಆರೋಪಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಇದೊಂದು ಆಧಾರರಹಿತ ಆರೋಪ. ಈ ಹುದ್ದೆ ಸಲ್ಲಿಸುವ ಅಭ್ಯರ್ಥಿ ಅರಣ್ಯದ ಬಗ್ಗೆ ಆಸಕ್ತಿ ಹೊಂದಿರಬೇಕು ಎನ್ನುವ ನಿಯಮವಿದೆ ಹೊರತು ಬೇರೆ ಯಾವುದೇ ನಿಯಮವಿಲ್ಲ. ಸರಿಯಾಗಿ ನಿಯಮವನ್ನು ಓದದೇ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದು ಉತ್ತರಿಸಿದರು.

ಕೆಪಿಸಿಸಿ ಐಟಿ ಸೆಲ್‍ನಲ್ಲಿ ನಿಮಗೆ ಜಂಟಿ ಕಾರ್ಯದರ್ಶಿ ಹುದ್ದೆ ಸಿಕ್ಕಿದೆ. ಈ ಹುದ್ದೆ ಸಿಗಬೇಕಾದರೆ ಪರಮೇಶ್ವರ್ ಶಿಫಾರಸು ಇತ್ತು ಎನ್ನುವ ಮಾತು ಕೇಳಿ ಬಂದಿದೆ ಎಂದು ಕೇಳಿದ್ದಕ್ಕೆ, ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದು ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಪರಮೇಶ್ವರ್ ಬಂದಿದ್ದರು. ನಾನು ವೇದಿಕೆಯ ಮೇಲೆ ಕುಳಿತಿದ್ದೆ. ಪರಮೇಶ್ವರ್ ಜೊತೆಗೆ ವೇದಿಕೆಯ ಮೇಲೆ ಕುಳಿತ್ತಿದ್ದ ಫೋಟೋವನ್ನು ನಾನು ವಾಟ್ಸಪ್ ಡಿಪಿ ಮಾಡಿದ್ದೆ. ಈ ಕಾರ್ಯಕ್ರಮಕ್ಕೂ ಮುನ್ನ ನಾನು ಪರಮೇಶ್ವರ್ ಜೊತೆಗೆ ಮಾತನಾಡಿಲ್ಲ. ಮೊದಲ ಬಾರಿಗೆ ಅವರನ್ನು ನೋಡಿದ್ದೆ ಈ ಕಾರ್ಯಕ್ರಮದಲ್ಲಿ. ಈ ವಿಚಾರವನ್ನು ತಿಳಿಯದವರು ಈ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಅರ್ಜಿ ಸಲ್ಲಿಸಿಯೂ ಈ ಹುದ್ದೆ ಸಿಗದವರು ನನ್ನ ವಿರುದ್ಧ ದೂರು ನೀಡಿರಬಹುದು. ನನ್ನ ವಿರುದ್ಧ ಮಾಡಿರುವ ಎಲ್ಲ ಆರೋಪಗಳು ಸುಳ್ಳು. ಗಗನ ಸಖಿಯಾದವರು ಈ ಹುದ್ದೆ ಪಡೆಯಬಾರದು ಎನ್ನುವ ನಿಯಮ ಇದರಲ್ಲಿ ಇದ್ಯಾ ಎಂದು ಅವರು ಪ್ರಶ್ನಿಸಿದರು.

ಈ ವೇಳೆ ನಮ್ಮ ಕುಟುಂಬದವರು ಈ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ನನಗೂ ಕಾಂಗ್ರೆಸ್ ಬಗ್ಗೆ ಒಲವು ಇದೆ. ಹೀಗಾಗಿ ನನಗೆ ಕೆಪಿಸಿಸಿ ಐಟಿ ಸೆಲ್ ನಲ್ಲಿ ಉದ್ಯೋಗ ಸಿಕ್ಕಿದೆ ಎಂದು ಪ್ರೇರಣಾ ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ನಾಗರಾಜ್ ಪ್ರೇರಣಾಗೆ ಸರ್ಕಾರ ನೀಡಿದ್ದ ಹುದ್ದೆ ಪ್ರಶ್ನಿಸಿ ರಾಜ್ಯಪಾಲರಿಗೂ ಪತ್ರ ಬರೆದು ದೂರು ನೀಡಿದ್ದಾರೆ. ಅರ್ಹತೆ ಇಲ್ಲದೆ ಇದ್ದರೂ ಈಕೆಗೆ ಹುದ್ದೆ ನೀಡಲಾಗಿದೆ. ಈಕೆಯ ಹಿಂದೆ ದೊಡ್ಡ ರಾಜಕೀಯ ವ್ಯಕ್ತಿಗಳ ಕೈವಾಡ ಇದೆ ಎಂದು ದೂರಿನಲ್ಲಿ ಆರೋಪಿಸಿದ್ದರು.

 

https://youtu.be/OPdCm_RBDLs

 

 

Click to comment

Leave a Reply

Your email address will not be published. Required fields are marked *

Advertisement