ಕಲಬುರಗಿ: ರಾತ್ರಿ ಎಲ್ಲರೂ ಮಟನ್ ತಿಂತೀರಿ. ಹಗಲೊತ್ತಲ್ಲಿ ಮಾಂಸಾಹಾರಿಗಳಿಗೆ ಬೈತೀರಿ. ಈ ಕೆಲಸವನ್ನು ಬಿಜೆಪಿ (BJP) ನಾಯಕರು ಮಾಡ್ತಾರೆ ಎಂದು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ಬರೀ ಜಗಳ ಹಚ್ಚಿಯೇ ವೋಟ್ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಗರಂ ಆದರು. ಬಜರಂಗದಳ ರದ್ದು ವಿಚಾರ ಕುರಿತು ಮಾತನಾಡಿ, ಅದರ ಬಗ್ಗೆ ಪ್ರಣಾಳಿಕೆ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಆ ಕುರಿತು ಚರ್ಚೆ ಮಾಡಲು ಹೋಗಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಜರಂಗ ಬಲಿ ಕೀ ಜೈ ಘೋಷಣೆ ಮಾಡಿ ತುಳುವಿನಲ್ಲಿ ಭಾಷಣ ಮಾಡಿದ ಮೋದಿ
Advertisement
Advertisement
ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಬಿಜೆಪಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಪ್ರತಿ ವಿರೋಧ ಪಕ್ಷದವರು ಸಹಜವಾಗಿ ಒಬ್ಬರ ಮೇಲೆ ಒಬ್ಬರು ಹೇಳ್ತಾರೆ. ಅದೇ ರೀತಿ ಕಾಂಗ್ರೆಸ್ ಪ್ರಣಾಳಿಕೆ ಜಾರಿ ಮಾಡಲು ಆಗಲ್ಲಾ ಅಂತ ಹೇಳ್ತಿದ್ದಾರೆ. ಕಳೆದ ಬಾರಿ ಕೂಡಾ ಇದೇ ರೀತಿ ಹೇಳಿದ್ದರು. ಆದರೆ ಕಳೆದ ಬಾರಿ ನಾವು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿದ್ದೆವು. ಬಜೆಟ್ ಅನುದಾನ, ಆದಾಯ ನೋಡಿಯೇ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಅವರು ಹೇಳ್ತಾ ಹೋಗ್ತಾರೆ. ಆದರೆ ನಾವು ಮಾಡಿ ತೋರಿಸುತ್ತಿದ್ದೇವೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.
Advertisement
Advertisement
ಪರೀಕ್ಷೆಗೂ ಮೊದಲೇ ಪರೀಕ್ಷೆ ಹೇಗೆ ಬರಿತ್ತೀರಿ ಅಂತ ಕೇಳಿದ್ರೆ ಹೇಗೆ. ಕೊಟ್ಟು ನೋಡಿ ಗೊತ್ತಾಗುತ್ತೆ. ನಾವು ಹೇಗೆ ಪ್ರಣಾಳಿಕೆ ಜಾರಿ ಮಾಡ್ತೇವೆ ಅಂತ. ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರಧಾನಿ ಮೋದಿ ಏನೂ ಕೊಡಲಿಲ್ಲ. ಆದರೆ ಇದೀಗ ಪ್ರಚಾರಕ್ಕೆ ಬರ್ತಿದ್ದಾರೆ. ನಾವು ಮಂಜೂರು ಮಾಡಿದ್ದ ರೈಲುಗಳಿಗೆ ಬಣ್ಣ ಬಳಿದು ಹೊಸ ರೈಲು ಬಿಟ್ಟರು. ಕೆಲವರಿಗೆ ಪ್ರಚಾರ ಬೇಕು. ಪ್ರಚಾರದಿಂದಲೇ ಎಲ್ಲಾ ಸಿಗುತ್ತೆ ಅಂತ ಅಂದುಕೊಂಡಿದ್ದಾರೆ. ಚುನಾವಣೆ ಅನ್ನೋದು ವಾರ್ ಇದ್ದಂತೆ. ನನಗೆ ಹೀಗಂದ್ರು, ಹಾಗಂದ್ರು ಅಂತ ಅಳುತ್ತಾ ಕುಳಿತುಕೊಳ್ಳಲ್ಲ. ಇದೇ ಬಿಜೆಪಿಯವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ಠಕ್ಕರ್ – ಗುರುವಾರ ಏಕಕಾಲಕ್ಕೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಣ
ಮುಂಜಾನೆಯಿಂದ ಸಂಜೆವರೆಗೆ ಅಳ್ತಾನೇ ಇರೋದು ಪ್ರಧಾನಿ ಕೆಲಸನಾ? ನಾನು ಕೆಳವರ್ಗದವನು. ಹೀಗಾಗಿ ನನ್ನ ತುಳಿಯುತ್ತಿದ್ದಾರೆ ಅಂತ ಮೋದಿ ಹೇಳುತ್ತಾರೆ. ನಾನು ಮೋದಿಗಿಂತ ಜಾತಿ ವ್ಯವಸ್ಥೆಯಲ್ಲಿ ಕೆಳಗೆ ಇದ್ದೀನಿ. ನಾನು ದಲಿತ ಜಾತಿಗೆ ಸೇರಿದವನು. ಮೋದಿ ಮತ್ತು ಅಮಿತ್ ಶಾ ಅವರು ಯಾವ ರಾಜ್ಯಕ್ಕೆ ಎಷ್ಟು ಸಲ ಹೋಗಿದ್ದಾರೆ? ಅವರು ಹಣ ಬಲ, ಮಸಲ್ ಪವರ್ ಹೊಂದಿದ್ದಾರೆ ಎಂದು ಕುಟುಕಿದರು.