ಬೆಂಗಳೂರು: ಇವತ್ತು ನಾನು ಇರ್ತೀನಿ ಹೋಗ್ತೀನಿ, ಮೋದಿ (Modi) ಇರ್ತಾರೆ ಹೋಗ್ತಾರೆ, ಅಮಿತ್ ಶಾ ಇರ್ತಾರೆ ಹೋಗ್ತಾರೆ. ಆದ್ರೆ ಅಂತಿಮವಾಗಿ ನಮಗೆ ದೇಶ ರಕ್ಷಣೆ ಮುಖ್ಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದರು.
ಬೆಂಗಳೂರಿನ ಆರ್.ಟಿ ನಗರದ ತರಳಬಾಳು ಮಠದ ಸಭಾಂಗಣದಲ್ಲಿ ನಡೆದ ʻಸಂಜೆಗೊಂದು ನುಡಿ ಚಿಂತನʼ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ನಿವೃತ್ತ ನ್ಯಾ. ಶಿವರಾಜ್ ಪಾಟೀಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ತಡೆಯಲು ಸಾಧ್ಯನಾ? – ಜಲತಜ್ಞ ರಾಜಾರಾವ್ ಹೇಳಿದ್ದೇನು?
ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಮೊದಲು ದೇಶ ಮುಖ್ಯ, ಧರ್ಮ ಜಾತಿ ಅಂತಾ ಹೇಳೋದು ಸರಿಯಲ್ಲ. ನಾನು ಇರ್ತೇನೆ ಹೋಗ್ತೀನಿ, ಮೋದಿ ಇರ್ತಾರೆ ಹೋಗ್ತಾರೆ, ಅಮಿತ್ ಶಾ ಇರ್ತಾರೆ ಹೋಗ್ತಾರೆ. ಆದ್ರೆ ಅಂತಿಮವಾಗಿ ನಮಗೆ ದೇಶ ರಕ್ಷಣೆ ಮುಖ್ಯ ಎಂದು ತಿಳಿಸಿದರು. ಇದನ್ನೂ ಓದಿ: ಪಾಕ್ ಪ್ರಜೆಗಳನ್ನು ಕಳುಹಿಸಲು ಕೇಂದ್ರದಿಂದ ಅಡ್ವೈಸರಿ, ಪತ್ತೆಹಚ್ಚಲು ಎಸ್‌ಪಿಗಳಿಗೆ ಸೂಚನೆ: ಪರಮೇಶ್ವರ್
ಉಗ್ರರ ವಿರುದ್ಧ ಕಾರ್ಯಾಚರಣೆಗೆ ಬೆಂಬಲ ಕೊಡ್ತೀವಿ ಅಂತ ಈಗಾಗಲೇ ನಾವು ಹೇಳಿದ್ದೇವೆ. ದೇಶಕ್ಕಾಗಿ ಹೋರಾಟ ಮಾಡ್ತೀವಿ ಅಂದರೆ ಅದಕ್ಕೆ ನಮ್ಮ ಬೆಂಬಲ ಇದ್ದೆ ಇರುತ್ತದೆ. ಅವ್ರು ನಮ್ಮೆಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೋಗಬೇಕು. ಈಗಾಗಲೇ ಬೇರೆ ಬೇರೆ ರೀತಿಯಲ್ಲಿ ಮಾತಾಡ್ತಿದ್ದಾರೆ ಅದು ಸರಿಯಲ್ಲ. ಆ ಮೀಟಿಂಗ್ ನಲ್ಲಿ ಏನು ನಡೀತು ಅಂತಾ ಅದನ್ನು ಹೇಳಿದ್ದೇನೆ. ದೇಶದ ಹಿತದೃಷ್ಟಿಯಿಂದ ಏನು ಮಾತಾಡಬೇಕೋ ಅದನ್ನು ಮಾತ್ರ ಮಾತಾಡ್ತಿದ್ದೇವೆ. ಬೇರೆ ಎಲ್ಲವನ್ನೂ ಹೇಳೋದಕ್ಕೆ ಆಗೋದಿಲ್ಲ ಎಂದು ತಿಳಿಸಿದ್ರು. ಇದನ್ನೂ ಓದಿ: ಪ್ರಧಾನ ಮಂತ್ರಿಗಳ ಈ ಆಟಿಟ್ಯೂಡ್ ಸರಿಯಿಲ್ಲ: ಮಲ್ಲಿಕಾರ್ಜುನ ಖರ್ಗೆ ಕಿಡಿ