ನವದೆಹಲಿ: ಭಾರತೀಯ ವಾಯುಸೇನೆಗೆ ಸೇರಿದ ಯುದ್ಧ ವಿಮಾನ ಸುಖೋಯ್-30 ನಾಪತ್ತೆಯಾಗಿದೆ.
ಇಂದು ಬೆಳಿಗ್ಗೆ ಅಸ್ಸಾಂನ ತೇಜ್‍ಪುರ್ ಬಳಿ ಚೀನಾ ಗಡಿಯ ಸಮೀಪ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನ ನಾಪತ್ತೆಯಾಗಿದೆ. ಬೆಳಿಗ್ಗೆ 9.30ಕ್ಕೆ ಟೇಕ್ ಆಫ್ ಆದ ವಿಮಾನ ಅರುಣಾಚಲಪ್ರದೇಶದ ದೌಲಾಸಾಂಗ್ ಪ್ರದೇಶದ ಬಳಿ ವಿಮಾನ ಕಾಣೆಯಾಗಿದೆ. ವಿಮಾನ ಕೊನೆಯ ಬಾರಿ ಸಂಪರ್ಕಕ್ಕೆ ಸಿಕ್ಕಿದ್ದು ಸುಮಾರು 11.30ರ ವೇಳೆಗೆ ತೇಜ್‍ಪುರ್‍ನಿಂದ 60 ಕಿ.ಮೀ ದೂರದಲ್ಲಿದ್ದಾಗ ಎಂದು ವರದಿಯಾಗಿದೆ.
Advertisement
ವಿಮಾನದಲ್ಲಿ ಇಬ್ಬರು ಪೈಲಟ್‍ಗಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ತೇಜ್‍ಪುರ್ ವಾಯುಪಡೆ ನಿಲ್ದಾಣ ಚೀನಾ ಗಡಿಯಿಂದ ಸುಮಾರು 172 ಕಿ.ಮೀ ದೂರದಲ್ಲಿದೆ.
Advertisement
ಇದೇ ವರ್ಷ ಮಾರ್ಚ್ ನಲ್ಲಿ ಸುಖೋಯ್-30 ಯುದ್ಧವಿಮಾನ ರಾಜಸ್ಥಾನದ ಬರ್ಮರ್ ವಾಯುನೆಲೆ ಬಳಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ ಇಬ್ಬರು ಪೈಲೆಟ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದರು.
Advertisement
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Advertisement
Su-30 aircraft on a routine training mission goes missing, lost radar 60 Km North of Tezpur: IAF Sources pic.twitter.com/R6vzxjkOHi
— ANI (@ANI_news) May 23, 2017