ರಾಜಸ್ಥಾನದಲ್ಲಿ ಮಿಗ್-27 ವಿಮಾನ ಪತನ: ಪೈಲಟ್ ಪಾರು

Public TV
1 Min Read
MIG 27

ಜೈಪುರ್: ಭಾರತೀಯ ವಾಯುಪಡೆಯ ಮಿಗ್ 27 ಯುದ್ಧ ವಿಮಾನವೊಂದು ಇಂದು ಬೆಳಗ್ಗೆ ರಾಜಸ್ಥಾನದ ಸಿರೋಹಿ ಎಂಬಲ್ಲಿ ಪತನಗೊಂಡಿದೆ. ಅದೃಷ್ಟವಶಾತ್ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಾರ್ಮರ್ ವಾಯು ಪಡೆ ನೆಲೆಯಿಂದ ಮಿಗ್ 27 ಯುಪಿಜಿ ವಿಮಾನವು ಹಾರಾಟ ಆರಂಭಿಸಿತ್ತು. ಜೋಧ್‍ಪುರದಿಂದ 120 ಕಿ.ಮೀ. ದೂರದಲ್ಲಿರುವ ಸಿರೋಹಿ ಹೊರ ವಲಯದಲ್ಲಿ 11.45 ಗಂಟೆಗೆ ಪತನಗೊಂಡಿದೆ.

ಎಂಜಿನ್ ವೈಫಲ್ಯದಿಂದ ವಿಮಾನ ಪತನಗೊಂಡಿದೆ ತಕ್ಷಣವೇ ಪೈಲಟ್ ಪ್ಯಾರಾಚೂಟ್ ಸಹಾಯದಿಂದ ಕೆಳಗೆ ಹಾರಿದ್ದು, ಸುರಕ್ಷಿತವಾಗಿ ಭೂಮಿಯನ್ನು ತಲುಪಿದ್ದಾರೆ ಎಂದು ವರದಿಯಾಗಿದೆ. ಈ ತ್ರೈಮಾಸಿಕದಲ್ಲಿ ವಾಯುಸೇನೆಯ ಒಟ್ಟು 9 ಮಿಗ್ ವಿಮಾನಗಳು ಪತನಗೊಂಡಿವೆ.

ರಾಜಸ್ಥಾನದ ಬಿಕಾನೇರ್ ಪ್ರದೇಶದಲ್ಲಿ ಇದೇ ತಿಂಗಳ 3ರಂದು ಮಿಗ್-21 ಯುದ್ಧ ವಿಮಾನ ಪತನಗೊಂಡಿತ್ತು. ಪ್ಯಾರಾಚೂಟ್ ಸಹಾಯದಿಂದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದರು.

1963 ರಿಂದ ಇಲ್ಲಿಯವರೆಗೆ ಒಟ್ಟು ರಷ್ಯಾದಿಂದ 1200 ಮಿಗ್ ವಿಮಾನವನ್ನು ಭಾರತ ಖರೀದಿಸಿದ್ದು, ಇದರಲ್ಲಿ 500 ಕ್ಕೂ ಹೆಚ್ಚು ವಿಮಾನಗಳು ಹಾರಾಟದ ಸಮಯದಲ್ಲೇ ಪತನ ಹೊಂದಿದೆ. ಹಾರಾಟದ ಸಮಯದಲ್ಲಿ ಎಂಜಿನ್ ವೈಫಲ್ಯಗೊಂಡು ಪತನದ ಸೂಚನೆ ಸಿಕ್ಕಿದ ಕೂಡಲೇ ಹಲವು ಪೈಲಟ್ ಗಳು ಎಜೆಕ್ಟ್ ಆಗದೇ ವಿಮಾನವನ್ನು ಜನವಸತಿ ಇಲ್ಲದ ಕಡೆಗೆ ತಿರುಗಿಸಿ ಪ್ರಾಣಬಿಟ್ಟಿದ್ದಾರೆ. ಸದ್ಯ ವಾಯುಸೇನೆಯಲ್ಲಿ ಒಟ್ಟು 112 ಮಿಗ್ ವಿಮಾನಗಳು ಕಾರ್ಯಾಚರಣೆ ಮಾಡುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *