ಲಕ್ನೋ: ಭಾರತೀಯ ವಾಯುಪಡೆಯ (Indian Air Force) MiG-29 ಫೈಟರ್ ಜೆಟ್ (MiG-29 fighter jet) ಪತನಗೊಂಡು ಹೊತ್ತಿ ಉರಿದ ಘಟನೆ ಉತ್ತರ ಪ್ರದೇಶದ (Uttar Pradesh) ಆಗ್ರಾದ (Agra) ಸಾಂಗಾ ಗ್ರಾಮದಲ್ಲಿ ನಡೆದಿದೆ. ಅವಘಡದಲ್ಲಿ ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದಾರೆ.
ಮಿಗ್ -29 ವಿಮಾನವು ತರಬೇತಿಯ ಸಮಯದಲ್ಲಿ ತಾಂತ್ರಿಕ ಸಮಸ್ಯೆ ಎದುರಿಸಿದೆ. ಬಳಿಕ ವಿಮಾನ ಪತನಗೊಂಡು ಹೊತ್ತಿ ಉರಿದಿದೆ. ಇಂತಹ ಸಮಯದಲ್ಲೂ ಪೈಲಟ್ ನೆಲದಲ್ಲಿ ಯಾವುದೇ ಜೀವ ಅಥವಾ ಆಸ್ತಿಗೆ ಹಾನಿಯಾಗದಂತೆ ನೋಡಿಕೊಂಡಿದ್ದಾರೆ. ವಿಮಾನ ಪತನಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.
Advertisement
Advertisement
ಸದ್ಯ ʼಹಾರುವ ಶವಪೆಟ್ಟಿಗೆʼ ಎಂದೇ ಮಿಗ್ ವಿಮಾನಗಳು ಕುಖ್ಯಾತವಾಗಿದ್ದು, ಮಿಗ್ 29 ವಿಮಾನಗಳನ್ನು 1987 ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿತ್ತು.
Advertisement
Advertisement
ಎರಡು ತಿಂಗಳ ಅವಧಿಯಲ್ಲಿ ಇದು ಎರಡನೇ MiG-29 ಅಪಘಾತವಾಗಿದೆ. ಸೆಪ್ಟೆಂಬರ್‌ನಲ್ಲಿ, ಮಿಗ್ -29 ರಾಜಸ್ಥಾನದ ಬಾರ್ಮರ್‌ನಲ್ಲಿ ತಾಂತ್ರಿಕ ಅಡಚಣೆಯನ್ನು ಎದುರಿಸಿ ಪತನಗೊಂಡಿತ್ತು. ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದರು.