– ವಿವಾದ ಬೆನ್ನಲ್ಲೇ `ಗಾಯಬ್’ ಪೋಸ್ಟ್ ಡಿಲೀಟ್
ನವದೆಹಲಿ: ಕಾಂಗ್ರೆಸ್‌ನಲ್ಲಿ ಈಗ ಮಾಯ ಮಂತ್ರದೇ ಚರ್ಚೆ. ಗಾಯಬ್ ಪೋಸ್ಟ್ ಪಾಕಿಸ್ತಾನದಲ್ಲಿ (Pakistan) ಫೇಮಸ್ ಆಗ್ತಿದ್ದಂತೆ ಇತ್ತ ಕಾಂಗ್ರೆಸ್ ವಿಲವಿಲ ಒದ್ದಾಡಿದೆ. ಇದೀಗ ಪೋಸ್ಟ್ ಡಿಲೀಟ್ ಮಾಡಿ, ಎಲ್ಲಾ ಬಾಯಿ ಮುಚ್ಕೊಂಡು ಇರಿ ಅಂತಾ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಖಡಕ್ ಎಚ್ಚರಿಕೆ ಕೊಟ್ಟಿದೆ.
ಪೆಹಲ್ಗಾಮ್ ದಾಳಿ (Pahalgam Terror Attck) ವಿಚಾರದಲ್ಲಿ ಮೋದಿ ಟೀಕಿಸುವ ಶರವೇಗದಲ್ಲಿ ಕಾಂಗ್ರೆಸ್ ಗಾಯಬ್ ಪೋಸ್ಟ್ ಹಾಕಿ ಈಗ ಗಾಯಬ್ ಗಾಯಬ್ ಅನ್ನುತ್ತಿದೆ. ಗಾಯಬ್ ಪೋಸ್ಟ್ ಬಳಸಿಕೊಂಡು ರಂಗಿನಾಟ ಆಡಿದ ಪಾಕಿಸ್ತಾನದ (Pakistan) ಕೇಕೆ ಕಾಂಗ್ರೆಸ್‌ಗೆ (Congress) ಹಿಂಬೆಂಕಿಯಾಗಿದೆ. ಈ ಬೆನ್ನಲ್ಲೇ ಕಾಂಗ್ರೆಸ್‌ನ ಕೆಲ ನಾಯಕರ ಆಕ್ಷೇಪದಿಂದ ಗಾಯಬ್ ಪೋಸ್ಟ್ ಡಿಲೀಟ್ ಮಾಡಲಾಗಿದ್ದು, ಎಲ್ಲಾ ನಾಯಕರು ಸಹ ಗಾಯಬ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ: ವಿವಾದ ಜೋರಾಗುತ್ತಿದ್ದಂತೆ ಕಾಂಗ್ರೆಸ್ ಗಾಯಬ್ ಪೋಸ್ಟರ್ ಡಿಲೀಟ್ – ಇಲ್ಲಿದೆ ಇನ್‌ಸೈಡ್ ಸ್ಟೋರಿ
ಕಾಂಗ್ರೆಸ್ ನಾಯಕರ ವಿವಾದಾತ್ಮಕ ಹೇಳಿಕೆಗಳು, ಪೋಸ್ಟ್‌ನಿಂದ ಎಐಸಿಸಿ ಹೈರಾಣಾಗಿದ್ದು, ಯಾವುದನ್ನ, ಯಾರನ್ನ ಸಮರ್ಥನೆ ಮಾಡ್ಕೋಬೇಕು ಅನ್ನೋದೇ ಅರ್ಥವಾಗದೇ ಹೋಗಿದೆ. ಪೆಹಲ್ಗಾಮ್ ವಿಚಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿ ಮಾತನಾಡಿದ್ರೂ ಕಾಂಗ್ರೆಸ್‌ಗೆ ಕುತ್ತು ಎಂಬುದು ಗೊತ್ತಿದೆ. ಹಾಗಾಗಿ ಎಲ್ಲಾ ನಾಯಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (K C Venugopal) ಬಹಿರಂಗ ಪತ್ರ ಬರೆದು ಎಚ್ಚರಿಕೆ ಕೊಟ್ಟಿದ್ದಾರೆ. ಪೆಹಲ್ಗಾಮ್ ವಿಚಾರದಲ್ಲಿ ಯಾರೂ ಅನಗತ್ಯ ಹೇಳಿಕೆ ಕೊಡಬಾರದು, ಕೊಟ್ಟರೆ ಶಿಸ್ತು ಕ್ರಮ ಎಂದು ವಾರ್ನಿಂಗ್ ನೀಡಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ವಿಷ ಕಾರುತ್ತಿದ್ದ ಅಫ್ರಿದಿ ಬಾಯಿ ಬಂದ್!
ಈ ನಡುವೆ ಎಐಸಿಸಿ ಸೂಚನೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸಹ ಎಚ್ಚೆತ್ತುಕೊಂಡಿದ್ದು, ಮಾಯ ಪೋಸ್ಟ್ ಡಿಲೀಟ್ ಮಾಡಿದೆ. ಅಲ್ಲದೇ ಕಾಂಗ್ರೆಸ್ ನಾಯಕರು ಸದ್ಯಕ್ಕೆ ಗಪ್ ಚುಪ್ ಆಗಿದ್ದಾರೆ. ಒಟ್ನಲ್ಲಿ ರಾಜಕೀಯ ರಣಮೇಳದಲ್ಲಿ ಮೋದಿ ಟಾರ್ಗೆಟ್ ಮಾಡಲು ಹೋದ ಗಾಯಬ್ ಪೋಸ್ಟ್ ಕಾಂಗ್ರೆಸ್‌ಗೆ ತಿರುಗುಬಾಣ ಆಗಿದ್ದು, ಇದೆಲ್ಲಾ ಬೇಕಿತ್ತಾ ಎಂಬ ಪ್ರಶ್ನೆಗಳಿಗೆ `ಕೈ’ ನಾಯಕರೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.