ನವದೆಹಲಿ: ತನ್ನ ಸಿಬ್ಬಂದಿಗಾಗಿ ನೂತನ ಯುದ್ಧ ಸಮವಸ್ತ್ರವನ್ನು ಭಾರತೀಯ ವಾಯುಪಡೆ (Indian Air Force) ಇಂದು ಅನಾವರಣಗೊಳಿಸಿದೆ.
ಚಂಡೀಗಢದಲ್ಲಿ ನಡೆದ ವಾಯುಪಡೆಯ 90ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಐಎಎಫ್‍ನ ಸಿಬ್ಬಂದಿಗೆ ಹೊಸ ಸಮವಸ್ತ್ರವನ್ನು ಅನಾವರಣಗೊಳಿಸಲಾಯಿತು. ಇದೇ ಮೊದಲ ಬಾರಿಗೆ ವಾಯುಪಡೆಯ ವಾರ್ಷಿಕೋತ್ಸವವನ್ನು ದೆಹಲಿಯ ಹೊರಗೆ ನಡೆಸಲಾಯಿತು. ಹೊಸ ಸಮವಸ್ತ್ರವನ್ನು ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅನಾವರಣಗೊಳಿಸಿದರು.
ಈ ವರ್ಷದ ಆರಂಭದಲ್ಲಿ ಭಾರತೀಯ ಸೇನೆಯು (Army) ತನ್ನ ಸಿಬ್ಬಂದಿಗೆ ಡಿಜಿಟಲ್ ಕ್ಯಾಮೌಪ್ಲಾಗೆ ಸಮವಸ್ತ್ರವನ್ನು (Digital Camouflage Uniform) ಪರಿಚಯಿಸಿತ್ತು. ಇದು ಭೂಪ್ರದೇಶ ಸ್ನೇಹಿಯಾಗಿದ್ದು, ಮರುಭೂಮಿ, ಕಾಡುಪ್ರದೇಶ, ಪರ್ವತಮಯ ಪ್ರದೇಶಗಳಿಗೆ ಹೊಂದಿಕೊಳ್ಳುವ ಸಮವಸ್ತ್ರವಾಗಿದೆ. ಇದನ್ನೂ ಓದಿ: ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆ ಉಡೀಸ್ -ಕ್ರಿಮಿಯಾ ಸಂಪರ್ಕ ಕಡಿತ
ನೂತನ ಸಮವಸ್ತ್ರವು ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿದ್ದು, ಹಳೆಯ ಮಾದರಿಗಳ ಅನೇಕ ವಿನ್ಯಾಸಗಳೊಂದಿಗೆ ಬದಲಾಯಿಸಲಾಗಿದೆ. ಪ್ರಪಂಚದಾದ್ಯಂತದ ಹೆಚ್ಚಿನ ಯುದ್ಧ ಪಡೆಗಳು ಹಾಗೂ ಮಿಲಿಟರಿಗಳು ಈ ಡಿಜಿಟಲ್ ಕ್ಯಾಮೌಪ್ಲಾ ಸಮವಸ್ತ್ರಗಳನ್ನು ಅಳವಡಿಸಿಕೊಂಡಿವೆ.
1932ರಲ್ಲಿ ಯುಕೆಯ ರಾಯಲ್ ಏರ್ ಫೋರ್ಸ್‍ನ ಬೆಂಬಲ ಪಡೆಯಾಗಿ ಐಎಎಫ್ ಅಧಿಕೃತವಾಗಿ ಸೇರ್ಪಡೆಗೊಂಡಿತು. ಈ ದಿನದ ನೆನಪಿಗಾಗಿ ಪ್ರತಿವರ್ಷ ಐಎಎಫ್ ಮುಖ್ಯಸ್ಥರು ಮತ್ತು ಇತರ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಆಚರಿಸಲಾಗುತ್ತದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ನಾಗಮಂಟಪ ಉದ್ಘಾಟನೆ – ಜನವರಿಯಲ್ಲಿ ಆದಿಯೋಗಿ ಪ್ರತಿಮೆ ಲೋಕಾರ್ಪಣೆ