ಬೆಂಗಳೂರು: ಜಾಲಹಳ್ಳಿಯ ವಾಯು ನೆಲೆಯ ಸನಿಹ ಡ್ರೋನ್ ಗಳ ಹಾರಾಟ ಮಾಡಿರೋ ಶಂಕೆ ವ್ಯಕ್ತವಾಗಿದ್ದು ಆತಂಕ ಸೃಷ್ಟಿಸಿದೆ.
Advertisement
ಅಕ್ರಮವಾಗಿ ಎರಡು ಡ್ರೋನ್ ಗಳು ಹಾರಾಟ ಮಾಡಿರೋ ಬಗ್ಗೆ ಸೇನಾ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಕ್ರಮವಾಗಿ ಎರಡು ಡ್ರೋನ್ ಹಾರಾಟ ಮಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಗಂಗಮ್ಮನ ಗುಡಿ ಪೊಲೀಸರಿಗೆ ಸೇನಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅವರ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮದುವೆ ಮನೆಗೆ ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡ 100ಕ್ಕೂ ಹೆಚ್ಚು ಜನರು
Advertisement
ಸುಮಾರು 40 ದಿನಗಳ ಹಿಂದೆ ಈ ಕುರಿತು ದೂರು ಬಂದಿತ್ತು. ಜಾಲಹಳ್ಳಿ ವಾಯುನೆಲೆಯ ಕಾಂಪೌಂಡ್ ಬಳಿ ಅನುಮಾನಾಸ್ಪದ ಲೈಟ್ ಬ್ಲಿಂಕಿಂಗ್ ಕಂಡುಬಂದಿತ್ತು. ಇದು ರಾತ್ರಿ ಕರ್ತವ್ಯದಲ್ಲಿದ್ದ ಸೆಕ್ಯುರಿಟಿ ಗಮನಕ್ಕೆ ಬಂದಿತ್ತು. ರಾತ್ರಿಯಾದ ಕಾರಣ ಅದು ಏನೆಂದು ಸೆಕ್ಯುರಿಟಿಗೆ ಗೊತ್ತಾಗಿರಲಿಲ್ಲ. ಮೇಲ್ನೋಟಕ್ಕೆ ಚಿಕ್ಕ ಡ್ರೋನ್ ಎಂಬ ಸಂಶಯ ವ್ಯಕ್ತವಾಗಿತ್ತು. ಹೀಗಾಗಿ ಸ್ಥಳೀಯ ಠಾಣೆಗೆ ದೂರನ್ನು ನೀಡಿದ್ದ ವಾಯುನೆಲೆ ಅಧಿಕಾರಿಗಳು, ಗಂಗಮ್ಮನ ಗುಡಿ ಹಾಗೂ ಜಾಲಹಳ್ಳಿ ಪೊಲೀಸ್ ಸಿಬ್ಬಂದಿಯನ್ನು ಕರೆಸಿ ಪರಿಶೀಲನೆ ಮಾಡಲಾಗಿತ್ತು.
Advertisement
Advertisement
ಸುಮಾರು 15 ದಿನಗಳ ನಿರಂತರವಾಗಿ ಪರಿಶೀಲನೆ ನಡೆಸಿದ ಬಳಿಕ ಪೊಲೀಸರಿಗೆ ಡ್ರೋನ್ ಹಾರಾಟದ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ವಾಯುನೆಲೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಮಾಡಿ ಮಾಹಿತಿ ನೀಡಲಾಗಿದ್ದು, ಈ ಕುರಿತು ಪರಿಶೀಲನೆ ಮುಂದುವರೆಸಿದ್ದೇವೆ ಎಂದು ಉತ್ತರ ವಿಭಾಗದ ಡಿಸಿಪಿ ಧಮೇರ್ಂದ್ರ ಕುಮಾರ್ ಮೀನಾ ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ರಾಜಕೀಯ ವಿರೋಧಿಗಳ ಸಂಗಮ