ನವದೆಹಲಿ: ಭಾರತೀಯ ವಾಯುಪಡೆ(ಐಎಎಫ್) ಅಗ್ನಿಪಥ್ ನೇಮಕಾತಿ ಯೋಜನೆಯಡಿ ಶುಕ್ರವಾರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಕೇವಲ 4 ದಿನಗಳಲ್ಲಿ 94,000 ಅಗ್ನಿವೀರ್ ಆಕಾಂಕ್ಷಿಗಳು ಇದಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Advertisement
Advertisement
ಜೂನ್ 14ರಂದು ಅಗ್ನಿಪಥ್ ಯೋಜನೆಯನ್ನು ಕೇಂದ್ರ ಅನಾವರಣಗೊಳಿಸಿದ ಬಳಿಕ ದೇಶಾದ್ಯಂತ ಅದರ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆಯಿತು. ವಿರೋಧ ಪಕ್ಷಗಳು ಯೋನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದವು.
Advertisement
ಇಲ್ಲಿಯವರೆಗೆ ಒಟ್ಟು 94,281 ಅಗ್ನಿವೀರ್ ವಾಯುಪಡೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಜುಲೈ 5ಕ್ಕೆ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗುತ್ತದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಭರತ್ ಭೂಷಣ್ ಬಾಬು ತಿಳಿಸಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಯಲ್ಲಿ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದ ಪೊಲೀಸರು
Advertisement
ಅಗ್ನಿಪಥ್ ಯೋಜನೆಯಲ್ಲಿ 17.5 ವರ್ಷದವರಿಂದ ಹಿಡಿದು 21 ವರ್ಷ ವಯಸ್ಸಿನವರು 4 ವರ್ಷಗಳ ಅವಧಿಗೆ ಸೇನೆಗೆ ಸೇರಬಹುದು ಎಂದು ಸರ್ಕಾರ ತಿಳಿಸಿತ್ತು. 4 ವರ್ಷದ ಸೇವೆ ಮುಗಿದ ಬಳಿಕ ಶೇ.25ರಷ್ಟು ಅಗ್ನಿವೀರರನ್ನು ಸೇನೆಗೆ ನೇಮಕ ಮಾಡಲಾಗುವುದು ಎಂದು ಹೇಳಿತ್ತು. ಜೂನ್ 16ರಂದು ನೇಮಕಾತಿಗೆ ವಯಸ್ಸಿನ ಮಿತಿಯನ್ನು 21 ವರ್ಷದಿಂದ 23 ವರ್ಷಕ್ಕೆ ಹೆಚ್ಚಿಸಿತು. 4 ವರ್ಷದ ಸೇವೆಯ ಬಳಿಕ ನಿವೃತ್ತ ಅಗ್ನಿವೀರರು ಅರೆಸೇನಾ ಪಡೆ ಹಾಗೂ ಸಾರ್ವಜನಿಕ ವಲಯದ ರಕ್ಷಣಾ ಸಂಸ್ಥೆಗಳಲ್ಲಿ ಅವಕಾಶಗಳನ್ನು ಪಡೆಯಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಬಂಡಾಯ ಶಿವಸೇನೆ ಶಾಸಕರಿಗೆ ಬಿಗ್ ರಿಲೀಫ್ – ಜುಲೈ 12 ವರೆಗೂ ಅನರ್ಹತೆ ಅಸ್ತ್ರದಿಂದ ಅತೃಪ್ತರು ಸೇಫ್