ವಾಷಿಂಗ್ಟನ್: ಬೊಲಿವಿಯಾದ ವಾಯುಪಡೆಯ ವಿಮಾನ (Bolivian Airforce Plane) ಅಮೆಜಾನ್ ಅರಣ್ಯದಲ್ಲಿ ಪತನವಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಅಮೆರಿಕಾದ ದೇಶ ಬೊಲಿವಿಯಾದ ಈಶಾನ್ಯದಲ್ಲಿರುವ ಬೆನಿ ಪ್ರದೇಶದ ಅಮೆಜಾನ್ ಕಾಡಿನಲ್ಲಿ ಶನಿವಾರ ಈ ದುರಂತ ನಡೆದಿದೆ. ಬೊಲಿವಿಯಾದ ಆರೋಗ್ಯ ಸಚಿವಾಲಯದ ಡೆಂಗ್ಯೂ-ಚಿಕೂನ್‍ಗುನ್ಯಾ ಕಾರ್ಯಕ್ರಮದ ನಾಲ್ವರು ಆರೋಗ್ಯಾಧಿಕಾರಿಗಳನ್ನು ರಿಬೆರಾಲ್ಟಾದಿಂದ ಕೋಬಿಜಾಗೆ ಕರೆದೊಯ್ಯಲಾಗುತ್ತಿತ್ತು. ಮಲೇರಿಯಾ ರೋಗ ಜಾಗೃತಿ ಮೂಡಿಸುವ ಜೊತೆಗೆ, ಮೌಲ್ಯಮಾಪನ ಕಾರ್ಯದಲ್ಲಿ ಇವರೆಲ್ಲ ತೊಡಗಿಸಿಕೊಂಡಿದ್ದರು. ನಾಲ್ವರೂ ಅಧಿಕಾರಿಗಳು ಮೃತಪಟ್ಟಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿಲ್ಲದ ಪುಂಡರ ಕುಚೇಷ್ಟೆ – ಕಾರಿನಲ್ಲಿ ಹೋಗ್ತಿದ್ದ ದಂಪತಿಗೆ ಅಡ್ಡಗಟ್ಟಿ ಧಮ್ಕಿ
ವಿಮಾನ ಪತನದಲ್ಲಿ ಇಬ್ಬರು ಸೇನಾ ಪೈಲಟ್‍ಗಳು, ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ. ಈ ವಿಮಾನ ಅಮೆಜಾನ್ ಕಾಡಿನ (Amazon Forest) ದಟ್ಟವಾದ ಮರಗಳ ಮಧ್ಯೆ ಪತನವಾಗಿದ್ದು, ತಕ್ಷಣ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ವಿಮಾನ ಪತನವಾದ ಸ್ಥಳದ ಸಮೀಪದಲ್ಲೇ ಇದ್ದ ಅಗುವಾ ಡುಲ್ಸೆ ಎಂಬ ಸಮುದಾಯದ ನಿವಾಸಿಗಳು ವಿಮಾನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನ ಪಟ್ಟರೂ ಫಲ ನೀಡಲಿಲ್ಲ ಎಂದು ಬೆನಿ ಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ. ಸೇನಾ ವಿಮಾನ ಪತನಕ್ಕೆ (Plane Crash) ನೈಜ ಕಾರಣ ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ.