ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆಯೇ ರಾಜ್ಯಕ್ಕೆ ಆಗಮಿಸಿ ಪ್ರಚಾರ ಮಾಡುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರು, ಕಂಠೀರವ ಸ್ಟೂಡಿಯೋಗೆ ಹೋಗಿ ಕರ್ನಾಟಕದ ರತ್ನ ಡಾ. ರಾಜ್‍ಕುಮಾರ್ ಅವರ ಸಮಾಧಿಗೆ ನಮನ ಸಲ್ಲಿಸಿ ಬಂದಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಐಸ್ ಕ್ರೀಂ ಗೆ ರಾಹುಲ್ ಗಾಂಧಿ ಫಿದಾ!
Advertisement
ರಾಜ್ ಕುಮಾರ್ ಅವರ ಸಮಾಧಿಗೆ ಹೋಗಿ ಪುಷ್ಪಾರ್ಚನೆ ಸಲ್ಲಿಸಿದ್ದು, ಆ ಫೋಟೋವನ್ನು ಹಾಕಿ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂದು ಬರೆದ ಟ್ವೀಟ್ ಮಾಡಿದ್ದಾರೆ. ಜೊತೆಗೆ `ಕರ್ನಾಟಕದ ರತ್ನ ಡಾ. ರಾಜ್‍ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಮರ್ಪಿಸಿ ನನ್ನ ಗೌರವ ನಮನವನ್ನು ಸಲ್ಲಿಸಿದೆನು. ಅವರ ಜೀವನದ ಆದರ್ಶಗಳು ಪ್ರತಿಯೊಬ್ಬರಿಗೂ ಸದಾ ಸ್ಪೂರ್ತಿದಾಯಕ’ ಎಂದು ಬರೆದುಕೊಂಡಿದ್ದಾರೆ.
Advertisement
ರಾಹುಲ್ ಗಾಂಧಿ ಅವರು ಶಿವಾನಂದ ಸರ್ಕಲ್ ನಲ್ಲಿರುವ ರಿಚಿ ರಿಚ್ ಗೆ ಭೇಟಿ ನೀಡಿ, ಅಲ್ಲಿ ಐಸ್ ಕ್ರೀಂ ಸವಿದಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ.
Advertisement
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು"
ಕರ್ನಾಟಕದ ರತ್ನ ಡಾ. ರಾಜ್‍ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಮರ್ಪಿಸಿ ನನ್ನ ಗೌರವನಮನವನ್ನು ಸಲ್ಲಿಸಿದೆನು. ಅವರ ಜೀವನದ ಆದರ್ಶಗಳು ಪ್ರತಿಯೊಬ್ಬರಿಗೂ ಸದಾ ಸ್ಪೂರ್ತಿದಾಯಕ. pic.twitter.com/6ZszeZhI6m
— Rahul Gandhi (@RahulGandhi) May 9, 2018