ಪ್ರಧಾನಿ ಮೋದಿಯವರನ್ನು ಅಲ್ಲಾ ಖಂಡಿತ ಸೋಲಿಸ್ತಾರೆ: ಅಸಾದುದ್ದೀನ್ ಓವೈಸಿ

Public TV
1 Min Read
NARENDRA MODI OWAISI

ಹೈದರಾಬಾದ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಲ್ಲಾ (ದೇವರು) ಖಂಡಿತವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸುತ್ತಾನೆ. ಇದರಲ್ಲಿ ಯಾವುದೇ ಸಂಶಯವಿಲ್ಲವೆಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಯೋಗಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯೋಗಿ ಆದಿತ್ಯನಾಥ್ ಅವರೇ ನಿಮಗೆ ಇತಿಹಾಸ ಸರಿಯಾಗಿ ಗೊತ್ತಿಲ್ಲ. ನಿಜಾಮರು ಎಂದಿಗೂ ಪಲಾಯನ ಮಾಡಿಲ್ಲ. ಬದಲಾಗಿ ಭಾರತ ಮತ್ತು ಚೀನಾ ನಡುವಿನ ಯುದ್ಧ ಸಂದರ್ಭದಲ್ಲಿ ತಮ್ಮಲ್ಲಿರುವ ಚಿನ್ನಾಭರಣಗಳನ್ನು ಮಾರಾಟ ಮಾಡಿ ದೇಶಕ್ಕೆ ಆರ್ಥಿಕ ನೆರವು ನೀಡಿದ್ದರು. ನೀವು ಇದನ್ನು ಮರೆಯಬಾರದೆಂದು ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇಂತವರ ವಿರುದ್ಧ ಹೋರಾಡಲು ನಮಗೆ ಅಲ್ಲಾಹುವೇ ಶಕ್ತಿ ನೀಡುತ್ತಾನೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿ ಅಲ್ಲಾ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಈ ದೇಶ ಕೇವಲ ನಿಮ್ಮದೇ, ನಮ್ಮದಲ್ಲವೇ? ನಾನು ಪ್ರಧಾನಿ ನರೇಂದ್ರ ಮೋದಿ, ಆರ್‍ಎಸ್‍ಎಸ್, ಬಿಜೆಪಿ ಹಾಗೂ ಯೋಗಿ ಆದಿತ್ಯನಾಥ್ ವಿರುದ್ಧ ಮಾತನಾಡಿದರೇ, ನನ್ನನ್ನು ಈ ದೇಶದಿಂದ ಹೊರಹಾಕುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, ರಾಹುಲ್ ಈಗ ಜನಿವಾರಧಾರಿಯಾಗಲು ಹೊರಟಿದ್ದಾರೆ. ಹೇಳಬೇಕೆಂದರೇ ಅವರು ರಾಜಕಾರಣಿಯೇ ಅಲ್ಲ, ಬದಲಾಗಿ ಓರ್ವ ಪ್ರವಾಸಿಗ ಮಾತ್ರ. ರಾಹುಲ್ ಗೆ ಅಲ್ಪಸಂಖ್ಯಾರ ಯಾವುದೇ ಸಮಸ್ಯೆಗಳು ಗೊತ್ತಿಲ್ಲ. ಅಲ್ಲದೇ ಅವರಿಗೆ ಯಾವುದೇ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲವೆಂದು ವ್ಯಂಗ್ಯವಾಡಿದರು.

yogi 1

ಯೋಗಿ ಹೇಳಿದ್ದೇನು?
ತೆಲಂಗಾಣದ ಘೋಶ್‍ಮಹಲ್ ವಿಧಾನಸಭಾ ಕ್ಷೇತ್ರ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಅವರು, ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುತ್ತೇವೆ. ಆಗ ಓವೈಸಿ ನಿಜಾಮರಂತೆ ಓಡಿ ಹೋಗುತ್ತಾರೆಂದು ಹೇಳಿದ್ದರು. ಇದನ್ನೂ ಓದಿ : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಹೈದರಾಬಾದನ್ನು ಭಾಗ್ಯನಗರವನ್ನಾಗಿ ಮರುನಾಮಕರಣ ಮಾಡ್ತೀವಿ: ಯೋಗಿ ಆದಿತ್ಯನಾಥ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *