ನವದೆಹಲಿ: ಭಾರತೀಯ ವಾಯುಸೇನೆಯ ಎಎನ್-32 ವಿಮಾನ ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಲೆಯಿಂದ ಕೆಲ ಗಂಟೆಗಳಿಂದ ನಾಪತ್ತೆಯಾಗಿದೆ.
ಭಾರತೀಯ ವಾಯು ಪಡೆಯ ಸರಕು ಸಾಗಾಟ ವಿಮಾನದಲ್ಲಿ 8 ಮಂದಿ ಸಿಬ್ಬಂದಿ ಮತ್ತು 5 ಮಂದಿ ಪ್ರಯಾಣಿಕರಿದ್ದರು. ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಲೆಯಿಂದ ಮಧ್ಯಾಹ್ನ 12.25ಕ್ಕೆ ಟೇಕಾಫ್ ಆಗಿದ್ದ ವಿಮಾನ 35 ನಿಮಿಷಗಳ ಕಾಲ ಸಂಪರ್ಕದಲ್ಲಿತ್ತು. ಆದರೆ ಮಧ್ಯಾಹ್ನ 1ಗಂಟೆಯ ವೇಳೆ ಸಂಪರ್ಕ ಕಳೆದುಕೊಂಡಿದೆ ಎಂದು ವಾಯು ಸೇನೆಯ ಅಧಿಕಾರಿ ತಿಳಿಸಿದ್ದಾರೆ.
Advertisement
ವಿಮಾನ ಪತ್ತೆಗಾಗಿ ಸುಖೋಯಿ-30 ಏರ್ ಕ್ರಾಫ್ಟ್ ಮತ್ತು ಸಿ-130 ಸ್ಪೆಷಲ್ ಆಪರೇಷನ್ ವಿಮಾನವನ್ನು ಬಳಕೆ ಮಾಡಲಾಗುತ್ತಿದೆ.
Advertisement
Advertisement
ಎಎನ್ 32 ರಷ್ಯಾದ ಟ್ವಿನ್ ಟರ್ಬೋಪ್ರೊಪ್ ಎಂಜಿನ್ ಹೊಂದಿದ್ದು, 1983 ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿತ್ತು. ನಾಪತ್ತೆಯಾದ ವಿಮಾನದ ದಾರಿ ಬಹಳ ಕಠಿಣವಾಗಿದ್ದು, ಬೆಟ್ಟ ಗುಡ್ಡ ಮತ್ತು ಭಾರೀ ಅರಣ್ಯವಿದೆ. ಮೆಚುಕಾ ವಾಯುನೆಲೆಯಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡುವುದು ಬಹಳ ಕಷ್ಟ ಎಂದು ವರದಿಯಾಗಿದೆ.
Advertisement
2016ರಲ್ಲಿ ವಾಯುಸೇನೆ ಎಎನ್ 32 ವಿಮಾನ ಪತನಗೊಂಡಿತ್ತು. ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತೆರಳಲು ಚೆನ್ನೈ ನಿಂದ ಟೇಕಾಫ್ ಆಗಿದ್ದ ವಿಮಾನ ನಾಪತ್ತೆಯಾಗಿತ್ತು. ಬಂಗಾಳ ಕೊಲ್ಲಿಯಲ್ಲಿ ವಿಮಾನ ಹುಡುಕುವ ಕಾರ್ಯಾಚರಣೆ ನಡೆದರೂ ಯಾವುದೇ ಅವಶೇಷ ಸಿಕ್ಕಿರಲಿಲ್ಲ. ವಿಮಾನದಲ್ಲಿದ್ದ ಎಲ್ಲ 29 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು.
Spoke to Vice Chief of @IAF_MCC, Air Marshal Rakesh Singh Bhadauria regarding the missing IAF AN-32 Aircraft which is overdue for some hours.
He has apprised me of the steps taken by the IAF to find the missing aircraft. I pray for the safety of all passengers on board.
— Rajnath Singh (@rajnathsingh) June 3, 2019
ಈ ಬಗ್ಗೆ ಭಾರತೀಯ ನೌಕಾ ಪಡೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಪಿ ಖೋಂಗ್ಸೈ ಮಾತನಾಡಿ, ಕಾಣೆಯಾದ ವಿಮಾನವನ್ನು ಪತ್ತೆಹಚ್ಚಲು ಪ್ರತಿ ಪ್ರಯತ್ನವನ್ನೂ ಮಾಡಲಾಗಿದೆ. ಭಾರತೀಯ ಸೇನೆಯ ಯೋಧರು ಮತ್ತು ಇಂಡೋ-ಟಿಬೇಟಿಯನ್ ಗಡಿಯಲ್ಲಿ ಪೊಲೀಸ್ ಇಲಾಖೆ ಹೆಲಿಕಾಪ್ಟಾರ್ ಸಹಾಯದಿಂದ ಹುಡುಕಾಟ ನಡೆಸುತ್ತಿರುವುದಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
IAF is coordinating with Indian Army, various government and civil agencies to locate the missing aircraft. Search operations will continue from air and by ground parties of Indian Army through the night. 4/4
— Indian Air Force (@IAF_MCC) June 3, 2019
ಸದ್ಯ ಕಾಣೆಯಾಗಿರುವ ಏರ್‌ಕ್ರಾಫ್ಟ್ ಬಗ್ಗೆ ಸಿಕ್ಕ ಮಾಹಿತಿ ಪ್ರಕಾರ, ಏರ್‌ಕ್ರಾಫ್ಟ್ ಕಾಣೆಯಾಗಿರುವ ಪ್ರದೇಶ ಹೆಚ್ಚು ಪರ್ವತಗಳು ಮತ್ತು ದಟ್ಟ ಅರಣ್ಯದಿಂದ ಕೂಡಿದೆ. ಹೀಗಾಗಿ ಈ ಪ್ರದೇಶದಲ್ಲಿ ಲ್ಯಾಂಡ್ ಆಗಿ ಮತ್ತೆ ಏರ್‌ಕ್ರಾಫ್ಟ್ ಟೇಕಾಫ್ ಆಗುವುದು ತುಂಬಾ ಕಷ್ಟ. ಇಲ್ಲಿನ ಹವಾಮಾನದಿಂದ ಏರ್‌ಕ್ರಾಫ್ಟ್ ಗಳು ಹಾರಾಟ ನಡೆಸಲು ಸರಿಯಾದ ವಾತಾವರಣ ಸಿಗುವುದಿಲ್ಲ.
An IAF AN-32 took off from Jorhat at 1227 hrs for Menchuka ALG. Aircraft last contacted ground control at 1300 hrs. There was no further contact with the aircraft. Efforts are on to establish the whereabouts of the aircraft. 1/4
— Indian Air Force (@IAF_MCC) June 3, 2019