ನವದೆಹಲಿ: ದೇಶಾದ್ಯಂತ ಕುತೂಹಲ ಮೂಡಿಸಿದ್ದ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ನಿರೀಕ್ಷೆಯಂತೆ ಪ್ರತಿಪಕ್ಷಗಳಿಗೆ ಸೋಲಾಗಿದ್ದು, ಇದೀಗ ಲೋಕಸಭಾ ಚುನಾವಣಾ ಸಮರ ಗೆಲ್ಲಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ವೈಎಲ್‍ಎಸ್(YLS) ಎಂಬ ಹೊಸ ಫಾರ್ಮೂಲವೊಂದನ್ನು ಸಿದ್ಧಪಡಿಸಿದ್ದಾರೆ.
ಈ ಮೂಲಕ ಮೋದಿಯನ್ನ ತಬ್ಬಿಕೊಂಡ ರಾಹುಲ್ ಮುಂದೊಂದು ದಿನ ತೊಡೆ ತಟ್ಟಿ ಪಂತಾಹ್ವಾನ ನೀಡೋದು ಗ್ಯಾರಂಟಿ ಆಗಿದೆ. ಹೀಗಾಗಿ ಲೋಕಸಭೆ ಚುನಾವಣೆ ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದು ರಾಹುಲ್, ಯುದ್ಧಕ್ಕೆ ಸಿದ್ಧರಾಗ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೈಎಲ್‍ಎಸ್ ಫಾರ್ಮೂಲದ ಮೂಲಕ ಗೆಲುವು ದೊರಕಿಸಿಕೊಡಬಹುದು ಎಂಬುದು ರಾಹುಲ್ ಗಾಂಧಿಯವರ ನಂಬಿಕೆಯಾಗಿದೆ. ಈಗಾಗಲೇ ದಿನೇಶ್ ಗುಂಡುರಾವ್, ಈಶ್ವರ್ ಖಂಡ್ರೆಗೂ ರಾಹುಲ್ ಅವರು ಇದೇ ಫಾರ್ಮುಲಾವನ್ನು ಬೋಧಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಅವಿಶ್ವಾಸ ನಿರ್ಣಯಕ್ಕೆ ಹೀನಾಯ ಸೋಲು: ವಿಶ್ವಾಸ ಗೆದ್ದ ಮೋದಿ!
Advertisement
Advertisement
ಏನಿದು ವೈಎಲ್‍ಎಸ್ ಫಾರ್ಮೂಲ?:
ವೈಎಲ್‍ಎಸ್ ಫಾರ್ಮುಲಾ ಅಂದರೆ ಯೂತ್ಸ್, ಲೇಡಿಸ್ ಆಂಡ್ ಸ್ಟೂಡೆಂಟ್ಸ್ ಫಾರ್ಮುಲಾವಾಗಿದೆ. ಈ ಸೂತ್ರವನ್ನು ದೇಶಾದ್ಯಂತ ಜಾರಿಗೆ ತರಲು ರಾಹುಲ್ ಹೊರಟಿದ್ದು, ರಾಜ್ಯದಲ್ಲಿ ಖಡಕ್ಕಾಗಿ ಇಂಪ್ಲಿಮೆಂಟ್ ಮಾಡುವಂತೆ ಸೂಚೆನ ನೀಡಿದ್ದಾರೆ ಎನ್ನಲಾಗಿದೆ.
Advertisement
ಪ್ರತಿ ಬೂತ್‍ನಲ್ಲಿ ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರ ತಂಡ ಸಿದ್ಧಪಡಿಸಿ, ಈ ಮೂಲಕ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಮೂಲಕ ಯುವ ಜನತೆ, ಮಹಿಳೆಯರ ಮನಸು ಗೆದ್ದರೆ ದೇಶ ಗೆಲ್ಲಬಹುದು ಎಂಬುದು ರಾಹುಲ್ ಐಡಿಯಾವಾಗಿದೆ. ಈ ಸಂಬಂಧ ಇಂದು ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ರಾಹುಲ್ ಭಾಷಣದ ವೇಳೆ ಮೋದಿ ನಕ್ಕಿದ್ದೇಕೆ?
Advertisement
PM Narendra Modi laughs after Rahul Gandhi says 'Pradhanmantri apni aankh meri aankh mein nahi daal sakte' #NoConfidenceMotion pic.twitter.com/qwXNt6PphM
— ANI (@ANI) July 20, 2018
ದೇಶಾದ್ಯಂತ ಕುತೂಹಲ ಮೂಡಿಸಿದ್ದ ಅವಿಶ್ವಾಸ ನಿರ್ಣಯ ಮಂಡನೆ ಶುಕ್ರವಾರ ಲೋಕಸಭೆಯಲ್ಲಿ ನಡೆದಿದ್ದು, ನಿರೀಕ್ಷೆಯಂತೆ ಪ್ರತಿಪಕ್ಷಗಳಿಗೆ ಸೋಲಾಗಿದೆ. ವಿಶ್ವಾಸಮತ ಸಾಧಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಯಶಸ್ವಿಯಾಗಿದೆ. ಬಹುಮತ ಸಾಬೀತಿಗೆ 226 ಮತ ಬೇಕಾಗಿತ್ತು. ಆದರೆ ಎನ್‍ಡಿಎ ಪರ 325 ಮತಗಳು ಚಲಾವಣೆಯಾದವು. ಕಾಂಗ್ರೆಸ್ ಮೈತ್ರಿಕೂಟದ ಪರವಾಗಿ ಕೇವಲ 126 ಮತ ಚಲಾವವಣೆಯಾದವು. ಹೀಗಾಗಿ 199 ಮತಗಳ ಅಂತರದಿಂದ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಗೆಲುವು ಸಾಧಿಸಿದೆ. ಇನ್ನು ಈ ವೇಳೆ ಸದನದಲ್ಲಿ ಒಟ್ಟು 451 ಸದಸ್ಯರು ಹಾಜರಿದ್ದರು. ಇನ್ನು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಮೋದಿ, ರಾಹುಲ್ ಗಾಂಧಿಯ ಎಲ್ಲಾ ಆರೋಪಕ್ಕೆ ಕೌಂಟರ್ ಕೊಟ್ಟಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿ ದೊಡ್ಡ ಸುಳ್ಳುಗಾರ- ರಾಹುಲ್ ಆರೋಪಕ್ಕೆ ಸಿಡಿದೆದ್ದ ಬಿಜೆಪಿ-ರಾಹುಲ್ ಗಾಂಧಿ ಮಾತಿಗೆ ನಕ್ಕ ಚೌಕಿದಾರ
https://www.youtube.com/watch?v=19lk2G642xM
Aaj poora desh dekh raha tha TV pe aankhon ka khel, kaise aankhen kholi jaa rahi hain, kaise bandh ki jaa rahi hain: PM Modi in Lok Sabha pic.twitter.com/aZlsPGdIGa
— ANI (@ANI) July 20, 2018