ಮಂಗಳೂರು: ಕರಾವಳಿಯ ಪ್ರಸಿದ್ಧ ಜಾನಪದ ಕಲೆ ಹುಲಿವೇಷ (Tiger Dance). ಅದು ಮೈಮನ ನವಿರೇಳಿಸುವಂತಹ ಕುಣಿತದ ಜೊತೆಗೆ ಜನತೆಗೆ ಮನರಂಜನೆ ಒದಗಿಸುತ್ತದೆ. ಇಷ್ಟು ಮಾತ್ರ ಅಲ್ಲ ಮಂಗಳೂರಿನ ಯುವಕರ ಹುಲಿವೇಷದ ತಂಡ ಮನೋರಂಜನೆಯ ಜೊತೆಗೆ ಹಲವು ಕುಟುಂಬಗಳಿಗೆ ಬೆಳಕು ನೀಡುವ ಪ್ರಯತ್ನ ಮಾಡಿದೆ. ಇತ್ತೀಚೆಗೆ ಹುಲಿ ವೇಷ ಹಾಕಿ ಕುಣಿದ ಯುವಕರು ಅದರಿಂದ ಬಂದ ದೇಣಿಗೆ ಮೊತ್ತವನ್ನ ಕ್ಯಾನ್ಸರ್ (Cancer) ಪೀಡಿತರು ಮತ್ತು ಅಶಕ್ತರಿಗೆ ನೀಡಿ ಮಾದರಿಯಾಗಿದ್ದಾರೆ.
Advertisement
ಹೌದು. ಕರಾವಳಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಬರ್ತಾ ಇದ್ದಂತೆ ಶುರು ಆಗೋದು ನಾಡ ಹುಲಿಗಳ ಅಬ್ಬರ. ಇಲ್ಲಿ ಹುಲಿವೇಷ ಇಲ್ಲದೆ ಯಾವುದೇ ಹಬ್ಬವೂ ನಡೆಯುವುದು ಕಡಿಮೆ. ಹುಲಿ ವೇಷ ಹಾಕುವವರು ಸಮಾಜಮುಖಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು (Mangaluru) ಹೊರವಲಯದ ತೊಕ್ಕೊಟ್ಟುವಿನಲ್ಲಿ ಹುಲಿ ವೇಷ ಹಾಕಿ ಕುಣಿದ ಯುವಕರು (Youths) ಅದರಿಂದ ದೇಣಿಗೆ ರೂಪದಲ್ಲಿ ಬಂದ 60ಸಾವಿರ ಹಣವನ್ನು ಕ್ಯಾನ್ಸರ್ ಪೀಡಿತರು ಮತ್ತು ಅಶಕ್ತರಿಗೆ ನೀಡಿದ್ದಾರೆ.
Advertisement
Advertisement
ತೊಕ್ಕೊಟ್ಟಲ್ಲಿ ನಡೆದ 2022ರ ಸಾಲಿನ ಮೊಸರು ಕುಡಿಕೆ ಉತ್ಸವದ ಶೋಭಾ ಯಾತ್ರೆಯಲ್ಲಿ ಉಳ್ಳಾಲ (Ullal) ಬೈಲಿನ ವೈದ್ಯನಾಥ ಫ್ರೆಂಡ್ಸ್ (ರಿ) ಹಾಗೂ ಟೀಮ್ ಛತ್ರಪತಿ ತಂಡವು ಹುಲಿ ವೇಷದ ಟ್ಯಾಬ್ಲೊ ಇಳಿಸಿ ಜನರನ್ನ ರಂಜಿಸಿತ್ತು. ಆ ದಿನ ಬಂದ ಹಣವನ್ನು ಸ್ವಂತಕ್ಕೆ ಬಳಸದೇ ಅಶಕ್ತರಿಗೆ ನೀಡಿದೆ. ಇದನ್ನೂ ಓದಿ: ವಿಧಾನ ಪರಿಷತ್‍ನಲ್ಲಿಂದು ಮತಾಂತರ ನಿಷೇಧ ವಿಧೇಯಕ ಮಂಡನೆ