ಗರಿಗರಿಯಾದ ಏರ್ ಫ್ರೈಯರ್ ಸ್ಪೈಸಿ ಹನಿ ಚಿಕನ್ ವಿಂಗ್ಸ್ ಪಾರ್ಟಿ, ಗೇಮ್ಸ್ ಅಥವಾ ಯಾವುದೇ ಲಘು ಭೋಜನಕ್ಕೆ ಪರ್ಫೆಕ್ಟ್ ಖಾದ್ಯವಾಗಿದೆ. ಸಿಹಿ ಹಾಗೂ ಮಸಾಲೆಯುಕ್ತ ಚಿಕನ್ ವಿಂಗ್ಸ್ ಅನ್ನು ಏರ್ ಫ್ರೈಯರ್‌ನಲ್ಲಿ ಮಾಡೋದು ಇತರ ವಿಧಾನಗಳಿಗಿಂತಲೂ ಆರೋಗ್ಯಕರ ಎನಿಸುತ್ತದೆ. ಏಕೆಂದರೆ ಇದನ್ನು ಹುರಿಯಲು ಹೆಚ್ಚು ಎಣ್ಣೆಯ ಅಗತ್ಯವಿಲ್ಲ. ಸಂಡೇ ಫ್ರೀ ಟೈಮ್‌ನಲ್ಲಿ ಒಮ್ಮೆ ಈ ರೆಸಿಪಿ ಟ್ರೈ ಮಾಡಿ. ನಿಮ್ಮ ನೆಚ್ಚಿನ ಏರ್ ಫ್ರೈಯರ್ ರೆಸಿಪಿಗಳಲಿ ಇದು ಒಂದಾಗೋದು ಖಂಡಿತ.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ ವಿಂಗ್ಸ್ – 1 ಕೆಜಿ
ಉಪ್ಪು – ಅರ್ಧ ಟೀಸ್ಪೂನ್
ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಆಲಿವ್ ಎಣ್ಣೆ – 1 ಟೀಸ್ಪೂನ್
ಸ್ಪೈಸಿ ಹನಿ ಸಾಸ್ ತಯಾರಿಸಲು:
ಕಿತ್ತಳೆ ರಸ – ಅರ್ಧ ಕಪ್
ನಿಂಬೆ ರಸ – 3
ಬೀಜ ಬೇರ್ಪಡಿಸಿದ ಒಣ ಕೆಂಪು ಮೆಣಸಿನಕಾಯಿ – 6
ಆಪಲ್ ವಿನೆಗರ್ – ಒಂದೂವರೆ ಟೀಸ್ಪೂನ್
ಬೆಳ್ಳುಳ್ಳಿ – 2
ಹೆಚ್ಚಿದ ಈರುಳ್ಳಿ – 2 ಟೀಸ್ಪೂನ್
ನೀರು – ಅರ್ಧ ಕಪ್
ಜೇನುತುಪ್ಪ – 2 ಟೀಸ್ಪೂನ್ ಇದನ್ನೂ ಓದಿ: 30 ನಿಮಿಷಗಳಲ್ಲಿ ಮಾಡಿ ಚೀಸೀ ಗಾರ್ಲಿಕ್ ಸಿಗಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಚಿಕನ್ ವಿಂಗ್ಸ್‌ಗಳನ್ನು ಸ್ವಚ್ಛಗೊಳಿಸಿ, ಒಂದು ಬಟ್ಟಲಿಗೆ ಹಾಕಿ ಉಪ್ಪು, ಕರಿಮೆಣಸು, ಆಲಿವ್ ಎಣ್ಣೆ ಸೇರಿಸಿ, ಚೆನ್ನಾಗಿ ಸಂಯೋಜಿಸುವಂತೆ ಮಿಶ್ರಣ ಮಾಡಿ.
* ಏರ್ ಫ್ರೈಯರ್ ಅನ್ನು 390 ಡಿಗ್ರಿಗೆ 20-25 ನಿಮಿಷಗಳ ಕಾಲ ಪೂರ್ವಭಾವಿಯಾಗಿ ಕಾಯಿಸಿ, ಟ್ರೇಯಲ್ಲಿ ಚಿಕನ್ ವಿಂಗ್ಸ್‌ಗಳನ್ನು ಇರಿಸಿ, ಬೇಯಿಸಿಕೊಳ್ಳಿ. (ನಿಮ್ಮ ಬಳಿ ಚಿಕ್ಕ ಏರ್ ಫ್ರೈಯರ್ ಇದ್ದರೆ ಬ್ಯಾಚ್‌ಗಳಲ್ಲಿ ಬೇಯಿಸಿಕೊಳ್ಳಬಹುದು)
* ಈ ನಡುವೆ ಸಾಸ್ ತಯಾರಿಸಲು ಒಂದು ಪಾತ್ರೆಯಲ್ಲಿ ಅರ್ಧ ಕಪ್ ನೀರು ಹಾಕಿ ಬೀಜ ಬೇರ್ಪಡಿಸಿದ ಒಣ ಕೆಂಪು ಮೆಣಸಿನಕಾಯಿ ಅದರಲ್ಲಿ ಹಾಕಿ ಸುಮಾರು 5 ನಿಮಿಷಗಳ ಕಾಲ ಕುದಿಸಿ.
* ಬ್ಲೆಂಡರ್‌ಗೆ ಬೆಳ್ಳುಳ್ಳಿ, ಈರುಳ್ಳಿ, ಕಿತ್ತಳೆ ರಸ, ನಿಂಬೆ ರಸ ಹಾಗೂ ವಿನೆಗರ್ ಹಾಕಿ, ಕುದಿಸಿಕೊಂಡಿದ್ದ ಮೆಣಸನ್ನು ನೀರು ಸಮೇತವಾಗಿ ಅದರಲ್ಲಿ ಸುರಿದು ನಯವಾಗುವತನಕ ಬ್ಲೆಂಡ್ ಮಾಡಿ.
* ಒಂದು ಪಾತ್ರೆಗೆ 1 ಟೀಸ್ಪೂನ್ ಆಲಿವ್ ಎಣ್ಣೆ ಹಾಕಿ ಬಿಸಿ ಮಾಡಿ, ತಯಾರಿಸಿಟ್ಟ ಸಾಸ್ ಅನ್ನು ಅದರಲ್ಲಿ ಹಾಕಿ ಸ್ವಲ್ಪ ದಪ್ಪವಾಗುವವರೆಗೆ ಸುಮಾರು 10 ನಿಮಿಷ ಬಿಸಿ ಮಾಡಿ.
* ಅದು ಬಿಸಿಯಾಗುತ್ತಿದ್ದಂತೆ ಜೇನುತುಪ್ಪ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಮೆಣಸಿನ ಪುಡಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
* ಏರ್ ಫ್ರೈಯರ್‌ನಿಂದ ಚಿಕನ್ ವಿಂಗ್ಸ್‌ಗಳನ್ನು ತೆಗೆದು, ಒಂದು ಬಟ್ಟಲಿನಲ್ಲಿರಿಸಿ. ಅದರ ಮೇಲೆ ತಯಾರಿಸಿಟ್ಟ ಸಾಸ್ ಸುರಿದು ಚಿಕನ್‌ಗೆ ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿ.
* ಇದೀಗ ಸ್ಪೈಸಿ ಹನಿ ಚಿಕನ್ ವಿಂಗ್ಸ್ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಟ್ರೈ ಮಾಡಿ ಬಾರ್ಬೆಕ್ಯೂ ಚಿಕನ್ ಸಲಾಡ್
Advertisement
Web Stories