Connect with us

Cinema

ಬಟ್ಟೆ, ಕಿಸ್ ಸೀನ್ ಬಗ್ಗೆ ಐಂದ್ರಿತಾ ಪ್ರಸ್ತಾಪ- ಕಾಯಕವೇ ಕೈಲಾಸ ಎಂದ ದಿಗಂತ್

Published

on

ಬೆಂಗಳೂರು: ಮದುವೆ ನಂತರ ಈ ರೀತಿಯ ಬಟ್ಟೆ ಹಾಕಬೇಡ, ಕಿಸ್ ಸೀನ್ ಮಾಡಬೇಡ ಅಂತಾ ದಿಗಂತ್ ಮನೆಯಲ್ಲಿ ಹೇಳಿಲ್ಲ ಎಂದು ಐಂದ್ರಿತಾ ರೇ ಹೇಳಿದ್ದಾರೆ.

ಮದುವೆಯಾದ ಬಳಿಕ ಇದೇ ಮೊದಲಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮನಸಾರೆ ಸಿನಿಮಾದ ಜೋಡಿ ಹಕ್ಕಿಗಳು, ನಮ್ಮ ಮನೆಯಲ್ಲಿ ನಟನೆ, ಬಟ್ಟೆ ವಿಚಾರದಲ್ಲಿ ಯಾವತ್ತೂ ಹೀಗೆ ಇರಬೇಕು ಅಂತಾ ಒತ್ತಡ ಹೇರಿಲ್ಲ. ದಿಗಂತ್ ಮನೆಯವರು ಇದಕ್ಕೆ ಹೊರತಾಗಿಲ್ಲ. ಕ್ಯಾರೆಕ್ಟರ್ ಹಾಗೂ ಕಥೆಗೆ ತಕ್ಕಂತೆ ನಾವು ಹೊಂದಿಕೊಳ್ಳಬೇಕು ಎಂದು ಐಂದ್ರಿತಾ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ದಿಗಂತ್, ಕಾಯಕವೇ ಕೈಲಾಸ ಎಂದು ನಗೆ ಬೀರಿದರು.

ನಂದಿಬೆಟ್ಟ ಅಂದ್ರೆ ಇಬ್ಬರಿಗೂ ತುಂಬಾ ಇಷ್ಟ. ಹೀಗಾಗಿ ಮದುವೆಗೆ ನಂದಿ ಬೆಟ್ಟವನ್ನು ಆಯ್ಕೆ ಮಾಡಿಕೊಂಡಿದ್ದೇವು. ಮದುವೆ ದಿನ ತುಂಬಾ ಶಾಸ್ತ್ರ ಹಾಗೂ ಸಂಪ್ರದಾಯಗಳನ್ನು ಫಾಲೋ ಮಾಡಿದ್ವಿ. ಫ್ಯಾಶನ್ ಶೋನಲ್ಲಿ ನಮಗೆ ಅನುಭವ ಇರುವುದರಿಂದ ನಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸಿದ್ವಿ ಎಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರಾ ಜೋಡಿ ದಿಗಂತ್ ಹಾಗೂ ಐಂದ್ರಿತಾ ಹೇಳಿಕೊಂಡರು.

2009ರ ಮನಸಾರೆ ಶೂಟಿಂಗ್ ವೇಳೆ ನಮ್ಮ ಪ್ರೀತಿ ಆರಂಭವಾಯಿತು. 2010ರ ಜನವರಿಯಲ್ಲಿ ರಿಂಗ್ ಕೊಟ್ಟು ದಿಗಂತ್ ಪ್ರಪೋಸ್ ಮಾಡಿದ್ದರು. ಇಬ್ಬರೂ ಸೇರಿ ನಾವು ಹೀಗೆ ಮದುವೆ ಆಗಬೇಕಿತ್ತು ಅಂತ ಕನಸು ಕಂಡಿದ್ದೇವು. ಅದರಂತೆ ಈಗ ನಮ್ಮ ಕನಸು ನನಸಾಗಿದೆ ಎಂದು ಐಂದ್ರಿತಾ ಹೇಳಿದರು.

ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಮೀಪವಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್‍ನಲ್ಲಿ ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ಸ್ ಐಂದ್ರಿತಾ – ದಿಗಂತ್ ಡಿಸೆಂಬರ್ 12ರಂದು ಸಪ್ತಪದಿ ತುಳಿದರು. ಮದುವೆಗೆ ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಹೀಗಾಗಿ ರಿಡ್ಜ್ ಕಾರ್ಟನ್‍ನಲ್ಲಿ ಶನಿವಾರ ಸ್ಯಾಂಡಲ್‍ವುಡ್‍ನ ನಟ, ನಟಿಯರು, ಸ್ನೇಹಿತರು ಹಾಗೂ ಆಪ್ತರಿಗಾಗಿ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ. ಇದನ್ನು ಓದಿ: ನನ್ನ ಜವಾಬ್ದಾರಿಯನ್ನು ದಿಗಂತ್‌ಗೆ ಹಸ್ತಾಂತರಿಸಿದ್ದೇನೆ: ರಾಗಿಣಿ

ದಿಗಂತ್ ಹಾಗೂ ಐಂದ್ರಿತಾ ರೇ ಮದುವೆ ಬೆಂಗಾಳಿ ಸಂಪ್ರದಾಯದಲ್ಲಿ ನಡೆಯಿತು. ಇವರಿಬ್ಬರ ಮದುವೆ ಸಮಾರಂಭಕ್ಕೆ ನಟಿ ರಾಗಿಣಿ ದ್ವಿವೇದಿ, ಶರ್ಮಿಳಾ ಮಾಂಡ್ರೆ ಸೇರಿದಂತೆ ಇನ್ನಿತರ ಕಲಾವಿದರು, ಸ್ನೇಹಿತರು ಹಾಗೂ ಕುಟುಂಬದವರು ಭಾಗಿಯಾಗಿದ್ದರು. ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್ ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಈ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇತ್ತಿಚೇಗೆ ಸುದ್ದಿಗೋಷ್ಠಿ ನಡೆಸಿದ್ದ ಐಂದ್ರಿತಾ , “ನನ್ನ ಬೆಸ್ಟ್ ಫ್ರೆಂಡ್ ನನ್ನು ಮದುವೆಯಾಗುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ” ಎಂದು ಸಂತಸದಿಂದ ಹೇಳಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *