ನವದೆಹಲಿ: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಜೊತೆಗೆ ತಮ್ಮ ಮುಂದಿನ ಗುರಿಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.
This election is about those who are trying to destroy the Constitution and destroy democracy in this country vs. those who are trying to protect the constitution and protect democracy in this country.
Once this fight is won, we look after the interests of the vast majority of… pic.twitter.com/Fd3CIdhThn
— Congress (@INCIndia) April 5, 2024
Advertisement
ಪ್ರಣಾಳಿಕೆ ಬಿಡುಗಡೆಯ ಬಳಿಕ ಮಾತನಾಡಿದ ಅವರು, ವಿಪಕ್ಷ ನಾಯಕರನ್ನ ಜೈಲಿನಲ್ಲಿಟ್ಟು ಚುನಾವಣೆ ಮಾಡಲಾಗುತ್ತಿದೆ. ನಮ್ಮ ಪಕ್ಷದ ಖಾತೆಯನ್ನೇ ಸಂಪೂರ್ಣ ಮುಟ್ಟುಗೋಲು ಹಾಕಲಾಗಿದೆ. ಮಾಧ್ಯಮ ಸಂಸ್ಥೆಗಳನ್ನ ನಿಯಂತ್ರಿಸಲಾಗುತ್ತಿದೆ. ಹೀಗಾಗಿ ಮೋದಿಯನ್ನ (Narendra Modi) ತೆಗೆದು ಹಾಕುವುದೇ ನಮ್ಮ ಮುಂದಿರುವ ಗುರಿಯಾಗಿದೆ. ಯಾರಾದ್ರು ಭಯಪಡುತ್ತಿದ್ದಾರೆ ಎಂದರೆ ಅವರು ತಪ್ಪು ಮಾಡಿದ್ದಾರೆ ಅಂತ ಅರ್ಥ. ಆದರೆ ನಮಗೆ ಯಾವುದೇ ಭಯವಿಲ್ಲ ಎಂದರು.
Advertisement
Advertisement
ನಮ್ಮ ನಾಯಕರನ್ನೇ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು ಚಾರ್ಸೋ ಪಾರ್ ಅಂತಿದ್ದಾರೆ. ಮೋದಿ ಜನರ ನಡುವೆ ಹೋಗಲು ಆಗಲ್ಲ. ನಮ್ಮ ರಾಹುಲ್ ಗಾಂಧಿ ಜನರ ಮಧ್ಯೆ ಹೋಗಿದ್ದಾರೆ. ಆದರೆ ಜನರ ಮಧ್ಯೆ ಹೋಗುವುದಕ್ಕೆ ಮೋದಿಗೆ ಭಯವಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೇಶಾದ್ಯಂತ ಜಾತಿಗಣತಿ, ಯುವಕರಿಗೆ ಉದ್ಯೋಗದ ಜೊತೆ 1 ಲಕ್ಷ ವೇತನ – ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ
Advertisement
ಪ್ರಣಾಳಿಕೆ ಬಗ್ಗೆ: ಬಡವರಿಗಾಗಿ ನಮ್ಮ ಪ್ರಣಾಳಿಕೆಯನ್ನ (Congress Manifesto) ಅರ್ಪಣೆ ಮಾಡುತ್ತಿದ್ದೇವೆ. 16 ಸದಸ್ಯರ ಪ್ರಣಾಳಿಕೆ ಸಮಿತಿ ರಚನೆ ಮಾಡಿ ಪ್ರಣಾಳಿಕೆ ತಯಾರಿಸಲಾಗಿದೆ. ಭಾರತ ಜೋಡೊ ಯಾತ್ರೆಯಲ್ಲಿ 6 ನ್ಯಾಯಗಳ ಬಗ್ಗೆ ನಾವು ಪ್ರಸ್ತಾಪ ಮಾಡಿದ್ದೇವೆ. ಅದರಂತೆ ನಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಯುವ ನ್ಯಾಯಕ್ಕಾಗಿ ಒಬ್ಬ ಯುವಕನಿಗೆ ಒಂದು ಲಕ್ಷ, ನಾರಿ ನ್ಯಾಯದಿಂದ ವರ್ಷಕ್ಕೆ ಒಂದು ಲಕ್ಷ ನೀಡಲಾಗುವುದು. ಕಿಸಾನ್ ನ್ಯಾಯದ ಮೂಲಕ ರೈತರ ಸಾಲಮನ್ನಾ ಮತ್ತು ಎಂಎಸ್ ಸಿ, ಗರೀಬ್ ನ್ಯಾಯದ ಮೂಲಕ ಮನರೇಗಾ ಮೂಲಕ ಕೂಲಿಯನ್ನ 400 ರೂ. ಗೆ ಏರಿಕೆ ಮಾಡಲಾಗುವುದು ಎಂದರು.
#WATCH | Delhi: On the Congress manifesto, party president Mallikarjun Kharge says, "This manifesto of ours will be remembered as 'Nyay ka dastavez' in the political history of the country. The Bharat Jodo Nyaya Yatra, which was run under the leadership of Rahul Gandhi, focused… pic.twitter.com/3JfrYkvrZ0
— ANI (@ANI) April 5, 2024
ಹಿಸ್ಸೆದಾರಿ ನ್ಯಾಯದ ಮೂಲಕ ಎಲ್ಲಾ ಜಾತಿಯ ಪ್ರತಿವ್ಯಕ್ತಿಗೆ ಸಹಕಾರಿ, ದೇಶದಲ್ಲಿ ಎಲ್ಲಾ ಕಡೆ ಜಾತಿಜನಗಣತಿ ಮಾಡಲಾಗುವುದು. ನಾವು ಕೊಟ್ಟಿರೋ ಗ್ಯಾರಂಟಿಗಳನ್ನ ಮಾಡಿ ತೋರಿಸಿದ್ದೇವೆ. ಕರ್ನಾಟಕದಲ್ಲಿ, ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ಮಾಡಿ ತೋರಿಸಿದ್ದೇವೆ. ನಮಗೆ ಎಷ್ಟೇ ನಷ್ಟವಾದರೂ ಬಡ ಜನರಿಗಾಗಿ ಮಾಡಿ ತೊರಿಸಿದ್ದೇವೆ ಎಂದು ಖರ್ಗೆ ತಿಳಿಸಿದರು.