ಆನೇಕಲ್: ತಾಂತ್ರಿಕ ದೋಷ ದಿಂದಾಗಿ ಭಾರತೀಯ ವಾಯುಸೇನೆಗೆ ಸೇರಿದ ಹೆಲಿಕಾಪ್ಟರ್ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದ ಬಳಿಯ ಬೇಗೆಹಳ್ಳಿಯಲ್ಲಿ ಭಾನುವಾರ ಸಂಜೆ ತುರ್ತು ಭೂಸ್ಪರ್ಶ ಮಾಡಿದೆ.
ಯಲಹಂಕದಲ್ಲಿ ನಡೆದಿದ್ದ ಏರೋ ಇಂಡಿಯಾ ಪ್ರದರ್ಶನಕ್ಕೆ ಆಗಮಿಸಿದ್ದ ಹೆಲಿಕಾಪ್ಟರ್ ಇಂದು ಸಂಜೆ ಎಚ್‍ಎಎಲ್‍ಗೆ ತೆರಳುತ್ತಿತ್ತು. 6 ಮಂದಿ ಪ್ರಯಾಣಿಸುತ್ತಿದ್ದಾಗ ಎಂಜಿನ್‍ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪೈಲಟ್ ಕೂಡಲೇ ಲ್ಯಾಂಡ್ ಮಾಡಿದ್ದಾರೆ.
ವಿಷಯ ತಿಳಿದ ಕೂಡಲೇ ಮತ್ತೊಂದು ಹೆಲಿಕಾಪ್ಟರ್ ನಲ್ಲಿ ಬಂದ ಇಂಜಿನಿಯರ್‍ಗಳು ಎಂಜಿನ್‍ನಲ್ಲಿದ್ದ ದೋಷವನ್ನು ಸರಿ ಪಡಿಸಿದ್ದು ಈಗ ಹೆಲಿಕಾಪ್ಟರ್ ಎಚ್‍ಎಎಲ್‍ಗೆ ತೆರಳಿದೆ.
ಹೆಲಿಕಾಪ್ಟರ್ ಭೂ ಸ್ಪರ್ಶ ವಾದ ಸುದ್ದಿ ತಿಳಿದು ನೂರಾರು ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಏರ್ ಶೋ ನೋಡಿದಷ್ಟೆ ಸಂಭ್ರಮಪಟ್ಟರು.