ತಾಂತ್ರಿಕ ದೋಷ – ವಾಯುಪಡೆಯ ಹೆಲಿಕಾಪ್ಟರ್ ಗದ್ದೆಯಲ್ಲಿ ತುರ್ತು ಭೂಸ್ಪರ್ಶ

Public TV
1 Min Read
Helicopter

ಚೆನ್ನೈ: ತಾಂತ್ರಿಕ ದೋಷದಿಂದಾಗಿ ಐಎಎಫ್‍ನ (Indian Air Force) ತರಬೇತಿ ಹೆಲಿಕಾಪ್ಟರ್ (Helicopter) ಚೆನ್ನೈ ಬಳಿಯ ಪೊಪರ್ಂದಲ್‍ನ ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಸಿಬ್ಬಂದಿ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ಸಲವಕ್ಕಂ ಪೊಲೀಸ್ ಠಾಣಾ ವ್ಯಾಪ್ತಿಯ ಪೊಪರ್ಂದಲ್ ಪ್ರದೇಶಕ್ಕೆ ಸಮೀಪಿಸಿದಾಗ ಹಠಾತ್ತನೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮವಾಗಿ ಪೈಲಟ್ ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಸ್ವಲ್ಪ ಸಮಯದ ನಂತರ ಮತ್ತೊಂದು ಸೇನಾ ಹೆಲಿಕಾಪ್ಟರ್ ಮೂಲಕ ಸಿಬ್ಬಂದಿ ಬಂದು ತಾಂತ್ರಿಕ ದೋಷ ಸರಿಪಡಿಸಿ ಸೇನಾ ನೆಲೆಗೆ ಕೊಂಡೊಯ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ತುರ್ತು ಭೂಸ್ಪರ್ಶದ ವೇಳೆ ಯಾವುದೇ ಅನಾಹುತ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಗುಜರಾತ್‍ನಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರ ಪರಿಣಾಮ ಅದರಲ್ಲಿದ್ದ ಇಬ್ಬರು ಪೈಲಟ್‍ಗಳು ಸೇರಿ ಮೂವರು ನಾಪತ್ತೆಯಾಗಿದ್ದರು.

Share This Article