ಲಕ್ನೋ: ಹಿಜಬ್ ಧರಿಸಿದ ಮಹಿಳೆಯೇ ದೇಶದಲ್ಲಿ ಮುಂದೊಂದು ದಿನ ಪ್ರಧಾನಿ ಸ್ಥಾನಕ್ಕೆ ಏರುತ್ತಾರೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಭವಿಷ್ಯ ನುಡಿದರು.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವೀಡಿಯೋ ಮಾಡಿರುವ ಅವರು, ಹಿಜಬ್‍ನ್ನು ಧರಿಸಿ ಕಾಲೇಜಿಗೂ ಹೋಗುತ್ತಾರೆ. ಹಿಜಬ್ ಧರಿಸಿಯೇ ಡಾಕ್ಟರ್, ಜಿಲ್ಲಾಧಿಕಾರಿಯಂತಹ ವಿವಿಧ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಾರೆ. ಜೊತೆಗೆ ಹಿಜಬ್ ಧರಿಸಿದ ಮಹಿಳೆಯೇ ಮುಂದೊಂದು ದಿನ ಪ್ರಧಾನಿಯಾಗುತ್ತಾರೆ. ಇದನ್ನು ನೋಡಲು ನಾನು ಬದುಕಿರುತ್ತೇನೋ, ಇಲ್ಲವೋ ಎನ್ನುವುದರ ಬಗ್ಗೆ ನನಗೆ ತಿಳಿದಿಲ್ಲ. ಆದರೆ ನಾನು ಹೇಳಿದ ಮಾತು ಒಂದು ದಿನ ಸತ್ಯವಾಗುತ್ತದೆ ಎಂದರು.
Advertisement
Advertisement
ಹೆಣ್ಣು ಮಕ್ಕಳು ಹಿಜಬ್ ಧರಿಸಲು ನಿರ್ಧರಿಸಿ ಅದನ್ನು ಪೋಷಕರಿಗೆ ತಿಳಿಸಿದರೆ ಅದನ್ನು ಎಲ್ಲಾ ಪೋಷಕರು ಬೆಂಬಲಿಸುತ್ತಾರೆ. ಆಗ ಅದನ್ನು ಯಾರು ತಡೆಯುತ್ತಾರೆ ನೋಡೋಣ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ
Advertisement
इंशा’अल्लाह pic.twitter.com/lqtDnReXBm
— Asaduddin Owaisi (@asadowaisi) February 12, 2022
Advertisement
ಈ ವೀಡಿಯೋ ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಂದರ್ಭದ್ದಾಗಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಿಡಿಕಾರಿದ ಅವರು, ಮೋದಿ ಅವರು ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆ, ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಹಾಗೇ ಮಾತನಾಡುವಾಗಲೆಲ್ಲಾ ತ್ರಿವಳಿ ತಲಾಖ್ ಕಾನೂನನ್ನು ಉಲ್ಲೇಖಿಸುತ್ತಾರೆ. ಆದರೆ ಈಗ ಹಿಜಬ್ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಿಜಬ್ ಮುಸ್ಲಿಂ ಹುಡುಗಿಯರ ಹಕ್ಕು. ಆದರೆ ಅದನ್ನು ಧರಿಸಲು ನಿರಾಕರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಹಿಜಬ್ ಹಕ್ಕು ಪ್ರತಿಪಾದಿಸುತ್ತಿರುವ ಕರ್ನಾಟಕದ ಮಹಿಳೆಯರಿಗೆ ನನ್ನ ಸಲಾಂ ಎಂದು ಹೇಳಿದರು. ಅಷ್ಟೇ ಅಲ್ಲ, ಕೇಸರಿ ಶಾಲು ಧರಿಸಿ ಜೈಶ್ರೀರಾಮ್ ಎಂದು ಕೂಗಿದವರಿಗೆ ಪ್ರತಿಯಾಗಿ, ಅಲ್ಲಾ ಹು ಅಕ್ಬರ್ ಎಂದು ಕೂಗಿದ ಮಂಡ್ಯದ ಮುಸ್ಕಾನ್ ಖಾನ್‍ರನ್ನೂ ಶ್ಲಾಘಿಸಿದರು. ಇದನ್ನೂ ಓದಿ: ಲತಾ ಮಂಗೇಶ್ಕರ್ ಫೇಮಸ್ ಸಾಂಗ್ ಹಾಡಿ ಗೌರವ ಸಲ್ಲಿಸಿದ ಸಲ್ಮಾನ್ – ವೀಡಿಯೋ ವೈರಲ್