ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಆಲ್ ಇಂಡಿಯಾ ರೇಡಿಯೋ ಕೋಟಿ ಕೋಟಿ ಆದಾಯ ಗಳಿಸಿದೆ.
ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋಡ್ ಬುಧವಾರದಂದು ಲೋಕಸಭೆಗೆ ಈ ಬಗ್ಗೆ ಲಿಖಿತ ಉತ್ತರ ನೀಡಿದ್ದು, ಮನ್ ಕೀ ಬಾತ್ ಕಾರ್ಯಕ್ರಮದಿಂದ ಆಲ್ ಇಂಡಿಯಾ ರೇಡಿಯೋ ಕಳೆದ ಎರಡು ವರ್ಷಗಳಲ್ಲಿ 10 ಕೋಟಿ ರೂ. ಆದಾಯ ಗಳಿಸಿದೆ ಎಂದು ತಿಳಿಸಿದ್ದಾರೆ.
Advertisement
ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ 2015-16ರ ಹಣಕಾಸು ವರ್ಷದಲ್ಲಿ ಆಲ್ ಇಂಡಿಯಾ ರೇಡಿಯೋ 4.78 ಕೋಟಿ ರೂ. ಗಳಿಸಿದೆ. ಹಾಗೇ 2016-17ನೇ ಹಣಕಾಸು ವರ್ಷದಲ್ಲಿ 5.19 ಕೋಟಿ ರೂ ಆದಾಯ ಗಳಿಸಿದೆ ಎಂದು ಹೇಳಿದ್ದಾರೆ.
Advertisement
Advertisement
ಕಾರ್ಯಕ್ರಮದ ಪ್ರಸಾರ ಸಂಪೂರ್ಣವಾದ ಬಳಿಕ ಪ್ರಾದೇಶಿಕ ಆವೃತ್ತಿಯನ್ನು 18 ಭಾಷೆಗಳು ಹಾಗೂ 33 ಉಪಭಾಷೆಗಳಲ್ಲಿ ಅದೇ ದಿನ ಪ್ರಸಾರ ಮಾಡಲಾಗುತ್ತದೆ. ಇಂಗ್ಲಿಷ್ ಹಾಗೂ ಸಂಸ್ಕೃತದಲ್ಲೂ ಕಾರ್ಯಕ್ರಮ ಪ್ರಸಾರವಾಗುತ್ತದೆ. ದೇಶದ ಜನರಿಗಾಗಿ ಟ್ರಾನ್ಸ್‍ಮಿಟ್ಟರ್‍ಗಳ ಮೂಲಕ ಹಾಗೂ ವಿಶ್ವದಾದ್ಯಂತ ಕೇಳುಗರಿಗಾಗಿ ಅಂತರ್ಜಾಲ ಹಾಗೂ ಶಾರ್ಟ್ ವೇವ್ ಮೂಲಕ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
Advertisement
ಜಾಹಿರಾತುಗಳಿಂದ ರೇಡಿಯೋಗೆ ಆದಾಯ ಹರಿದು ಬರುತ್ತದೆ. 2014ರ ಅಕ್ಟೋಬರ್ 3 ರಂದು ಮೋದಿಯ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಚಾಲನೆ ದೊರಕಿತ್ತು. ಪ್ರತಿ ತಿಂಗಳು ನಿರ್ದಿಷ್ಟ ಭಾನುವಾರದಂದು ಕಾರ್ಯಕ್ರಮ ಪ್ರಸಾರವಾಗುತ್ತದೆ. ಕಾರ್ಯಕ್ರಮದಲ್ಲಿ ಮೋದಿ ಭಾಷಣದ ಮುಂಚೆ ಹಾಗೂ ನಂತರ ಹಲವಾರು ಬ್ರ್ಯಾಂಡ್‍ಗಳು ಲಕ್ಷಾಂತರ ಕೇಳುಗರನ್ನ ತಲುಪಲು ಜಾಹಿರಾತು ನೀಡಲು ಬಯಸುತ್ತವೆ.
ಕಾರ್ಯಕ್ರಮದಲ್ಲಿ ಮೋದಿ ರಾಷ್ಟ್ರ ಹಾಗೂ ಸಾಮಾಜದ ಪ್ರಸ್ತುತ ವಿಷಯಗಳ ಬಗ್ಗೆ ಮಾತನಾಡ್ತಾರೆ. 2015ರ ಜನವರಿಯಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಅಲ್ಲದೆ ಯಾವ ವಿಷಯದ ಬಗ್ಗೆ ನಾನು ಮಾತನಾಡ್ಬೇಕು ಎಂದು ಮೋದಿ ಜನರಿಗೆ ಸಲಹೆ ಕೇಳಿದ್ದು, ನರೇಂದ್ರ ಮೋದಿ ಹಾಗೂ ಮೈ ಗವರ್ನಮೆಂಟ್ ವೆಬ್‍ಸೈಟ್ ಮತ್ತು ಆ್ಯಪ್ ಮೂಲಕ ಜನರು ಸೂಚಿಸಿದ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನ ಹಂಚಿಕೊಳ್ತಾರೆ.