ಫ್ರೀ ಫ್ರೀ ಫ್ರೀ; ಟಿಡಿಪಿ ಗೆದ್ದರೇ ಫ್ರೀ ಸೈಟ್‌, ಮಹಿಳೆಯರಿಗೆ ಫ್ರೀ ಬಸ್‌, 3 ಎಲ್‌ಪಿಜಿ ಸಿಲಿಂಡರ್‌ ಫ್ರೀ – NDA ಗ್ಯಾರಂಟಿ

Public TV
2 Min Read
pawan kalyan with chandrababu naidu 1

ಅಮರಾವತಿ: ಲೋಕಸಭಾ ಚುನಾವಣೆ (Lok Sabha Election) ಹತ್ತಿರ ಬರುತ್ತಿದ್ದಂತೆ ಎಲ್ಲಾ ಪಕ್ಷಗಳೂ ಜನರನ್ನ ತಮ್ಮತ್ತಾ ಸೆಳೆಯಲು ಪ್ರಯತ್ನಿಸುತ್ತಿವೆ. ಮನೆ-ಮನೆ ಪ್ರಚಾರ ಕೈಗೊಂಡು ಮತಯಾಚನೆ ಮಾಡುತ್ತಿದ್ದಾರೆ. ಈ ನಡುವೆ ಆಂಧ್ರಪ್ರದೇಶದಲ್ಲಿ (Andhra Pradesh) ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ ಕೂಡ ನಡೆಯುತ್ತಿದ್ದು, ಆಡಳಿತಾರೂಢ ವೈಎಸ್ಆರ್ ಪಕ್ಷವು ಈಗಾಗಲೇ ತನ್ನ ಪ್ರಣಾಳಿಕೆ ಪ್ರಕಟಿಸಿದೆ.

chandrababu naidu rally

ಈ ಬೆನ್ನಲ್ಲೇ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು (Chandrababu Naidu), ಜನಸೇನಾ ಪಕ್ಷದ ನಾಯಕ, ನಟ ಪವನ್‌ ಕಲ್ಯಾಣ್‌ ಮಂಗಳವಾರ ಎನ್‌ಡಿಎ ಮೈತ್ರಿ ಕೂಟದ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ಹಲವು ಉಚಿತ ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ದಾರೆ. ಇದನ್ನು ಕೆಲವರು ಕರ್ನಾಟಕ ಕಾಂಗ್ರೆಸ್‌ ಪಕ್ಷದ ಕಾಪಿ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ತುರ್ತು ಪರಿಸ್ಥಿತಿಗೆ ಕಾಂಗ್ರೆಸ್ ಪತನ; ಮೊದಲ ಕಾಂಗ್ರೆಸ್ಸೇತರ ಸರ್ಕಾರ ತಂದ ಚುನಾವಣೆಯಲ್ಲಿ ಏನಾಯ್ತು?

Chandrababu Naidu Roadshow 1

ಎನ್‌ಡಿಎ ಪ್ರಣಾಳಿಕೆಯಲ್ಲಿ ಏನಿದೆ?
ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ 20 ಲಕ್ಷ ಜನರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರೊಂದಿಗೆ ಪಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ 900 ಚದರ ಅಡಿಯ ನಿವೇಶನವನ್ನು ಉಚಿತವಾಗಿ ನೀಡಲಾಗುತ್ತದೆ, ಮಾಸಿಕ 3,000 ರೂ. ನಿರುದ್ಯೋಗ ಭತ್ಯೆಯನ್ನೂ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಕುಡಿಯುವ ನೀರಿನ ನೆಪದಲ್ಲಿ ನೀರು ಬಿಡುಗಡೆಗೆ ನಿರಾಕರಿಸಬಾರದು – ತಮಿಳುನಾಡು ಕ್ಯಾತೆ

pawan kalyan with chandrababu naidu 2

ಬೆಟ್ಟದಷ್ಟು ಭರವಸೆ:
* ವಾರ್ಷಿಕ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್
* ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್‌ ಪ್ರಯಾಣ
* ʻತಲ್ಲಿಕಿ ವಂದನಂʼ ಯೋಜನೆಯಡಿ ಎಲ್ಲಾ ಶಾಲಾ ಮಕ್ಕಳಿಗೆ ವಾರ್ಷಿಕ 15,000 ರೂ.
* ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಜಾರಿ
* 18 ವರ್ಷ ತುಂಬಿದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ 1,500 ರೂ.ನಂತೆ ವಾರ್ಷಿಕ 18,000 ಸಾವಿರ ರೂ. ಭತ್ಯೆ
* 50 ವರ್ಷ ತುಂಬಿದ ಬಿಸಿ ಸಮುದಾಯದವರಿಗೆ ಪಿಂಚಣಿ ಮತ್ತು ಬಿ.ಸಿ.ಗಳ ಸ್ವಯಂ ಉದ್ಯೋಗಕ್ಕೆ 10,000 ಕೋಟಿ ರೂ. ಮಂಜೂರು
* ಪ್ರತಿ ಮನೆಗೆ ಉಚಿತ ನೀರು ಸೌಲಭ್ಯ, ವೃದ್ದಾಪ್ಯ ವೇತನವನ್ನ 4,000 ರೂ.ಗಳಿಗೆ ಹೆಚ್ಚಳ
* ಅಂಗವಿಕಲರ ವೇತನವನ್ನ 6,000 ರೂ.ಗೆ ಹೆಚ್ಚಳ, ಮೀನುಗಾರರಿಗೆ ವಾರ್ಷಿಕ 20,000 ರೂ. ನೆರವು

Share This Article