– ಐವರಿಗೆ ಸಣ್ಣಪುಟ್ಟ ಗಾಯ
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿನ್ನದ ಗಣಿಯಲ್ಲಿ ನಡೆದ ಏರ್ ಬ್ಲಾಸ್ಟ್ ಘಟನೆಯಲ್ಲಿ ಒಟ್ಟು 6 ಮಂದಿಗೆ ಗಾಯಗಳಾಗಿದ್ದು, ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ.
ಸುರಂಗ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದ ಐವರು ಕಾರ್ಮಿಕರಿಗೆ ಗಾಯಗಳಾಗಿದೆ. ಓರ್ವ ಕಾರ್ಮಿಕನ ಮೇಲೆ ಕಲ್ಲುಗಳು ಬಿದ್ದಿದ್ದು ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡ ಕಾರ್ಮಿಕ ಬಸವರಾಜ್‌ನನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಹುಲಗಣ್ಣ, ಮಲ್ಲರಾವ್, ಪ್ರಭಾಕರ್, ಮೈಕಲ್, ಮರಿಸ್ವಾಮಿಗೆ ಗಾಯಗಳಾಗಿವೆ.
- Advertisement
ಸುರಂಗ ಮಾರ್ಗದ ಕೆಲಸದ ವೇಳೆ ಏಕಾಏಕಿ ಏರ್ ಬ್ಲಾಸ್ಟ್ (Air Blast in Hatti gole Mine, Raichur) ಆಗಿದ್ದು ಒಂದು ಬದಿಯಲ್ಲಿ ಮಣ್ಣು ಕುಸಿದಿದೆ. ಘಟನೆಯಲ್ಲಿ ಉಸಿರಾಟದ ಸಮಸ್ಯೆಯಿಂದ ನಿತ್ರಾಣಗೊಂಡು ಸುರಂಗದಲ್ಲೇ ಸಿಲುಕಿದ್ದ ಕಾರ್ಮಿಕರನ್ನ ಕೂಡಲೇ ರಕ್ಷಿಸಲಾಗಿದೆ. ಈ ಐದು ಮಂದಿ ಗಾಯಾಳುಗಳು ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಉದ್ದೇಶಪೂರ್ವಕವಾಗಿಯೇ ಗುದ್ದಿ ಹತ್ಯೆ ಮಾಡಿದ್ದಾರೆ – ಕೊಡಗಿನಲ್ಲಿ ಕಾರ್ಯಕರ್ತನ ಹತ್ಯೆಗೆ ಬಿಜೆಪಿ ಆಕ್ರೋಶ